ಸಂಸ್ಕøತಿ ಉಳಿಸುವಲ್ಲಿ ತಾಯಂದಿರ ಜವಾಬ್ದಾರಿ ಅಧಿಕ


ಗೋಕಾಕ,ಏ.21: ಭಾರತೀಯ ಮೂಲ ಸಂಸ್ಕøತಿ, ಆಚರಣೆ ಮತ್ತು ಪರಂಪರೆಗಳು ಉಳಿಸುವಲ್ಲಿ ತಾಯಂದಿರಜವಾಬ್ದಾರಿಅಧಿಕವಿದೆ' ಎಂದು ನಾಟಕಕಾರ ಪ್ರೊ. ಬಿ.ಆರ್.ಪೊಲೀಸ್‍ಪಾಟೀಲ ಅಭಿಪ್ರಾಯಪಟ್ಟರು. ಹಿಂದು ಮುಸ್ಲಿಂ ಸೌಹಾರ್ದತೆಯ ಸುಕ್ಷೇತ್ರ ಸಾವಳಗಿಯಜಗದ್ಗುರು ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಪೀಠದಲ್ಲಿಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದಸಾಹಿತ್ಯ, ಸಂಸ್ಕøತಿ ಸೌರಭಕಾರ್ಯಕ್ರಮದಲ್ಲಿಎಂಥಾಚೆಂದಿತ್ತ ಹಿಂದೂಸ್ತಾನ’ ವಿಷಯಕುರಿತುಉಪನ್ಯಾಸ ನೀಡಿದಅವರುಎಲ್ಲಿ ಮಹಿಳೆಯರು ಜಾಗೃತರಾಗಿರುತ್ತಾರೆಅಲ್ಲಿ ಸಮಾಜದ ಸ್ವಾಸ್ಥ್ಯವಿರುತ್ತದೆಎಂದರು.
ಸತ್ಯ, ಪ್ರಾಮಾಣಿಕತೆಗಳೆಲ್ಲ ದೂರವಾಗುತ್ತಲಿವೆ. ಹಣ, ಅಧಿಕಾರ, ವ್ಯಸನ ಹೀಗೆ ಹತ್ತು ಹಲವಾರು ದುರಾಲೋಚನೆಗಳಿಂದ ದೇಶವುಜರ್ಜರಿತವಾಗುತ್ತಲಿದೆ.ಸಾಧು, ಸಂತರು, ಸತ್ಪುರುಷರು ಬಾಳಿ, ಬೆಳಗಿದ ಸುಂದರ ಮೂಲ ಭಾರತವನ್ನು ಉಳಿಸಿಕೊಳ್ಳುವುದು ಇಂದಿನ ಅವಶ್ಯಕತೆಇದೆಎಂದರು.
ಬಿ.ಆರ್.ಪೊಲೀಸ್‍ಪಾಟೀಲ ಅವರು ಲಾವಣಿ, ತತ್ವಪದಗಳನ್ನು ಸುಶ್ರಾವ್ಯವಾಗಿ ಹಾಡಿಒಂದುಗಂಟೆಯ ಕಾಲ ಸೇರಿದ ಸಹಸ್ರಾರುಜನರನ್ನು ಮಂತ್ರಮುಗ್ದರನ್ನಾಗಿಸಿದರು.
ಸಾನ್ನಿಧ್ಯವಹಿಸಿದ್ದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಅವರು ಮಾತನಾಡಿದರು.
ಚಿತ್ರದುರ್ಗದ ವಿಶಾಲಾಕ್ಷಿ ಶಾಂಬಶಿವಯ್ಯ ಕಿತ್ತೂರ ಚನ್ನಮಳ ಕುರತುಕವಿತೆ ವಾಚನ ಮಾಡಿದರು.
ಗದಗದ ವೆ ಚನ್ನವೀರಸ್ವಾಮಿ ಶ್ರೀ ಶಿವಲಿಂಗೇಶ್ವರ ಪುರಾಣವನ್ನು ಹೇಳಿದರು ಗದಗದ ವೀರೇಶಕಿತ್ತೂರಅವರಗಾಯನವುಎಲ್ಲರ ಗಮನಸೆಳೆಯಿತು. ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ರೋಹಿಣಿ ಹಾಗೂ ಶಿಕ್ಷಕ ಎಂ.ಎಸ್. ತೋಡಕರ ನಿರೂಪಿಸಿದರು.