ಸಂಸ್ಕಾರ ನೀಡುವುದು ಗುರುವಿನ ಗುರುತರ ಜವಾಬ್ದಾರಿ

ರಾಮದುರ್ಗ,ಮೇ29 : ಪ್ರಾಥಮಿಕ ಶಿಕ್ಷಕ ಹುದ್ದೆಯು ಮಕ್ಕಳ ಭದ್ರ ಬುನಾದಿ ಹಾಕುವ ಪ್ರಮುಖ ಘಟ್ಟವಾಗಿದೆ. ಅಂತಹ ಸ್ಥಾನವನ್ನು ಡಿ.ಸಿ. ದಮಾಮಿ ಅವರು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಹುಬ್ಬಳ್ಳಿಯ ನಿವೃತ್ತ ಪ್ರಾಂಶುಪಾಲ ಪ್ರೊ. ಎಸ್.ಆರ್. ಆಶಿ ಹೇಳಿದರು.
ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಶ್ರೀಮತಿ ದ್ರಾಕ್ಷಾಯಿಣಿ ದಮಾಮಿ ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಗುರುವಿನ ಸ್ಥಾನ ಪವಿತ್ರವಾದದ್ದು, ವಿದ್ಯೆ ಜೊತೆಗೆ ಮಕ್ಕಳಿಗೆ ಸಂಸ್ಕಾರ ನೀಡುವುದು ಗುರವಿನ ಗುರುತರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕಿ ಶ್ರೀಮತಿ ಡಿ.ಸಿ. ದಮಾಮಿ ಅವರು, ಸರಕಾರಿ ಹುದ್ದೆಯನ್ನು ಕಳೆದ 29 ವರ್ಷಗಳಿಂದ ಉತ್ತಮವಾಗಿ ನಿಭಾಯಿಸಿದ್ದೇನೆ. 29 ವರ್ಷ ಅಲ್ಲ ಕೇವಲ 29 ದಿನಗಳು ಕಳೆದಂತೆ ಭಾಸವಾಗುತ್ತಿದೆ. ಎಲ್ಲ ಸಹದ್ಯೋಗಿಗಳು ಮನೆಯ ಕೆಲಸ ಕಾರ್ಯ ಮಾಡಿದಂತೆ ನಾವು ಮಾಡಿಕೊಂಡು ಬಂದಿರುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಶಿಕ್ಷಕ ಎಚ್.ಎನ್. ನರಗುಂದ, ಆರ್.ಕೆ. ಬಿಕ್ಕನ್ನವರ ಮಾತನಾಡಿದರು. ಇದೇ ವೇಳೆ ರಾಜ್ಯ ನೌಕರರ ಸಂಘದ ನಿರ್ದೇಶಕ ಸುರೇಶ ಹುಚ್ಚನ್ನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಂ.ಎನ್. ಗವನ್ನವರ, ಉಪಾಧ್ಯಕ್ಷ ಚಂದ್ರು ಕಲ್ಲೂರ, ಖಚಾಂಚಿ ಎನ್.ಎ. ಶೇಖ, ಸಹ ಕಾರ್ಯದರ್ಶಿ ರಾಜು ಬಸರೀಕಟ್ಟಿ, ಕೆಬಿಎಸ್‍ನಂ 4ರ ಪ್ರಧಾನ ಗುರು ವೈ.ವಿ. ಮಳಲಿ, ಬಿ.ಪಿ. ಅರಳಿಮಟ್ಟಿ, ಅನ್ನಪೂರ್ಣ ಆಶಿ, ಶಾಂತಾ ದಮಾಮಿ, ಮಹಾನಂದಾ ದಮಾಮಿ, ಜಿ.ಎಂ. ಗೋಕಾವಿ ಸೇರಿದಂತೆ ಅನೇಕರು ಇದ್ದರು.
ಸಚಿನ ಕೋತಿನ ಸ್ವಾಗತಿಸಿದರು. ಸ್ನೇಹಾ ಶೆಟ್ಟರ ಪರಿಚಯಿಸಿದರು. ವಿನಯ ಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಸಣ್ಣಕ್ಕಿ ವಂದಿಸಿದರು.