ಸಂಸಿಧ್ ನ್ಯಾಷನಲ್ ಶಾಲೆಯಿಂದ ಉತ್ತಮ ಸಾಧನೆ

ಕನಕಪುರ, ಜು.೨೧:ಸಂಸಿಧ್ ಇಂಟರ್ ನ್ಯಾಷಿನಲ್ ಸ್ಕೂಲ್‌ನ ವಿದ್ಯಾರ್ಥಿಗಳು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ೧೪ನೇ ರಾಜ್ಯ ಮಟ್ಟದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನ ಹಾಗೂ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ.
೩ನೇ ತರಗತಿಯ ವಿದ್ಯಾರ್ಥಿಯಾದ ವಿರಾಟ್ ಎಸ್. ೫೦ಮೀಟರ್‌ನ ಓಟದ ಸ್ವರ್ಧೆಯಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದದಾರೆ. ೭ನೇ ತರಗತಿಯ ವಿದ್ಯಾರ್ಥಿ ಚಿರಾಗ್ ಎಸ್. ಗೌಡ ೧೦೦೦ಮೀಟರ್ ಓಟದಲ್ಲಿ ಬೆಳ್ಳಿಯ ಪದಕವನ್ನು ಗಳಿಸಿದ್ದಾರೆ.
ಹಾಗೆಯೇ ೭ನೇತರಗತಿಯ ವಿದ್ಯಾರ್ಥಿನಿ ಪ್ರಿಯಾ ಡಿ. ಉದ್ದ ಜಿಗಿತದಲ್ಲಿ ಬೆಳ್ಳಿಯ ಪದಕವನ್ನು ಪಡೆದಿದ್ದಾಳೆ. ೩ನೇ ತರಗತಿಯ ವಿದ್ಯಾರ್ಥಿಯಾದ ನಿಶ್ಚಿತ್ ೫೦ ಮೀಟರ್ ಓಟದಲ್ಲಿ ಬೆಳ್ಳಿಯ ಪದಕವನ್ನು ಗೆದ್ಧಿದ್ದಾನೆ.. ೩ನೇ ತರಗತಿಯ ವಿದ್ಯಾರ್ಥಿ ಚಿನ್ಮಯಿ ಎಲ್. ೪*೫೦ ಮೀಟರ್ ರಿಲೆಯಲ್ಲಿ ಬೆಳ್ಳಿಯ ಪದಕ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲರಾದ ಜೋಯ್ಸ ಬೆನೆಡಿಕ್ಟ್ ಲೋಬೋ ತಿಳಿಸಿದ್ದಾರೆ.
ನಂತರ ಮಾತನಾಡಿ ನಮ್ಮ ಶಾಲೆಯ ಕ್ರೀಡಾಸಕ್ತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉತ್ತಮ ತರಬೇತಿಯನ್ನು ನೀಡುವ ಮೂಲಕ ಪ್ರೋತ್ಸಾಹವನ್ನು ನೀಡಲಾಗುತ್ತದೆ ಹಾಗೆಯೇ ನಮ್ಮ ಶಾಲೆಯ ಸಂಸ್ಥಾಪಕದರಾದ ವಾಸ ಶ್ರೀನಿವಾಸ್‌ರಾವ್ ಕೂಡ ಮಕ್ಕಳ ಅಭಿರುಚಿಗೆ ತಕ್ಕಂತೆ ಪ್ರೋತ್ಸಾಹವನ್ನುನಮಗೂ ನೀಡುತ್ತಿರುವುದರಿಂದ ನಮ್ಮ ಮಕ್ಕಳು ಹೆಚ್ಚಿನ ಬಹುಮಾನವನ್ನು ಪಡೆಯಲು ಸಾಧ್ಯವಾಗಿದೆ ಈಸಂದರ್ಭದಲ್ಲಿ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.