ಸಂಸ್ಕೃತಿ, ಚಿಂತನೆಗಳ ಜೊತೆ ಹೊಂದಾಣಿಕೆಯೇ ದೀಪಾವಳಿ

ಚಿತ್ರದುರ್ಗ. ನ.೯; ಮನುಷ್ಯ ತನ್ನ ಮನಸ್ಸಿನಲ್ಲಿರುವ ಕ್ರೋಧ, ಮೋಸ, ವಂಚನೆ, ದ್ವೇಷ, ಅಸೂಯೆ ನಿಗ್ರಹಿಸಿಕೊಂಡು, ಅನ್ಯ ಜಾತಿ, ಮತ, ಭಾಷೆ, ಸಂಸ್ಕೃತಿ, ಚಿಂತನೆಗಳ ಜೊತೆ ಹೊಂದಾಣಿಕೆ ಮಾಡಿಕೋಡು ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುವುದೇ ಭಾರತೀಯ ದೀಪಾವಳಿ ಹಬ್ಬದ ಉದ್ಧೇಶ ಎಂದು ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಶ್ಮಿ ಅಕ್ಕನವರು ತಿಳಿಸಿದರು.ಅವರು ನಗರದ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಆವರಣದಲ್ಲಿ ನೆರವೇರಿಸಿದ “ದೀಪಾವಳಿ ಮತ್ತು ಅಷ್ಟಲಕ್ಷಿö್ಮಯರ ಮಹತ”್ವ ಎಂಬ ಜನಜಾಗೃತಿ ಕಾರ್ಯಕ್ರಮವನ್ನ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ಮನೋವೃತ್ತಿಯನ್ನು ಬದಲಾಯಿಸಿಕೊಂಡು, ಹಳೆಯ ಕೆಟ್ಟ ಅಭ್ಯಾಸಗಳನ್ನ, ಚಟಗಳನ್ನು ಬದಲಾಯಿಸಿಕೊಂಡು, ಯಾವ ಸಂಸ್ಕಾರಗಳು ನಮಗೆ ತೊಂದರೆ ಕೊಟ್ಟು ನಮಗೆ ಬದುಕಲು ಬಿಡುತ್ತ್ತಿಲ್ಲವೋ ಅವುಗಳನ್ನು ಬದಲಾಯಿಸಿಕೊಂಡು, ಪರಿಸ್ಥಿತಿಯನ್ನ ಬದಲಾಯಿಸುವಷ್ಟು ಶಕ್ತಿಶಾಲಿಗಳಾಗಿ, ಸ್ವಸಂಸ್ಕಾರಗಳ ಮೇಲೆ ಜಯ ಪಡೆಯುವುದೇ ವಿಜಯಲಕ್ಷ್ಮಿ ಎಂದರು.ಅಷ್ಟಲಕ್ಷ್ಮಿಯರನ್ನು ಸರಿಯಾಗಿ ಅರ್ಥಮಾಡಿಕೊಂಡು ಅವರ ಸಂದೇಶಗಳನ್ನ ಅಳವಡಿಸಿಕೊಳ್ಳಬೇಕು, ಇಲ್ಲದಿದ್ದರೆ ಅದು ಮೂಢ ನಂಬಿಕೆಗಳ ರೂಪದಲ್ಲಿ ಹೊರಹೊಮ್ಮುತ್ತದೆ, ಅನ್ಯರ ಕೆಟ್ಟ ನಡವಳಿಕೆ ನಮ್ಮ ಮೇಲೆ ಪ್ರಭಾವ ಬೀರಬಾರದು, ಅನ್ಯರ ಮೇಲೆ ಒಳ್ಳೆಯ ಪ್ರಭಾವ ಬೀರುವಂತಹ ಗುಣಗಳೇ ವಿಜಯಲಕ್ಷ್ಮಿ. ಪರಿಸ್ಥಿತಿಗಳು ಇತರರನ್ನು ಹೇಗೆ ಬೇಕಾದರೂ ಮಾಡಿರಬಹುದು, ಆದರೆ ಅವು ನಮ್ಮ ಮೇಲೆ ಪ್ರಭಾವ ಬೀರಿ ನಮ್ಮನ್ನು ಚಂಚಲಗೊಳಿಸಬಾರದು, ಜ್ಞಾನೇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಿ, ಏನನ್ನ ಮಾತನಾಡಬೇಕು, ತಿನ್ನಬೇಕು, ಕೇಳಬೇಕು, ನೋಡಬೇಕು ಎಂಬುವುದರ ಇಂದ್ರೀಯ ನಿಯಂತ್ರಣವೇ ವಿಜಯಲಕ್ಷಿ÷್ಮ ಎಂದರು.ಭಗವAತ ಕೊಟ್ಟ ಅದೃಷ್ಟವನ್ನ, ಸಂಪತ್ತು, ಜ್ಞಾನವನ್ನ ಇನ್ನೊಬ್ಬರಿಗೆ ಹಂಚುವುದೇ ಭಾಗ್ಯಲಕ್ಷಿ÷್ಮ. ಲಕ್ಷಿ÷್ಮ ಎಂದರೇ ಸೌಂದರ್ಯ, ಆಂತರಿಕ ಲಾವಣ್ಯ, ಸೊಬಗನ್ನು ಹೊಂದಿದವಳು. ಇನ್ನೊಬ್ಬರನ್ನ ಹಂಗಿಸಿ, ಆಡಿಕೊಂಡು, ಹೆದರಿಸಿ, ಬೆದರಿಸಿ ನಾವು ಜಯಗಳಿಸಲು ಸಾಧ್ಯವಿಲ್ಲ. ವಿನಯದಿಂದ, ವಿನಮ್ರತೆಯಿಂದ, ಅವರ ಮನಪರಿವರ್ತಸಬೇಕು. ಧೈರ್ಯವಾಗಿ ಸಮಸ್ಯೆಗಳನ್ನ ಎದುರಿಸಿ, ಅ ಸಮಸ್ಯೆಗಳ ನಿವಾರಣೆಗೆ ಮಾರ್ಗಗಳನ್ನು ಕಂಡು ಹಿಡಿಯಬೇಕು. ಸಂಪಾದಿಸಿದ ಹಣವನ್ನು ಕ್ರೂಢಿಕರಿಸಿಕೊಂಡು, ತಮ್ಮ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ, ಬಡವರಿಗೆ ಅವುಗಳನ್ನ ಸಮಯಕ್ಕೆ ಸರಿಯಾಗಿ ನೀಡುವುದೇ ಧಾನ್ಯಲಕ್ಷಿ÷್ಮಯ ಸಂದೇಶವಾಗಿದೆ ಎಂದರು. ತಾಳ್ಮೆ, ಸಹಕಾರ, ಸ್ನೇಹ, ಪ್ರೀತಿ, ಈ ಭೂಮಿಯ ಮೇಲೆ ಹೆಚ್ಚು ವಿಸ್ತಾರವಾಗಿ ಬೆಳೆಯಬೇಕು. ವಿಶ್ವಶಾಂತಿಗಾಗಿ ನಾವು ದೀಪಾವಳಿಯ ಸಂದೇಶವನ್ನು ಜನರಿಗೆ ಬಿತ್ತಬೇಕು. ದ್ವೇಷ, ಅಸೂಯೆ, ಹಿಂಸೆಗಳು, ನಾಶವಾಗಿ ಮಾನವಜನ್ಮ ಉನ್ನತಮಟ್ಟಕ್ಕೆ ತೆರಳಬೇಕು ಎಂದರು.ಕಾರ್ಯಕ್ರಮದಲ್ಲಿ  ಡಾ. ಎಚ್. ಕೆ. ಎಸ್. ಸ್ವಾಮಿ, ವಿಶ್ವನಾಥ, ಅನನ್ಯ, ಅಮೂಲ್ಯ, ಮೀರಾ, ಅಪೇಕ್ಷ ಮತ್ತಿತರರು ಭಾಗವಹಿಸಿದ್ದರು.