ಸಂಸ್ಕøತ ಭಾಷೆ ಕಲಿತರೆ ಇತರೆ ಭಾಷೆ ಕಲಿಕೆ ಸುಲಭ

ಚಾಮರಾಜನಗರ, ಮಾ. 22- ಸಂಸ್ಕøತ ಭಾಷೆಯನ್ನು ಕಲಿತರೆÀ ಇತರೇ ಭಾಷೆಗಳನ್ನು ಸಲೀಸಾಗಿ ತಿಳಿದುಕೊಂಡು ಓದುವುದು ಮತ್ತು ಮಾತನಾಡುವುದನ್ನು ಕಲಿಯಬಹುದಾಗಿದೆ ಎಂದು ಬಿಎಸ್‍ವಿ ಪ್ರತಿಷ್ಠಾನದ ಅಧ್ಯಕ್ಷ ವೆಂಕಟನಾಗಪ್ಪಶೆಟ್ಟಿ ತಿಳಿಸಿದರು.
ಅವರು ನಗರದ ರೋಟರಿ ಭವನದಲ್ಲಿ ಬೆಂಗಳೂರಿನ ಸಮ್ಯಕ್, ಶ್ರೀ ರಾಮಶೇಷ ಪಾಠಶಾಲಾ ಟ್ರಸ್ಟ್ ಹಾಗೂ ರೋಟರಿ ಸಂಸ್ಥೆಯ ಸಹಯೊಗದಲ್ಲಿ ಭಾನುವಾರ ನಡೆದ ಸಂಸ್ಕøತ ಪ್ರತಿಭಾ ಪುರಸ್ಕಾರಃ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕøತ ವಿಷಯದಲ್ಲಿ ಹೆಚ್ಚು ಅಂಕಗಳಿಸಬಹುದು ಎಂಬ ಭಾವನೆಯಲ್ಲಿ ಸಂಸ್ಕøತವನ್ನು ಆಯ್ಕೆ ಮಾಡಿಕೊಳ್ಳುವುದನ್ನು ಬಿಡಬೇಕು ಎಂದು ಕರೆ ನೀಡಿದರು.
ಈ ನಿಟ್ಟಿನಲ್ಲಿ ಬೆಂಗಳೂರಿನ ಸಮ್ಯಕ್ ಸಂಸ್ಥೆಯವರು ಸಂಸ್ಕøತ ಭಾಷೆಯನ್ನು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕಲಿಯಬೇಕು ಎಂಬ ವಿಚಾರದಲ್ಲಿ ಶ್ರಮ ವಹಿಸುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಿ, ಇತರೇ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಹರವೆ ಮಠದ ಶ್ರೀ ಸರ್ಪಭೂಷಣಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವದ ಗಮನ ಸೆಳೆದಿರುವ ಸಂಸ್ಕøತ ಭಾಷೆ ಇತರೆ ಭಾಷೆಗಳಿಗೆ ತಾಯಿ ಭಾಷೆಯಾಗಿದೆ. ಸಂಸ್ಕøತ ಮತ್ತು ಪರಂಪರೆಯನ್ನು ಉಳಿಸುವ ಪ್ರಯತ್ನ ವಿದ್ಯಾರ್ಥಿಗಳ ದಿಸೆಯಿಂದ ನಡೆಯಬೇಕಾಗಿದೆ ಎಂದು ತಿಳಿಸಿದರು.
ಸಂಸ್ಕøತ ಶತಮಾನಗಳ ಹಿಂದಿನ ಭಾಷೆಯಾಗಿದೆ. 10 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ದೇಶದ ಸಂಸ್ಕøತಿಯನ್ನು ವಿಶ್ವದ್ಯಾಂತ ಬಿಂಬಿಸುವ ನಮ್ಮ ಸಂಸ್ಕøತವನ್ನು ವಿದ್ಯಾರ್ಥಿಗಳು ವ್ಯಾಸಂಗ ಮಾಡುವುದರಿಂದ ಅವರಲ್ಲಿ ಸುಸಂಸ್ಕøತ ವಾಗಿ ಜೀವನ ರೂಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಂಸ್ಕøತ ಭಾಷೆಯನ್ನು ಬಳಕೆ ಮಾಡಲು ಮುಂದಾಗಬೇಕು ಎಂದರು.
ಸಂಸ್ಕøತ ಭಾಷೆ ಇತರೇ ಭಾಷೆಗಳಿಗೆ ತಾಯಿ ಇದ್ದಂತೆ, ಈಗ ಈ ಭಾಷೆಯನ್ನು ದೇವರ ನಾಮ ಹಾಗೂ ಪುರೋಹಿತ್ಯದಲ್ಲಿ ಮಾತ್ರ ಬಳಕೆಯಾಗುತ್ತಿದೆ. ಸಂಸ್ಕøತ ಒಂದು ವರ್ಗಕ್ಕೆ ಸಿಮೀತ ಎಂಬ ಭಾವನೆ ಇದೆ. ಹೀಗಾಗಿ ಈ ಭಾವನೆಯನ್ನು ಹೋಗಲಾಡಿಸುವ ದಿಕ್ಕಿನಲ್ಲಿ ಸಂಸ್ಕøತವನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲಿ ಒಂದು ಭಾಷೆಯಾಗಿ ಸೇರ್ಪಡೆ ಮಾಡಲಾಗಿದೆ. ನಮ್ಮ ಪ್ರಾಚೀನ ಭಾಷೆಯನ್ನು ಕಲಿತು ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಬೇಕು. ಈಗ ಹೆಚ್ಚು ಅಂಕಗಳನ್ನು ಪಡೆದವರು ಮುಂದಿನ ದಿನಗಳಲ್ಲಿ ಸಂಸ್ಕøತವನ್ನು ಅಧ್ಯಯನ ಮಾಡಿ ಉನ್ನತ ಪದವಿಗಳನ್ನು ಪಡೆದುಕೊಳ್ಳಬೇಕು ಎಂದು ಸ್ವಾಮೀಜಿ ತಿಳಿಸಿದರು.
ಶ್ರೀರಾಮಶೇಷ ಪಾಠಶಾಲೆಯ ಪ್ರಾಚಾರ್ಯ ಪ್ರದೀಪಕುಮಾರ್ ದೀಕ್ಷೀತ್ ಮಾತನಾಡಿ, ಸಂಸ್ಕøತ ಕಲಿಕೆಯಿಂದ ವ್ಯಕ್ತಿತ್ವ ವಿಕಸನವಾಗುತ್ತಿದೆ. ಮಹಾಭಾರತ, ರಾಮಯಾಣದಂತ ಮಹಾಕಾವ್ಯಗಳು ಹಾಗು ಇತರೇ ಸಾಹಿತ್ಯಗಳು ಸೃಷ್ಟಿಯಾಗಿರುವುದು ಸಂಸ್ಕøತ ಭಾಷೆಯಲ್ಲಿ. ಹೀಗಾಗಿ ಸಂಸ್ಕøತ ಭಾಷೆಯಲ್ಲಿ ಆರೋಗ್ಯ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಾಗಿದೆ. .ಮುಂದಿನ ದಿನಗಳಲ್ಲಿ ಸಂಸ್ಕøತ ಭಾಷೆಗೆ ಹೆಚ್ಚಿನ ಮಹತ್ವ ಬರುತ್ತದೆ. ಸಂಸ್ಕøತ ಪಾಂಡಿತ್ಯ ಪಡೆದವರಿಗೆ ಬೇಡಿಕೆ ಹೆಚ್ಚುತ್ತದೆ ಎಂದು ಭವಿಷ್ಯ ನುಡಿದರು.
ಸಮಕ್ಯ್ ಸಂಸ್ಥೆಯ ಅಧ್ಯಕ್ಷ ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪದ್ದತಿಗಳು ಪುರಾತನ ಕಾಲದ್ದಾಗಿತ್ತು. ನಮ್ಮ ದೇಶದ ಪರಂಪರೆಯಲ್ಲಿ ಕರಗತವಾಗಿದ್ದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪದ್ದತಿ ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದೆ. ವಿಶ್ವಾದ್ಯಂತ ಯೋಗ, ಆರ್ಯುವೇಧ ಮತ್ತು ಪ್ರಕೃತಿ ಚಿಕಿತ್ಸೆಗೆ ಹೆಚ್ಚಿನ ಅದ್ಯತೆ ದೊರಯುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಕøತಿ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಕøತದಲ್ಲಿ 125ಕ್ಕೆ ಗರಿಷ್ಟ 115ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ 48 ಮಂದಿ ವಿವಿಧ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಶ್ರೀ ಕಾಳಿಕಾಂಬ ದೇವಸ್ಥಾನ ಟ್ರಸ್ಟ್‍ನ ಶಂಕರ್, ರೋಟರಿ ಸಂಸ್ಥೆಯ ಕಾರ್ಯದರ್ಶಿ ಚಂದ್ರಪ್ರಭಜೈನ್, ಸಮ್ಯಕ್ ಸಂಸ್ಥೆಯ ಸಂಯೋಜಕ ಅರುಣïಕುಮಾರ್, ಕಾರ್ಯದರ್ಶಿ ವೀರಭದ್ರ, ಉಪಾಧ್ಯಕ್ಷ ಬಸವರಾಜು, ಸಂಸ್ಕøತ ಶಿಕ್ಷಕರಾದ ಅಭಿಲಾಷ ನಾರಾಯಣ, ಅಜಯಕುಮಾರ್, ಎಸ್. ನಂದೀಶ್ ವಿಶ್ವಕರ್ಮ ಮೊದಲಾಧವರು ಇದ್ದರು.