
ಧಾರವಾಡ,ಮೇ.18: ಶಿಕ್ಷಣದ ಮೂಲಕವೇ ಭಾರತೀಯ ಸಂಸ್ಕøತಿ, ಪರಂಪರೆಯನ್ನು ಬೆಳೆಸುವುದೇ ರಾಷ್ಟ್ರೋತ್ಥಾನ ಪರಿಷತ್ತಿನ ಧ್ಯೇಯವಾಗಿದೆ ಎಂದು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ದಿನೇಶ ಹೆಗಡೆ ತಿಳಿಸಿದರು.
ನಗರದ ಸತ್ತೂರಿನಲ್ಲಿ ನೂತನ ರಾಷ್ಟ್ರೋತ್ಥಾನ ಶಾಲೆಯ ವಾಸ್ತು ಪೂಜೆಯಲ್ಲಿ ಅವರು ಮಾತನಾಡಿದರು. ರಾಜ್ಯಾದ್ಯಂತ ರಾಷ್ಟ್ರೋತ್ಥಾನದಿಂದ 23 ಶಾಲೆಗಳು ನಡೆಯುತ್ತಿವೆ ಭಾರತೀಯ ಶಿಕ್ಷಣದಿಂದ ವ್ಯಕ್ತಿ ನಿರ್ಮಾಣ, ಆ ಮೂಲಕ ದೇಶ ನಿರ್ಮಾಣಕ್ಕೆ ಪೂರಕವಾಗುತ್ತದೆ. ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಇನ್ನೂ ಅಧಿಕ ಶಾಲೆಗಳನ್ನು ಆರಂಭಿಸುವ ಯೋಜನೆ ಇದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಸಂಘಚಾಲಕ ಅರವಿಂದರಾವ್ ದೇಶಪಾಂಡೆ ಮಾತನಾಡಿ, ರಾಷ್ಟ್ರೀಯತೆಯ ಉತ್ಥಾನ ಕಾರ್ಯದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡುವಲ್ಲಿ ರಾಷ್ಟ್ರೋತ್ಥಾನ ವಿದ್ಯಾಲಯ ಮುಂಚೂಣಿಯಲ್ಲಿವೆ. ಇಂಥ ಶಾಲೆಗಳು ರಾಜ್ಯದಲ್ಲಿ ಇನ್ನೂ ವಿಸ್ತಾರವಾಗಲಿ ಎಂದು ಹೇಳಿದರು.
ಇದಕ್ಕೂ ಪೂರ್ವ ನೂತನ ಶಾಲಾ ಕಟ್ಟಡದ ವಾಸ್ತು ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮಣ್ಣ, ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ಶ್ರೀಧರ ನಾಡಗೀರ, ರಾಷ್ಟ್ರೋತ್ಥಾನ ಪರಿಷತ್ತಿನ ಸದಸ್ಯ ಅಶೋಕ ಸೋನಕರ, ರಾಘವೇಂದ್ರ ಅಂಬೇಕರ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.