ಸಂಸ್ಕಾರವಿಲ್ಲದ ವ್ಯಕ್ತಿ ಜೀವನದಲ್ಲಿ ಶ್ರೇಷ್ಟನಾಗಲು ಸಾಧ್ಯವಿಲ್ಲ

ಕೋಲಾರ,ಜು.೨೫- ಸಂಸ್ಕಾರವಿಲ್ಲದ ವ್ಯಕ್ತಿ ಶ್ರೇಷ್ಠನಾಗಲು ಎಂದಿಗೂ ಸಾಧ್ಯವಿಲ. ತಂದೆ ತಾಯಂದಿರು ಬೆಳೆಯುವ ಮಕ್ಕಳಿಗೆ ಸಂಸ್ಕಾರವನ್ನು ನೀಡಿದಾಗ ಮಾತ್ರ ಅವರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುತ್ತಾರೆ. ವ್ಯವಸನಿಗಳಲ್ಲಿ ಮದ್ಯಪಾನ ಮೊದಲ ಮೆಟ್ಟಿಲು ಒಂದು ಜಾರಿದರೆ ಉಳಿದೆಲ್ಲವೂ ಜಾರಿದಂತೆ ಎಂದು ಇಲ್ಲಿಗೆ ಬಂದಿರುವವರು ಅರ್ಥಮಾಡಿ ಕೊಳ್ಳಬೇಕೆಂದು ತಾಲ್ಲೂಕಿನ ನಾಗಲಪುರ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಷ೧೧| ಬ್ರ|| ಪಟ್ಟದ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ತಾಲ್ಲೂಕಿನ ಹುತ್ತೂರು ಹೋಬಳಿಯ ಸಹಕಾರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಆಯೋಜಿಸಿದ ೧೬೮೯ ನೇ ಮಧ್ಯವರ್ಜನ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನದ ನುಡಿಗಳಾಡಿ ಜಾತಿ ಯಾವುದಾದರು ಜ್ಯೋತಿ ಒಂದೇ ಎಂದು ಪ್ರತಿ ಶಿಬಿರಾರ್ಥಿಗಳ ಕುಟುಂಬದಲ್ಲಿ ದೀಪ ಹಚ್ಚುವ ಮೂಲಕ ಬೆಳಕನ್ನು ಜೀವನದಲ್ಲಿ ಕಂಡುಕೊಂಡರೆ ಪೂಜ್ಯಖಾವಂದರಿಗೆ ನೀವು ನೀಡುವ ಗೌರವವಾಗಿರುತ್ತದೆ ಎಂದರು,
ದುಶ್ಚಟಗಳಲ್ಲಿ ಮಧ್ಯಪಾನ ಮೊದಲು ಅದನ್ನು ಬಿಟ್ಟರೆ ಎಲ್ಲಾ ದುಶ್ಚಟಗಳು ಬಿಡುವುದಕ್ಕೆ ಸೂಕ್ತವಾದ ಮಾರ್ಗವನ್ನು ಮನಸ್ಸೇ ತೋರಿಸುತ್ತದೆ . ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಂದೇ ತಾಯಿ ಮಕ್ಕಳನ್ನು ಒಂದೆಡೆ ಸೇರಿಸಿದ್ದೇವೆಂದರೆ ಅದು ದೈವ ಕೃಪೆಯಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ತಿಳಿಸಿದರು
ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಎಂ. ಮಾತನಾಡಿ ಮನೆಯಲ್ಲಿ ಆವರಿಸಿರುವ ಕತ್ತಲನ್ನು ಓಡಿಸಿ ಆ ಮನೆಗೆ ಬೆಳಕು ನೀಡುವ ಕೆಲಸವನ್ನು ನಾವು ಮಾಡಿದ್ದು, ಮದ್ಯ ವ್ಯಸನಿಗಳಾಗಿ ಇಡೀ ಕುಟುಂಬವೇ ಬೀದಿಗೆ ಬೀಳುತ್ತಿದ್ದವು ನಮ್ಮ ಸಂಸ್ಥೆಯಿಂದ ಹಲವು ಸಾಮಾಜಿಕ ಸೇವಾ ಕಾರ್ಯಕ್ರಮದಿಂದಾಗಿ ಜಾಗೃತಿ ಮೂಡಿಸಿ, ಮಧ್ಯ ವ್ಯಸನದಿಂದ ಮುಕ್ತಿ ದೊರಕಿಸಿ ಅವರ ಜೀವನದಲ್ಲಿ ಬೆಳಕು ಮೂಡಿಸಲು ಮುಂದಾಗಿದ್ದೇವೆ ಇದಕ್ಕೆ ಪ್ರತಿಯೊಬ್ಬರ ಸಹಕಾರ ಸಹಾಯವಿದ್ದು, ಮುಂದಿನ ದಿನಗಳಲ್ಲಿ ಬದಲಾವಣೆಯಾಗಿರುವವರು ಇನ್ನಿತರರಿಗೆ ಮಾದರಿಯಾಗುತ್ತಾರೆ ಎಂದು ಅಭಿಪ್ರಾಯ ಪಟ್ಟರು.