ಸಂಸ್ಕøತಿ, ಧರ್ಮ ಹಾಗೂ ಇತಿಹಾಸದ ಬಗ್ಗೆ ಪ್ರತಿಯೊಬ್ಬರು ದೃಢ ಜ್ಞಾನವನ್ನು ಪಡೆಯಬೇಕು: ಶೃಂಗೇರಿಶ್ರೀ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.31- ಸಂಸ್ಕøತಿ, ಪರಂಪರೆ, ಧರ್ಮ ಹಾಗೂ ಇತಿಹಾಸದ ಬಗ್ಗೆ ಪ್ರತಿಯೊಬ್ಬರು ದೃಢ ಜ್ಞಾನವನ್ನು ಪಡೆಯಬೇಕು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧು ಶೇಖರ ಭಾರತಿ ಸ್ವಾಮಿಗಳವರು ತಿಳಿಸಿದರು.
ಅವರು ಹೆಬ್ಬಸೂರಿನಲ್ಲಿ ನಡೆಯುತ್ತಿರುವ ಋಗ್ವೇದ ಸಂಹಿತಯಾಗ, ಶತಚಂಡಿಕಾಯಾಗದ ಪೂರ್ಣಾಹುತಿ ಹಾಗೂ ಶಾರದಾ ಕೃಪ ಉದ್ಘಾಟನೆ ಅನುಗ್ರಹ ಭಾಷಣ ನೆರವೇರಿಸಿ ಮಾತನಾಡುತ್ತಾ, ಅತ್ಯಂತ ಪವಿತ್ರವಾದ ಗ್ರಂಥ ಭಗವದ್ಗೀತೆ. ಭಗವದ್ಗೀತೆಯಲ್ಲಿ ಭಗವಂತ ಉಪದೇಶ ಮಾಡಿದ್ದಾರೆ. ಆತ್ಮವೇ ಬಂಧುವೂ, ಶತ್ರುವೂ ಆಗಿದೆ. ಹಿತವನ್ನು ಉಂಟು ಮಾಡುವವರು ಬಂಧುಗಳು. ಉತ್ತಮ ಕೆಲಸವನ್ನು ಮಾಡಬೇಕು. ಆತ್ಮಕ್ಕೆ ನಾಶಗೊಳಿಸುವ ಅಥವಾ ದುಃಖತರುವ ಕಾರ್ಯವನ್ನು ಮಾಡಬಾರದು ನಮಗೆ ನಾವೇ ಶತ್ರುವಾಗಿ ಆತ್ಮದ್ರೋಹವನ್ನು ಮಾಡಿಕೊಳ್ಳುತ್ತಿದ್ದೇವೆ. ಆತ್ಮದ್ರೋಹದ ಕಾರ್ಯ ಮಾಡಬಾರದು. ಆತ್ಮದ್ಧಾರದ ಪ್ರಮುಖ ಮಾರ್ಗ ಧರ್ಮಾಚರಣೆ . ಧರ್ಮದ ಆಚರಣೆಗಳಿಂದ ಭಗವಂತನ ಆರಾಧನೆ ಮತ್ತು ಉಪಕಾರ ಮಾಡುವ ಗುಣಗಳು ಸಮೃದ್ಧಿ ಯಾಗುವುದು. ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬೇಕು. ಸಮಾಜಕ್ಕೆ ತೊಂದರೆ ಮಾಡದೆ ಆತ್ಮದ ಉದ್ಧಾರವಾಗುವ ಕಾರ್ಯವನ್ನು ಮಾಡಬೇಕು. ಧರ್ಮದ ಮಹತ್ವವನ್ನು ಮಕ್ಕಳಿಗೆ ಚೆನ್ನಾಗಿ ಹೇಳಬೇಕು. ಮಕ್ಕಳಲ್ಲಿ ದೃಢವಾದ ಜ್ಞಾನವನ್ನು ಬೆಳೆಸುವುದರಿಂದ ಸಮಾಜ ಸದೃಢವಾಗುತ್ತದೆ. ಧಾರ್ಮಿಕ ಆಚರಣೆಗಳು ಅತ್ಯಂತ ಅವಶ್ಯಕವಾಗಿದೆ. ಪ್ರತಿಯೊಬ್ಬರು ಜ್ಞಾನವಂತರಾಗಿ ಅಪಾರವಾದ ಜ್ಞಾನವನ್ನು ತಿಳಿಯಬೇಕು. ಹೊಸ ವಿಷಯಗಳು ತಿಳಿದಾಗ ಸಂದೇಹಗಳು ಸಹಜ. ಸರಿಯಾದ ವ್ಯಕ್ತಿಗಳಿಂದ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಧರ್ಮಾಚರಣೆಯನ್ನು ಶಾಸ್ತ್ರವು ಪ್ರಮಾಣೀಕರಿಸಿದೆ. ಶಾಸ್ತ್ರಗಳು ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸಿದೆ. ವೇದ, ಪುರಾಣ, ಇತಿಹಾಸ, ಸ್ಮೃತಿಗಳಿಂದ ಅಪಾರವಾದ ಕರ್ತವ್ಯಗಳು ತಿಳಿದಿವೆ. ಒಳ್ಳೆಯ ಕೆಲಸಗಳಿಂದ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ. ಧರ್ಮ ಉಳಿವಿಗಾಗಿ ಶ್ರೀ ಶಂಕರಭಗವದ್ಪಾದರ ಅವತಾರವಾಯಿತು. ಭಗವಂತತನ್ನ ಇಚ್ಛಾನುಸಾರ ರೂಪಧಾರಣೆ ಮಾಡುತ್ತಾನೆ. ಆ ಮೂಲಕ ಕಾಲಕಾಲಕ್ಕೆ ಅಧರ್ಮಗಳನ್ನು ನಾಶಗೊಳಿಸುತ್ತಾರೆ. ಭಗವಂತನ ಉಪದೇಶಗಳು ನಮಗೆ ಮಾರ್ಗದರ್ಶಕವಾಗಿದೆ. ಆದಿ ಶಂಕರಾಚಾರ್ಯರು ಆತ್ಮದಾರಕ್ಕೆ ವಿಶೇಷ ಉಪದೇಶವನ್ನು ಮಾಡಿದ್ದಾರೆ. ಶಂಕರರು ಇಲ್ಲದಿದ್ದಲ್ಲಿ ಜಗತ್ತಿನಲ್ಲಿ ಧರ್ಮದ ಆಚರಣೆ ಸಾಧ್ಯವಾಗುತ್ತಿರಲಿಲ್ಲ. ಧರ್ಮ ಪ್ರಚಾರ ಮಾರ್ಗ ಸ್ಥಿರವಾಗಿರಬೇಕು. ಗುರುಗಳು ಜಗತ್ತಿಗೆ ಮಾರ್ಗ ನೀಡಿದ್ದಾರೆ. ಭಾರತದ ನಾಲ್ಕು ದಿಕ್ಕುಗಳಲ್ಲೂ ಮಠಗಳನ್ನು ಸ್ಥಾಪಿಸಿ ಸಂಸ್ಕೃತಿ ಪರಂಪರೆ, ಧರ್ಮದ ತಿಳುವಳಿಕೆಯನ್ನು ನೀಡಲಾಗುತ್ತಿದೆ. ಸಮಾಜದಲ್ಲಿ ಅಸಂಬದ್ಧವಾದ ವಿಷಯಗಳು ಆಗಾಗ್ಗೆ ಪ್ರಕಟವಾಗುತ್ತದೆ .ಅದಕ್ಕೆ ಪರಿಪಕ್ವವಾದ ಬುದ್ದಿ ಅಗತ್ಯವೆಂದರು. ಪ್ರತಿಯೊಂದಕ್ಕೂ ಯೋಗವಾಸಿಸ್ಟ್ಟ ಗ್ರಂಥದಲ್ಲಿ ವಶಿಷ್ಠರು ಪರಿಪೂರ್ಣವಾದ ವಿಚಾರವನ್ನು ತಿಳಿಸಿದ್ದಾರೆ. ಅದರ ಅಧ್ಯಯನ ಅಗತ್ಯವಿದೆ. ಜೀವನ ಆಚರಣೆ ಶಾಸ್ತ್ರ ಉಪದೇಶಗಳಿಂದ ಆಗಬೇಕು. ಋಷಿಗಳು ಮಹಾಋಷಿಗಳು, ಜ್ಞಾನಿಗಳು ತಪಸ್ವಿಗಳಿಂದ ಅಸಾಧ್ಯವಾದದ್ದು ಆಗುತ್ತದೆ. ಶ್ರೇಷ್ಠವಾದಧಾರ್ಮಿಕ ವಿಚಾರಧಾರೆಗಳನ್ನು ದೃಢವಾಗಿ ಶಕ್ತಿಯುತವಾಗಿ ನಾವು ತಿಳಿದುಕೊಂಡು ಪ್ರತಿಯೊಂದು ವಿಚಾರವನ್ನು ಮಕ್ಕಳಲ್ಲಿ ತಿಳಿಸಬೇಕು ಎಂದು ತಿಳಿಸುತ್ತಾ ಚಾಮರಾಜನಗರ ಜಿಲ್ಲೆ, ಕೃಷಿ ಪ್ರಧಾನವಾಗಿದ್ದು ಭಗವಂತ ಸರ್ವರೀತಿಯಲ್ಲಿಯೂ ಸಮೃದ್ಧಿಯನ್ನು ನೀಡಲಿ ಎಂದು ಆಶಿಸಿದರು. ಶ್ರೀ ವಿಧುಶೇಖರ ಭಾರತೀರವರಿಗೆ ಭಿನ್ನವತ್ತಳೆ, ಶಾರದಾಂಬ ಪುತ್ತಳಿಯನ್ನು ನೀಡಲಾಯಿತು
ನಿಕಟಪೂರ್ವ ಶಾರದಾ ಪೀಠದ ಆಡಳಿತ ಅಧಿಕಾರಿ ಪದ್ಮಶ್ರೀ ಗೌರಿಶಂಕರವರನ್ನು ಗೌರವಿಸಿ ಅಭಿನಂದಿಸಲಾಯಿತು. ಹಾಲಿ ಆಡಳಿತ ಅಧಿಕಾರಿ ಪಿ.ಎ. ಮುರಳಿರವರನ್ನು ಅಭಿನಂದಿಸಿ ಸ್ವಾಗತಿಸಲಾಯಿತು. ಸಂಸ್ಕೃತ ವಿದ್ವಾಂಸರಾದ ಟಿವಿ ಸತ್ಯನಾರಾಯಣ, ಶ್ರೀಧರ್ ಪ್ರಸಾದ್‍ಎಚ್.ವಿ.ರಾಜೀವ್, ಸುಭಾμï, ನಾಗರಾಜು, ಮಧುಸೂದನ್, ಭೋಜರಾಜ್, ವೆಂಕಟಶೇಷಯ್ಯ ಶ್ರೀಪತಿ, ಶ್ರೀರಂಗ ಉಪಸ್ಥಿತರಿದ್ದರು. ಮೈಸೂರು ಕೀರ್ತನ ಅಮೋಘವಾಗಿ ಪ್ರಾರ್ಥಿಸಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷಜಿ.ಎಂ. ಹೆಗ್ಡೆ, ಕಾರ್ಯದರ್ಶಿ ಸುರೇಶ್ ಎನ್‍ಋಗ್ವೇದಿ, ಖಜಾಂಚಿ ಬಾಲಸುಬ್ರಹ್ಮಣ್ಯ, ನಾಗರಾಜು, ಕೇಶವಮೂರ್ತಿ. ಪ್ರದೀಪ್ ಅಜಯ ಜಗದ್ಗುರುಗಳಿಗೆ ಫಲ ಸಮರ್ಪಿಸಿ ಗೌರವಿಸಿದರು.