ಸಂಸ್ಕೃತಿ ಉಳಿವಿಗೆ ಮಹನೀಯರ ಹೆಸರು ನಾಮಕರಣ: ಸೋಮಣ್ಣ

ಬೆಂಗಳೂರು. ಜ.೨೦-ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಪಾಲಿಕೆ ಸೌಧದಲ್ಲಿ ನಾಡಿನ ಹಿರಿಯ ಸಂಶೋಧಕ, ಸಾಹಿತಿ ಚಿಂತಕರಾದ ನಾಡೋಜ ಡಾ||ಎಂ.ಚಿದಾನಂದ ಮೂರ್ತಿ ಸಭಾಂಗಣವನ್ನು ವಸತಿ ಸಚಿವ ವಿ.ಸೋಮಣ್ಣ ಇಂದು ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಕಾಮಗಾರಿ ಯೋಜನೆಗಳಿಗೆ ರಾಷ್ಟ್ರ ಮತ್ತು ರಾಜ್ಯಕ್ಕೆ ಸೇವೆ ಸಲ್ಲಿಸಿದ ಮಹನೀಯರುಗಳು ಹೆಸರುಗಳನ್ನು ನಾಮಕರಣ ಮಾಡಲಾಗಿದೆ ಎಂದು ತಿಳಿಸೊದರು.
ಬಸವೇಶ್ವರ, ದಾಸಶೇಷ್ಠ ಕನಕದಾಸ, ಸಂಗೊಳ್ಳಿ ರಾಯಣ್ಣ, ನಾಡಪ್ರಭು ಕೆಂಪೇಗೌಡರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಪೇಜಾವರ ಶ್ರೀ ,ನಾಡೋಜ ಚಿದಾನಂದಮೂರ್ತಿ ಮಹನೀಯರುಗಳು ಹೆಸರುಗಳು ಶಾಶ್ವತವಾಗಿ ಸ್ಮರಣೆ ಮಾಡಿಕೊಳ್ಳಲು ಮತ್ತು ಮುಂದಿನ ಪೀಳಿಗೆಗೆ ಮಹನೀಯರುಗಳ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಂಡು ಉತ್ತಮ ಪ್ರಜೆಯಾಗಲಿ ಎಂಬ ಉದ್ದೇಶದಿಂದ ಹೆಸರುಗಳನ್ನು ನಾಮಕರಣ ಮಾಡಲಾಗಿದೆ ಎಂದರು.
ರಾಷ್ಟ್ರಕ್ಕೆ ಉಪಯುಕ್ತ ಸಂಶೋಧನೆ ಮಾಡಿರುವ ಚಿದಾನಂದಮೂರ್ತಿರವರು ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು ಎಂದು ತಿಳಿಸಿದರು.
ಮಾಗಡಿರೋಡ್ ಪೊಲೀಸ್ ಠಾಣೆಯನ್ನು ನವೀಕರಣ ಮಾಡಲಾಗಿದೆ, ಡಿ.ಸಿ.ಪಿ.ಕಛೇರಿಯನ್ನು ಮಾಗಡಿರೋಡ್ ನಲ್ಲಿ ಪ್ರಾರಂಭಿಸಲಾಗಿದೆ.
೨೦೦೦ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಇರುವ ಪ್ರಥಮ ದರ್ಜೆ ಕಾಲೇಜು ಹಾಗೂ ೧ಕಿಲೋ ಮೀಟರ್ ಉದ್ದದ ಮೇಲು ಸೇತುವೆಯನ್ನ ,ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವನ್ನು ಜನವರಿ ೨೯ನೇ ಲೋಕಾರ್ಪಣೆ ಮಾಡಲಾಗುವುದು ಎಂದರು.
ನಾಯಂಡಹಳ್ಳಿ ಕೆರೆಯನ್ನು ಶುದ್ದಿಕರಿಸಲಾಗಿದೆ.
ದಾಸರಹಳ್ಳಿ ವಾರ್ಡ್ ನಲ್ಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಂದಿನ ತಿಂಗಳು ೧೬ನೇ ತಾರೀಖು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಯೋಗಿ ಆದಿತ್ಯನಾಥ್ ಸೇವೆಗೆ ಸಮರ್ಪಿಸಲಿದ್ದಾರೆ ಎಂದು ತಿಳಿಸಿದರು.
ನಾಯಂಡಹಳ್ಳಿ ೨೦೦ಹಾಸಿಗೆಯ ಆಸ್ಪತ್ರೆಗೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರ ಹೆಸರು ನಾಮಕರಣ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಹೆಚ್.ಜಯರಾಮ್, ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ದಾಸೇಗೌಡ, ಜಯರತ್ನ, ಬಿ.ಜೆ.ಪಿ.ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.