ಸಂಸ್ಕಾರಯುತ ಬಧುಕಿನೆಡೆಗೆ ಸಾಗಬೇಕಿದೆ:ರಾಮಲಿಂಗಯ್ಯಶ್ರೀ

ತಾಳಿಕೋಟೆ:ಜ.19: ನಮ್ಮ ಭಾರತ ದೇಶದಲ್ಲಿನ ಸನಾಥನ ಪರಂಪರೆ ಮತ್ತು ಸಂಸ್ಕøತಿ ಉಳಿಯಬೇಕಾದರೆ ಸಂಸ್ಕಾರಯುತ ಬಧುಕಿನೆಡೆಗೆ ಎಲ್ಲರೂ ಸಾಗಬೇಕಿದೆ ಎಂದು ಜಂಗಮ ಸಮಾಜದ ಗೌರವಾಧ್ಯಕ್ಷ ಚಬನೂರಿನ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.
ಬುಧವಾರರಂದು ತಾಲೂಕಿನ ಸಾಸನೂರ ಗ್ರಾಮದಲ್ಲಿ ಜಂಗಮ ಜಾಗೃತಿ ಅಭಿಯಾನದ ನೇತೃತ್ವವಹಿಸಿ ಮಾತನಾಡಿದ ಅವರು ಜಂಗಮ ಪರಂಪರೆ ಎಂಬುದು ತಲೆ ತಲಾಂತರದಿಂದ ಬಂದ ಸಮಾಜವಾಗಿದೆ ಅಲ್ಲದೇ ಇತರೆ ಸಮಾಜಗಳಿಗೆ ಮಾದರಿಯ ಸಮಾಜವಾಗಿ ನಡೆದುಕೊಂಡು ಬಂದಿದೆ ಎಲ್ಲ ಸಮಾಜದವರು ಗೌರವಯುತವಾಗಿ ಕಾಣುವಂತಹ ಸಮಾಜ ಜಂಗಮ ಸಮಾಜವಾಗಿದ್ದು ಅಂತಹ ಸಮಾಜದಲ್ಲಿ ಬಧುಕನ್ನು ನಡೆಸುತ್ತಿರುವ ನಾವೇಲ್ಲರೂ ದ್ವೇಶ ಭಾವನೆಯಿಂದ ಇರದೇ ಅನ್ಯ ಸಮಾಜಗಳ ನಗೆಪಾಠಲಿಗೆ ಇಡಾಗದೇ ಒಗ್ಗಟ್ಟಿನಿಂದ ಸಂಸ್ಕಾರಯುತವಾದ ಬಧುಕಿನೆಡೆಗೆ ಸಾಗಬೇಕಿದೆ ಎಂದ ಅವರು ಇಂದಿನ ದೈನಂದಿನ ಪಾರಂಪರಿಕ ಜೀವನದಲ್ಲಿ ನಶಿಸಿ ಹೋಗುತ್ತಿರುವ ಜಂಗಮ ಸಂಸ್ಕøತಿ ಎತ್ತಿ ಹಿಡಿದು ವೈವಾಹಿಕ ಜೀವನದಲ್ಲಿ ದಾರಿ ತಪ್ಪುತ್ತಿರುವ ಸಮಾಜವನ್ನು ಸನಾಥನ ಸಂಸ್ಕøತಿಯಡಿಯಲ್ಲಿ ಬಲಿಷ್ಠಗೊಳಿಸಬೇಕೆಂಬ ಇಚ್ಚೆ ಈ ಜಂಗಮ ಜಾಗೃತಿಯ ಅಭಿಯಾನದ ಉದ್ದೇಶವಾಗಿದೆ ಡಿಸೇಂಬರ್ 3 ಶನಿವಾರರಂದು ಪ್ರಥಮ ಹೆಜ್ಜೆಯಾಗಿ ಪ್ರಾರಂಭಗೊಂಡಿರುವ ಈ ಅಭಿಯಾನವು ತಾಳಿಕೋಟೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಅಭಿಯಾನದ ಸಭೆಗಳನ್ನು ಮಾಡಲಾಗಿದೆ ಸುಸ್ತರ ಸಮಾಜ ನಿರ್ಮಾಣ ಮಾಡುವ ಸಂಕಲ್ಪದ ಹೆಜ್ಜೆಗೆ ಜಂಗಮ ಸಮಾಜದ ಮುಖಂಡರುಗಳು, ಕಾರ್ಯಕರ್ತರು ಶ್ರೀಗಳು ಸಾಥ್ ನೀಡುತ್ತಾ ಬಂದಿದ್ದಾರೆ ಮುಂದಿನ ದಿನಗಳಲ್ಲಿ ಜಂಗಮ ಸಮಾಜದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಆ ಸಮಾವೇಶಕ್ಕೂ ಕೂಡಾ ಎಲ್ಲ ಸಹಕರಿಸಿ ನ್ಯಾಯಯುತವಾದ ಮಿಸಲಾತಿಯ ಹಕ್ಕನ್ನು ಸರ್ಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕೆಂದರು.
ರಾಮಲಿಂಗಯ್ಯಶ್ರೀಗಳ ನೇತೃತ್ವದಲ್ಲಿ ಬುಧವಾರರಂದು ಸಾಸನೂರ, ಚಬನೂರ, ಶರಣಸೋಮನಾಳ ಗ್ರಾಮಗಳಲ್ಲಿ ಜಾಗೃತಿ ಅಭಿಯಾನವನ್ನು ನಡೆಸಲಾಯಿತು. ಇದೇ ಸಮಯದಲ್ಲಿ ಗ್ರಾಮಗಳಲ್ಲಿಯ ಜಂಗಮ ಸಮಾಜದ ಬಾಂದವರು ರಾಮಲಿಂಗಯ್ಯಶ್ರೀಗಳನ್ನು ಸನ್ಮಾನಿಸಿ ಗೌರವಿಸಿದರು.
ಈ ಸಮಯದಲ್ಲಿ ಜಂಗಮ ಸಮಾಜದ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.