ಸಂಸ್ಕಾರಯುತ ಶಿಕ್ಷಣ ನೀಡಿಕೆ ಅಗತ್ಯ


ಕಲಘಟಗಿ,ಮಾ.16: ದೇಶದ ಪ್ರತಿಯೊಂದು ಮಕ್ಕಳು ಶಿಕ್ಷಣ ಪಡೆದು ಜ್ಞಾನ ಸಂಪಾದಿಸಿದಲ್ಲಿ ಸಕಲವು ಲಭ್ಯವಾದಂತೆ ಎಂದು ಶಾಸಕ ಸಿ.ಎಂ ನಿಂಬಣ್ಣವರ ಮಾತನಾಡಿದರು.
ಅವರು ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಂಸ್ಕಾರ ಮಾಡೆಲ್ ಸ್ಕೂಲಿನ ಸಂಸ್ಕಾರೋತ್ಸವ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆದು ಮಾತನಾಡುತ್ತ ಬಾಲ್ಯದಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದರಿಂದ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ ಉತ್ತಮ ಪ್ರಜೆಗಳಿಂದ ರಾಜ್ಯ ದೇಶ ಅಭಿವೃಧ್ದಿ ಹೊಂದಲು ಎಂದರು.
ಸಂಸ್ಥೆಯ ಅಧ್ಯಕ್ಷರಾದ ರಾಕೇಶ ಅಳಗವಾಡಿ ಮಾತನಾಡಿ ನಮ್ಮ ಸಂಸ್ಥೆವತಿಯಿಂದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕೂಡ ನೀಡಲಾಗುತ್ತಿದ್ದು ಮಕ್ಕಳಿಗೆ ನಿತ್ಯ ಜೀವನದಲ್ಲಿ ಉಪಯೋಗವಾಗುವ ಶಿಕ್ಷಣ ಕೂಡ ನೀಡಲಾಗುತ್ತಿದ್ದು ಅವರ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ಸಂಸ್ಥೆ ವಹಿಸುತ್ತಿದೆ ಎಂದರು.
ಮುಖ್ಯ ಅಥಿತಿಗಳಾಗಿ ಸಿ.ಆರ್.ಪಿ. ಬಸಯ್ಯ ಹೀರೆಮಠ,ಗಂಗಾಧರ ಗೌಳಿ, ಸುನೀಲ ಗಬ್ಬೂರ, ಪ್ರವೀಣ ಇಜಾರಿ,ಪ್ರಕಾಶ ಲಮಾಣಿ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಪಾಲಕರು ಇದ್ದರು.