ಸಂಸ್ಕಾರ ನೀಡುವಲ್ಲಿ ಮಹಿಳೆ ಪಾತ್ರ ಮುಖ್ಯ

ಇಂಡಿ:ಮಾ.12:ಪ್ರಾರಂಭದ ಹಂತದಿಂದ ಮಕ್ಕಳಿಗೆ, ಯುವಕರಿಗೆ,ಕುಟುಂಬ ವರ್ಗದವರಿಗೆ ಸಂಸ್ಕಾರ ನೀಡುವಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿದೆ ಎಂದು ನಿವೃತ್ತ ಪ್ರಾಚಾರ್ಯೆ ಶೈಲಜಾ ಬಿರಾದಾರ ಹೇಳಿದರು.

ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಇಂಡಿ,ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ವಿಶ್ವ ಚೇತನ ಶೈಕ್ಷಣಿಕ ಸಾಂಸ್ಕøತಿಕ ಹಾಗೂ ಸಾಮಾಜಿಕ ಸೇವಾ ಅಭಿವೃದ್ದೀ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಉಪನ್ಯಾಸ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಉಪನ್ಯಾಸ ನೀಡಿದ ವಿಜಯಪುರ ಕರ್ನಾಟಕ ಜಾನಪದ ಪರಿಷತ್ತ ಅಧ್ಯಕ್ಷ ಬಿ.ಎನ್.ಪಾಟೀಲ ಮಾತನಾಡಿ ಮಗುವಿನ ಬೆಳವಣೆಗೆ, ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಮಹಿಳೆ ಜಾನಪದ ಸುಂದರವಾಗಿರುತ್ತದೆ. ಆಕೆಯ ಹಾಡು ಜಾನಪದ ಉಳಿಯಲು ಕಾರಣ ವಾಗುತ್ತಿದೆ ಎಂದರು.

ಸ್ವದೇಶಿ ಜಾಗರಣ ಜಿಲ್ಲಾ ಸಂಚಾಲಕ ಶಂಕರಗೌಡ ಪಾಟೀಲ, ಸಿಡಿಪಿಓ ಸುಮಂಗಲಾ ಹಿರೇಮನಿ, ಟಿಎಚ್‍ಓ ಅರ್ಚನಾ ಕುಲಕರ್ಣಿ, ಡಾ. ಕಾಂತು ಇಂಡಿ,ಬಿ.ಸಿ.ಭಗವಂತಗೌಡರ,ಎಸ.ಎಸ್.ಪರವೇಜ ಬಸವರಾಜ ಗೋರನಾಳ,ಜಿ.ಜಿ.ಬರಡೋಲ ಮಾತನಾಡಿದರು.

ವೇದಿಕೆಯ ಮೇಲೆ ಗಂಗಾಬಾಯಿ ಗಲಗಲಿ,ಮಲ್ಲಮ್ಮ ಗಿರಣಿವಡ್ಡರ,ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಪಾಟೀಲ,ನಿಕಟ ಪೂರ್ವ ಅಧ್ಯಕ್ಷ ಎಸ್.ಆರ್.ಪಾಟೀಲ, ರಾಜು ಕುಲಕರ್ಣಿ,ರಾಜೇಶ್ವರಿ ಕ್ಷತ್ರಿ,ಭಾರತಿ ವಾಲಿ, ಎಂ.ಪಿ.ಬಿರಾದಾರ ಮತ್ತಿತರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಶಿಕಲಾ ಬಡಿಗೇರ,ಸುಹಾಸಿನಿ ಹಿರೇಪಟ್ಟ,ಜುಲೇಖಾ ಕಳಾವಂತ,ಸೀಮಾ ಬಿರಾದಾರ, ಪ್ರಿಯಾಂಕಾ ಹತ್ತಿ,ಪಲ್ಲವಿ ಕಲ್ಲೊಳ್ಳಿ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು