ಸಂಸ್ಕೃತ ಭಾಷೆ ಪ್ರಾಥಮಿಕ ಹಂತದಲ್ಲೇ ಕಲಿಸಲು ಸಲಹೆ

ಚಿತ್ರದುರ್ಗ. ಸೆ.೮; ಸಂಸ್ಕೃತ ಭಾಷೆಯನ್ನು ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕಲಿಸಿದರೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಸಂಸ್ಕೃತ ಭಾರತಿ ಉತ್ತರ ಪ್ರಾಂತ ಸಾಹಿತ್ಯ ಪ್ರಮುಖರಾದ ಚಂದ್ರಶೇಖರ ಶಾಸ್ತ್ರೀಯವರು ತಿಳಿಸಿದರು. ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಿವಮೊಗ್ಗ, ವಾಸವಿ ಅಕಾಡೆಮಿ ಶಿವಮೊಗ್ಗ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಶಿವಮೊಗ್ಗ  ಇವರ ಸಂಯುಕ್ತ ಆಶ್ರಯದಲ್ಲಿ  ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕರ್ನಾಟಕದ ಕಟ್ಟಕಡೆಯ ಗಡಿ ಭಾಗದ ಅಗಸನೂರು ಗ್ರಾಮದಲ್ಲಿರುವ ಶೈನ್ ಸ್ಟಾರ್ ಪಬ್ಲಿಕ್ ಆಂಗ್ಲ ಮಾದ್ಯಮ ಶಾಲೆಯಲ್ಲಿಸಂಸ್ಕೃತ ಕಲಿಕಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಸಂಸ್ಕೃತ ದೇವ ಭಾಷೆ, ವಿಜ್ಞಾನ ಭಾಷೆ, ವೈಜ್ಞಾನಿಕ ಭಾಷೆ, ಇಂತಹ ಭಾಷೆಯನ್ನು ಮಕ್ಕಳು ತಮ್ಮ ಬಾಲ್ಯಾವಸ್ಥೆಯಲ್ಲಿಯೇ ಕಲಿತರೆ ಅವರಿಗೆ ಇತರೆ ಭಾಷೆಗಳನ್ನು ಕಲಿಯಲು ಸುಲಭವಾಗುತ್ತದೆ ಅಲ್ಲದೆ ತಮ್ಮ ಜ್ಞಾನಾರ್ಜನೆ ಹೆಚ್ಚುತ್ತದೆ, ಎಂತಹ ಕಷ್ಟಕರವಾದ ಶಬ್ದಗಳನ್ನು ಕೂಡ ಸ್ಪಷ್ಟವಾಗಿ ಉಚ್ಚಾರಣೆ ಮಾಡಲು ಸಾದ್ಯವಾಗುತ್ತದೆ ಎಂದರು. ಭಾರತ ದೇಶದ ಎರಡು ಪ್ರಮುಖಗಳಲ್ಲಿ ಸಂಸ್ಕೃತ ಮತ್ತು ಸಂಸ್ಕೃತಿ, ನಮ್ಮ ದೇಶದ ಎಲ್ಲಾ ಪ್ರಮುಖ ಗ್ರಂಥಗಳು ಸಂಸ್ಕೃತದಲ್ಲಿದೆ, ಸಂಸ್ಕೃತ ಕಲಿತರೆ ಸಂಸ್ಕೃತಿ ಅರಿಯಲು ಸುಲಭವಾಗುತ್ತದೆ. ಆಯರ್ವೇದ, ತಾಂತ್ರಿಕ, ಗಣಿತ ಯೋಗ ಮುಂತಾದವುಗಳನ್ನು ಮೂಲದಲ್ಲಿಯೇ ಓದಿ ಕಲಿಯಲು ಸಂಸ್ಕೃತ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ಶೈನ್ ಸ್ಟಾರ್ ಪಬ್ಲಿಕ್ ಆಂಗ್ಲ ಮಾದ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶಶಿಧರ್ ಸಮಾರಂಭದ ಅಧ್ಯಕ್ಷತೆಯನ್ನು  ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಕೃತ ಶಿಕ್ಷಕರಾದ ಶಿವರುದ್ರಯ್ಯ, ಜನ ಸೇವಾ ವಿದ್ಯಾಕೆಂದ್ರ ಚೆನ್ನೇನಹಳ್ಳಿಯ ಪದವಿ ಪೂರ್ವ ವಿದ್ಯಾಲಯದ ಉಪ ಪ್ರಾಂಶುಪಾಲ ಚಂದನ್ ಜಿ. ನಾಯರ್, ಯೋಗ ಶಿಕ್ಷಣ ಸಮಿತಿ ಶಿವಮೊಗ್ಗದ ಟ್ರಸ್ಟಿ ರವೀಂದ್ರ, ಸಮಾರಂಭದಲ್ಲಿ ಉಪಸ್ಥಿತರಿದ್ದರು.