ಸಂಸ್ಕೃತಿ ಸದ್ಭಾವನೆಗಳು ಎಲ್ಲೆಡೆ ಮೂಡಿ ಬರಲಿ :  ರಂಭಾಪುರಿ ಶ್ರೀ

ಬಬಲೇಶ್ವರ ಜ.೨೩; ಮಾನವ ಜೀವನ ಉನ್ನತಿಗೆ ಧರ್ಮ ಪ್ರಜ್ಞೆ ಅವಶ್ಯಕ. ಅರಿವು ಆದರ್ಶಗಳ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕು. ಸುಖ ಶಾಂತಿ ನೆಮ್ಮದಿಯ ಬದುಕಿಗೆ ಧರ್ಮ ಪರಿಪಾಲನೆ ಅಗತ್ಯವಾಗಿದ್ದು ಸಂಸ್ಕೃತಿ ಸದ್ಭಾವನೆಗಳು ಎಲ್ಲೆಡೆ ಮೂಡಿ ಬರಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೋಡಬಾಗಿ ಗ್ರಾಮದಲ್ಲಿ ಜರುಗಿದ ಉಚಿತ ಸಾಮೂಹಿಕ ಅಯ್ಯಾಚಾರ ದೀಕ್ಷೆ ಮತ್ತು ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಸಮಾಜದಲ್ಲಿ ಉದಾತ್ತವಾದ ಮಾನವೀಯ ಮೌಲ್ಯಗಳು ಬೆಳೆಯಬೇಕು. ಬೆಳೆಯುವ ಜನ ಸಮುದಾಯದಲ್ಲಿ ಸಂಸ್ಕಾರ ಸದ್ವಿಚಾರಗಳ ಅರಿವು ಮೂಡಿಸಬೇಕಾಗಿದೆ. ಧರ್ಮದ ಯತಾರ್ಥ ಅರಿವು ಇಲ್ಲದ ಕಾರಣ ಬದುಕು ತಲ್ಲಣಗೊಳ್ಳುತ್ತಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶ ಧರ್ಮ ಸೂತ್ರಗಳು ಸಕಲರ ಬಾಳಿನಲ್ಲಿ ಬೆಳಕು ತುಂಬಿವೆ. ಅವರ ಮೌಲ್ಯಾಧಾರಿತ ಚಿಂತನಗಳು ಸಕಲರ ಶ್ರೇಯಸ್ಸಿಗೆ ಸಹಕಾರಿಯಾಗಿವೆ. ಧರ್ಮದ ದಾರಿ ಮೀರಿ ನಡೆದರೆ ಆತಂಕ ತಪ್ಪಿದ್ದಲ್ಲ ಎಂದರು. ಬೆಳೆಯುವ ಮಕ್ಕಳಲ್ಲಿ ಸಂಸ್ಕಾರ ಮೂಡಿಸುವ ದಿಶೆಯಲ್ಲಿ ಅಯ್ಯಾಚಾರ ದೀಕ್ಷೆ ನೀಡುವ ಕಾರ್ಯಕ್ರಮ ಸ್ತುತ್ಯಾರ್ಹವಾಗಿದ್ದು ಮಕ್ಕಳಲ್ಲಿ ಧರ್ಮಾಸಕ್ತಿ ಬೆಳೆಸಬೇಕು. ಸಂಸ್ಕಾರದಿAದ ಮೌಲ್ಯಾಧಾರಿತ ಬದುಕು ಪ್ರಾಪ್ತವಾಗುವುದೆಂದರು.ಅಧ್ಯಕ್ಷತೆ ವಹಿಸಿದ ಎಚ್.ಬಿ. ಹರನಟ್ಟಿ ಮಾತನಾಡಿ ಇಂದಿನ ಕಾರ್ಯಕ್ರಮ ನಮ್ಮೂರಿನಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಿದೆ. ಪೂಜ್ಯ ಶ್ರೀ ರಂಭಾಪುರಿ ಜಗದ್ಗುರುಗಳ ಆಗಮನದಿಂದ ನಮಗೆಲ್ಲ ಬಹಳ ಸಂತೋಷ ತಂದಿದೆ. ರೈತ ಮಿತ್ರರು ಹಾಗೂ ಗ್ರಾಮಸ್ಥರು ನೀಡಿದ ಸಹಕಾರ ದೊಡ್ಡದು ಎಂದರು. ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು ಜಮಖಂಡಿಯ ಕಲ್ಯಾಣಮಠದ ಗೌರಿಶಂಕರ್ ಶಿವಾಚಾರ್ಯರು ,ಮುತ್ತಿನಕಂತೆಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಹಿರೇಪಡಸಲಗಿಯ ಸಿದ್ದಲಿಂಗ ಶಿವಾಚಾರ್ಯರು, ಮಮದಾಪುರದ ಮ.ನಿ.ಪ್ರ .ಅಭಿನವ ಮುರಿಗೇಂದ್ರ ಸ್ವಾಮೀಜಿ, ಗುಣದಾಳದ ಡಾ.ವಿವೇಕಾನಂದ ದೇವರು, ಕುಂದರಗಿಯ ಶ್ರೀ ವಿಶ್ವನಾಥ ದೇವರು, ಸಂಗಮೇಶ್ವರ ಬಬಲೇಶ್ವರ, ಬಿ. ಬಿ .ಪಾಟೀಲ ವೇದಿಕೆ ಉದ್ದೇಶ ಮಾತನಾಡಿದರು. ಜಗದೀಶ ಗುಡಗುಂಟಿ ಬಸವರಾಜ ದೇಸಾಯಿ. ವಿ ಎಸ್ ಪಾಟೀಲ್ . ಕಲ್ಲಪ್ಪ ಕೂಡವಾಗಿ ಸಿದ್ದಣ್ಣ ದೇಸಾಯಿ ಮತ್ತಿತರು ಗಣ್ಯಮಾನ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಸುತ್ತಲಿನ ಗ್ರಾಮದ ರೈತ ಬಾಂಧವರು ಹಿರಿಯರು ಮಹಿಳೆಯರು ಮುದ್ದು ಮಕ್ಕಳು ಯುವಕರು ಭಾಗವಹಿಸಿದ್ದರು.