ಸಂಸ್ಕಾರ ಕಾರ್ಯಕ್ರಮ


ನವಲಗುಂದ ,ಏ.7: ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ನಡೆದ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ ಸಮಾರಂಭದಲ್ಲಿ ಶನಿವಾರ 56 ಕ್ಕೂ ಹೆಚ್ಚು ಮಕ್ಕಳಿಗೆ ಮೌಂಜಿ ಬಂಧನ ಸಂಸ್ಕಾರ ನೀಡಲಾಯಿತು.
ಗ್ರಾಮದಲ್ಲಿ ನೂತನವಾಗಿ ಜಿರ್ಣೋದ್ದಾರಗೊಂಡ ಮಾನ ಸ್ಥಂಭ ಶಿಖರ ಪೂರ್ಣಗೊಂಡು ದೇವಸ್ಥಾನವು ಶನಿವಾರ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆ ಗೊಂಡ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಮಾಡಲಾಯಿತು.
ನಂತರ ಶ್ರೀ 108 ಪುಣ್ಯಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ಎಲ್ಲ ಮುನಿ ಮಹಾರಾಜರು ಮಕ್ಕಳಿಗೆ ಮೌಂಜಿ ಸಂಸ್ಕಾರ ಬಂಧನ ಕಾರ್ಯಕ್ರಮದಲ್ಲಿ ಮೌಂಜಿ ಬಂಧನದ ವೃತ-ನಿಯಮಗಳನ್ನು ಬೋಧಿಸಿದರು.
ಮೌಂಜಿ ಬಂಧನ ಸಂಸ್ಕಾರ ಪಡೆದ ಮಕ್ಕಳು ಹಾಗೂ ಪಾಲಕರು ಚಿನ್ನ, ಬೆಳ್ಳಿ, ಹಣ ಮತ್ತು ಆಹಾರ ಧಾನ್ಯಗಳನ್ನು ದಾನ ಮಾಡಿದರು.
ನಂತರ ಮಂತ್ರಘೋಷ, ವಿಧಿವಿಧಾನಗಳ ಮೂಲಕ ಜನ್ಮಕಲ್ಯಾಣ ಮತ್ತು ಮೌಂಜಿ ಬಂಧನ ನಡೆಯಿತು.