ಸಂಸ್ಕಾರಯುತ ಶಿಕ್ಷಣ ವಿದ್ದಲ್ಲಿ ಆದರ್ಶ ವ್ಯಕ್ತಿತ್ವವಿರುತ್ತದೆ

ಸೊರಬ. ಜ.14: ಸಮಾಜದಲ್ಲಿ ವ್ಯಕ್ತಿ ಆದರ್ಶ ಪೂರ್ಣವಾದ ವ್ಯಕ್ತಿತ್ವವನ್ನು ಹೊಂದಲು ಸಂಸ್ಕಾರಯುತವಾದ ಶಿಕ್ಷಣ ದೊರೆತಾಗ ಮಾತ್ರ ಸಾಧ್ಯವಿದೆಯೆಂದು ರೋಟರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹಾಗೂ ದಂತ ವೈದ್ಯ ಡಾ.ಜ್ಞಾನೇಶ್ . ಎಚ್. ಈ. ಅಭಿಪ್ರಾಯಪಟ್ಟರು. ತಾಲೂಕಿನ ತುಮರಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜೀವನದಲ್ಲಿ ಸಂಸ್ಕಾರಯುತವಾದ ಆದರ್ಶ ತತ್ವಗಳನ್ನು ರೂಡಿಸಿಕೊಂಡಾಗ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಹೊರಹೊಮ್ಮಲು ಸಾಧ್ಯ. ಸದೃಢವಾದ ಸಮಾಜವನ್ನು ಕಟ್ಟುವ ಕಾರ್ಯ ಮನೋಭಾವನೆ ಎಲ್ಲರಲ್ಲೂ ಬೆಳೆದಾಗ ಮಾತ್ರ ನಮ್ಮ ಜೀವನ ಅರ್ಥಪೂರ್ಣವಾಗುತ್ತದೆ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಕಲಿಕೆಯ ಜೊತೆಗೆ ಉತ್ತಮ ಗುಣ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಯನ್ನು ಸುಂದರ ಸಕಾರ ಮೂರ್ತಿ ಗುಣವುಳ್ಳ ವ್ಯಕ್ತಿಯನ್ನಾಗಿ ರೂಪಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.ರೋಟರಿ ಸಂಸ್ಥೆಯ ಅಧ್ಯಕ್ಷ ಮಂಜು ತವ ನಂದಿ ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ,ರೋಟರಿ ಸದಸ್ಯರಾದ ರಾಜು ಹಿರಿಯಾವಲಿ, ಕೃಷ್ಣಪ್ಪ, ಪುನೀತ್, ಯಶೋಧರ, ಶಿವಕುಮಾರ್, ಮೃತ್ಯುಂಜಯ ಗೌಡ, ಶಿವಕುಮಾರ್ ಕೆ ಸಿ, ಧನವಂತಿ, ಕವಿತಾ ,ಮಾರುತಪ್ಪ, ಗಣಪತಿ, ಚಿದಾನಂದ, ಬಂಗಾರಪ್ಪ  ಸೇರಿದಂತೆ ಮೊದಲಾದವರು ಇದ್ದರು.