ಸಂಸ್ಕಾರ ಇಂಚರ ಪುಸ್ತಕ ಬಿಡುಗಡೆ

ಬೀದರ:ಏ.16:ಡಾ|| ಬಿ.ಆರ್. ಅಂಬೇಡ್ಕರ ಹೆಣ್ಣು ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ ಕೊಟ್ಟ ಮಹಾನುಭಾವರು. ಸಂವಿಧಾನ ರಚನೆಯಾಗದಿದ್ದರೆ ಹೆಣ್ಣು ಮಕ್ಕಳು ಮನೆ ಬಿಟ್ಟು ಆಚೆ ಬರುವುದು ಕಷ್ಟವಾಗುತ್ತಿತ್ತೆಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಗೀತಾ ಪಂಡಿತ ಚಿದ್ರಿ ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೀದರ ಹಾಗೂ ಶ್ರೀ ಶರಣ ನಿಧಿ ಎಜುಕೇಶನ್ ಆ್ಯಂಡ್ ಚಾರಿಟೇಬಲ್ (ರಿ) ಗೌಡನ ಹಳ್ಳಿ ಜಂಟಿ ಸಹೋಗದಲ್ಲಿ ಡಾ|| ಬಿ.ಆರ್. ಅಂಬೇಡ್ಕರ ಜಯಂತಿ ಹಾಗೂ ಸಂಸ್ಕಾರ ಇಂಚರ ಪುಸ್ತಕ ಬಿಡುಗಡೆಯಲ್ಲಿ ಅಹೀಲ್ಯಾಬಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗೀತಾ ಪಂಡಿತ ಚಿದ್ರಿಯವರು ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ಸಂಸ್ಕಾರ ಇಂಚರ ಪುಸ್ತಕ ಬಿಡುಗಡೆ ಮಾಡಿದ ಬ್ರೀಮ್ಸ್‍ನ ಪ್ರಸೂತಿ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥರಾದ ಡಾ|| ಉಮಾದೇವಿ ಬಿ. ದೇಶಮುಖ – ಇಂದು ಹೆಣ್ಣು ಮಕ್ಕಳು ತಮ್ಮ ಸಂಸಾರದ ಕಷ್ಟ, ನೋವು, ನಲಿವುಗಳ ಮಧ್ಯ ಸಾಹಿತ್ಯ ಕ್ಷೇತ್ರಕ್ಕೆ ದಾಪುಗಾಲು ಹಾಗುತ್ತಿರುವುದು ಸಂತಸ. ಹೆಣ್ಣು ಮಕ್ಕಳು ಸಮಾಜದ ಕಣ್ಣು ಎನ್ನುವ ದಿಶೆಯಲ್ಲಿ ಸುಜಾತರವರ ಸಾಹಿತ್ಯ ಕೃತಿ ಸ್ಮರಣೀಯ ಎಂದರು. 
ಸಂಸ್ಕಾರ ಇಂಚರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಪರಿಚಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರಿನ ಸಹ ಕಾರ್ಯದರ್ಶಿ ಡಾ|| ವಿ.ಎಸ್. ಹಿರೇಮಠ – ಮಹಿಳೆಯರಿಗೆ ಇದೊಂದು ಅಪರೂಪದ ಗ್ರಂಥ. ಇಲ್ಲಿಯ ಕವನಗಳು ಮರು ಚಿಂತನೆಗೆ ಬೇಕಾಗುವ ಸಾಮಗ್ರಿ ಅಳವಡಿಸಿದ್ದಾರೆ. ಪ್ರೀತಿ, ಪ್ರೇಮ, ಭಕ್ತಿ, ಭಾವ, ನ್ಯಾಯ, ನೀತಿಯ ನಿರೂಪಣೆ ನಾಡು ವೈದ್ಯಕೀಯ ವಸ್ತುಗಳ ಕವಿತೆಗಳು ಸಂಕಲನದಲ್ಲಿ ಹಾದು ಹೋಗುತ್ತವೆ. ಇಷ್ಟೊಂದು ವೈವಿದ್ಯಮಯ ಕವನಗಳ ಹೆರಿಗೆಯಲ್ಲಿ ಎಲ್ಲೂ ನೋವು ಕಾಣುವುದಿಲ್ಲ. ಎಲ್ಲವೂ ಸಹಜವಾಗಿ ಹೊರ ಹೊಮ್ಮಿರುವುದು ಸುಜಾತ ನರಸಪ್ಪ ಗೌನಳ್ಳಿ ಶ್ರಮ, ಸೃದ್ಯ, ಅಭಿರುಚಿ, ಅಭಿಮಾನ, ಅಭಿನಂದನಾರ್ಹ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಅಧ್ಯಕ್ಷ ವಹಿಸಿ - ನಮ್ಮಲ್ಲಿ ಸಾಹಿತ್ಯ, ಸಂಸ್ಕøತಿ ಬೆಳೆಯಬೇಕಾದರೆ ಅಕ್ಕ-ತಂಗಿಯರು ಮುಂದೆ ಬರಬೇಕು. ಇಂದು ಮೊಬೈಲ್ ಸಂಸ್ಕøತಿಯಲ್ಲಿ ಓದು ಪುಸ್ತಕ ಮರೆಯಬಾಗುತ್ತಿರುವ ಧಾವಂತ ಬದುಕಿನಲ್ಲಿ ಅಕ್ಕ ಸುಜಾತರವರ ಸಂಸ್ಕಾರ ಇಂಚರ ಪುಸ್ತಕ ಹೊಸ ಆಲೋಚನೆಗೆ ದಾರಿ ಮಾಡಿಕೊಡುತ್ತದೆ. ಇವರ ಸಾಹಿತ್ಯ ಸೇವೆ ಇನ್ನೂ ಹೀಗೆಯೇ ಮುಂದುವರಿಯಲ್ಲೆಂದು ಆಶೀಸಿದರು. 
ಕಾರ್ಯಕ್ರಮದಲ್ಲಿ ಡಾ|| ವಿನೀತಾ ಪ್ರತಾಪುರ, ಎಚ್.ಹೆಚ್. ನಗನೂರ, ಅಮೃತ ಚಿಮಕೊಡ, ಪಂಚಿತ ಚಿದ್ರಿ, ಡಾ|| ಸಂಜೀವಕುಮಾರ ಅತಿವಾಳೆ, ಶರಣಪ್ಪಾ ಮಿಠಾರೆ, ಮಾಳಪ್ಪ ಅಡಸಾರೆ, ವಿಜಯಕುಮಾರ ಡುಮ್ಮೆ, ಮಂಗಲಾ ಬಾಗವತ, ರವಿ ಮುರಗೋಡ, ರಮೇಶ ಬಿರಾದಾರ ಮುಖ್ಯ ಅತಿಥಿಗಳಾಗಿ ಸಾಹಿತ್ಯ, ಸಂಸ್ಕøತಿ ಬಗ್ಗೆ ತಮ್ಮ ವಿವೇಚನೆಗೆ ತಕ್ಕಂತೆ ಮಾತನಾಡಿ ಕವಿಗಳನ್ನು ಗೌರವಿಸಿದರು. ಮೊದಲಿಗೆ ಡಾ. ಈಶ್ವರಯ್ಯ ಕೊಡಂಬಲ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಸಂತೋಷ ಶರಣಬಸಪ್ಪ ಚಿಕುರ್ತೆ ಪ್ರಾರ್ಥನ ಗೀತೆ ಹಾಡಿದರು. ಮಂದಕನಲ್ಲಿ ನೈಟಿಂಗಲ್ ಶಾಲೆಯ ಮುಖ್ಯ ಗುರುಗಳಾದ ಶ್ರೀದೇವಿ ನಿರ್ದೇಶನದ ಸಂವಿಧಾನ ಪೀಠಿಕೆ ಆಧರಿಸಿ ಮಕ್ಕಳು ಮಾಡಿದ ನೃತ್ಯ ಎಲ್ಲರ ಗಮನ ಸೆಳೆಯಿತು. ಡಾ. ಬಸವರಾಜ ಬಲ್ಲೂರ ಸ್ವಾಗತಿಸಿದರೆ, ಶಿವಶಂಕರ ಟೋಕರೆ ನಿರೂಪಿಸಿದರು. ಕೆ.ಜಿ.ಬಿ. ಬ್ಯಾಂಕಿನ ಹಿರಿಯ ವಿಭಾಗಿಯ ವ್ಯವಸ್ಥಾಪಕರಾದ ನರಸಪ್ಪ ಗೌನಲ್ಲಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ಮಂಗಲ ಹಾಡಲಾಯಿತು.