ಸಂಸ್ಕಾರಬಲ ಬುದ್ದಿಬಲಕ್ಕಿಂತಲೂ ಹೆಚ್ಚು:ಡಾ.ಶಿವಲಿಂಗಯ್ಯ

ತಾಳಿಕೋಟೆ:ಮಾ.23: ಹಿಂದಿನ ಜನ್ಮದ ಬಲದ ಮುಂದೆ ಇಂದಿನ ಜನ್ಮದ ಬುದ್ದಿ ಬಲದ ಆಟ ಸಾಗುವದಿಲ್ಲಾ ಸಂಸ್ಕಾರ ಬಲವೆಂಬುದು ಬುದ್ದಿಬಲವೆಂಬುದು ಹೆಚ್ಚು ಶಕ್ತಿಯುಳ್ಳದ್ದಾಗಿರುತ್ತದೆ ಕೆಟ್ಟ ಸಂಸ್ಕಾರವು ಹಿಂದೆ ಬರುತ್ತದೆ ಒಳ್ಳೆಯ ಸಂಸ್ಕಾರವು ಹಿಂದೆ ಬರುತ್ತದೆ ಎಂದು ಮಸೂತಿಯ ಶ್ರೀ ಡಾ.ಶಿವಲಿಂಗಯ್ಯ ಶರಣರ ಅವರು ನುಡಿದರು.
ಶುಕ್ರವಾರರಂದು ಸ್ಥಳೀಯ ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯವರ ವತಿಯಿಂದ ಶ್ರೀ ಸಾಯಿ ಸದಾನಂದ ಆಶ್ರಮದಲ್ಲಿ ಏರ್ಪಡಿಸಲಾದ ಶ್ರೀ ಸಾಯಿ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಮನುಜ ಕೆಟ್ಟ ಸಂಸ್ಕಾರದತ್ತ ಒಲವು ತೊರುವದು ಬೇಡಾ ಒಳ್ಳೆಯ ಸಂಸ್ಕಾರಗಳನ್ನು ಅಭಿವೃದ್ದಿ ಪಡಿಸಿಕೊಳ್ಳುತ್ತಾ ಮನದಲ್ಲಿ ಒಳ್ಳೆಯ ಸಂಸ್ಕಾರ ದೃಡಗೊಳಿಸಿಕೊಳ್ಳಬೇಕೆಂದು ಹೇಳಿದ ಶ್ರೀಗಳು ಶ್ರೀ ಶಿರಡಿ ಸಾಯಿ ಬಾಬಾರವರು ಬ್ರಹ್ಮ, ವಿಷ್ಣು, ಮಹೇಶ್ವರ ದೇವನ ರೂಪ ಹೊಂದಿದ್ದಾರೆ ಅವರು ದೇವನ ಒಲುಮೆ ಪಡೆದುಕೊಂಡು ಇನ್ನೂ ಭಕ್ತರನ್ನು ಉದ್ದರಿಸುತ್ತಾ ಸಾಗಿದ್ದಾರೆ ಅಂತಹ ಮಹಿಮಾ ಪುರುಷನ ನೆನೆಯುವಂತಹ ಭಜನಾ ಮಂಡಳಿ ತಾಳಿಕೋಟೆಯಲ್ಲಿರುವದು ಸಂತಸ ತಂದಿದೆ ಎಂದು ಕೆಲವು ಸಾಯಿಬಾಬಾರವರ ಪವಾಡ ದೃಶ್ಯಗಳ ಕುರಿತು ವಿವರಿಸಿದರು.
ಇನ್ನೋರ್ವ ಸನ್ಮಾನ ಸ್ವಿಕರಿಸಿದ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯು ಕಳೆದ 7 ವರ್ಷಗಳಿಂದ ತನ್ನ ಸೇವೆಯಲ್ಲಿ ಮುಂದುವರೆದಿದೆ ಅಷ್ಟೇ ಅಲ್ಲದೇ ಅಸಂಖ್ಯಾತ ಭಕ್ತರನ್ನು ಒಂದುಗೂಡಿಸಿಕೊಂಡು ದಿನನಿತ್ಯ ಸಾಯಿಬಾಬಾರವರ ಭಜನೆ ಹಾಗೂ ಅವರ ಪವಾಡ ದೃಶ್ಯಗಳನ್ನು ಮೆಲಕು ಹಾಕುತ್ತಾ ಅನ್ಯರಿಗೆ ತಿಳಿಸುತ್ತಾ ಸಾಗಿರುವದು ಆದ್ಯಾತ್ಮ ಪ್ರೀಯರಿಗೆ ಅನುವು ಮಾಡಿಕೊಟ್ಟಂತಾಗಿದೆ ಎಂದು ಸಾಯಿ ಅನ್ನುವ ಎರಡಕ್ಷರಗಳಲ್ಲಿ ಮನತಲ್ಲಣಗೊಳಿಸುವಂತ ಶಕ್ತಿ ಇದೆ ಸಾಯಿಬಾಬಾರವರು ನಂಬಿದವರಿಗೆ ಕೈ ಬಿಟ್ಟಿಲ್ಲಾ ಎಂಬುದನ್ನು ಅರ್ಥೈಸಿಕೊಂಡ ಜನತೆ ವಿವಿದಡೆಯಲ್ಲಿ ಅವರ ಮಂದಿರಗಳನ್ನು ನಿರ್ಮಿಸಿ ದಿನನಿತ್ಯ ಭಕ್ತಿ ಸಮರ್ಪಿಸುತ್ತಾ ಸಾಗಿರುವದು ಹರ್ಷತಂದಿದೆ ಎಂದರು.
ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ ಕಾರ್ಯದರ್ಶಿ ಆನಂದ ಕುಲಕರ್ಣಿ ಹಾಗೂ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಭೋರಮ್ಮ ಕುಂಭಾರ, ಹಾಗೂ ಪ್ರೇಮಾಬಾಯಿ ದೆಗಿನಾಳ ಅವರು ಮಾತನಾಡಿ ಅಧರ್ಮ ಅನ್ನುವದು ಸಾಶವಾಗಿ ಧರ್ಮ ಅನ್ನುವದು ಉಳಿಯುತ್ತದೆ ಕಾರಣ ಸಾಯಿ ಬಾಬಾರವರಂತಹ ಸತ್ಪುರುಷರ ಸೇವಾ ಕಾರ್ಯ ಇಂದಿನ ದಿನಮಾನದಲ್ಲಿ ಎಲ್ಲರಿಗೂ ಅಗತ್ಯವಾಗಿದೆ ಎಂದರು.ಯಾವುದೇ ಸೇವಾ ಕಾರ್ಯಕ್ಕೆ ಮುಂದಾಗುವಾಗ ನಾವು ಮೊದಲನೆಯ ಹೆಜ್ಜೆಯನ್ನು ಗಟ್ಟಿಯಾಗಿ ಇಟ್ಟುಕೊಂಡು ಸಾಗಿದರೆ ಮುಂದಿಡುವ ಹೆಜ್ಜೆಗಳನ್ನು ಸರಾಗವಾಗಿ ಸಾಗಿ ಮುಂದೆ ಸಾಗಲು ಅನುಕೂಲವಾಗುತ್ತದೆ ಇಂತಹ ಸೇವಾ ಕಾರ್ಯದಿಂದ ಮಾನವ ಜನ್ಮ ಸಾರ್ಥಕವಾಗಲಿದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಸಾಯಿ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವಲ್ಲದೇ ಸಾಯಿಬಾಬಾರವರ ಭಜನೆ ಹಾಗೂ ಚಿಕ್ಕ ಮಕ್ಕಳಿಂದ ಭಕ್ತಿಯ ನೃತ್ಯಕಲೆಯನ್ನು ಪ್ರದರ್ಶಿಸಲಾಯಿತು.
ಈ ಸಮಯದಲ್ಲಿ ಲಕ್ಷ್ಮೀಬಾಯಿ ಸಜ್ಜನ, ಮೀನಾಕ್ಷೀ ಕೊಳಕೂರ, ಪದ್ಮಾ ಹಜೇರಿ, ಅನ್ನಪೂರ್ಣಾ ಗೋನಾಳ, ಗಂಗಮ್ಮ ಕುಂಭಾರ, ಕಸ್ತೂರಿಬಾಯಿ ಕುಂಭಾರ, ಸುಭದ್ರಾ ಗೌಡಗೇರಿ, ಭಾಗ್ಯಶ್ರೀ ಕೊಳಕೂರ, ಕಾಶಿಬಾಯಿ ಆಲೂರ, ರೇಣುಕಾ ಕುಂಭಾರ, ಯಮನವ್ವ ದನ್ನೂರ, ಮುತ್ತು ಕುಂಭಾರ, ಅಮೋಘ ಕುಲಕರ್ಣಿ, ಸಂತೋಶ ಇಲಕಲ್ಲ, ಅನೀಲ ಕುಂಭಾರ, ಡಿ.ಎಲ್.ಹಂಚಾಟೆ, ಸಿದ್ದು ಕೊಳಕೂರ, ಎಂ,ಆಯ್,ಅಮರಾಪೂರ, ಎ.ಜಿ.ಹೂಗಾರ, ಮೊದಲಾದವರು ಪಾಲ್ಗೊಂಡಿದ್ದರು.