ಸಂಸಾರವೇ ಬೇರೆ, ಸಂಸ್ಕಾರವೇ ಬೇರೆ:ಮಸೂತಿಶ್ರೀ

ತಾಳಿಕೋಟೆ:ಮಾ.16: ಮಾನವರಾದ ನಮ್ಮ ಬಧುಕುವ ಬಧುಕು ಶ್ರೇಷ್ಠ ಬಧುಕು ಆಗಬೇಕು ಮತ್ತು ಸಾರ್ಥಕ ಬಧುಕಾಗಲು ಸೂಕ್ತ ಮಾರ್ಗಗಳನ್ನು ಅನುಸರಿಸುತ್ತಾ ಸಾಗಬೇಕೆಂದು ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಶುಕ್ರವಾರರಂದು ಜರುಗಿದ 5ನೇ ದಿನದಂದು ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ಬಧುಕುತ್ತಿರುವ ಬಧುಕು ಶ್ರೇಷ್ಠ ಬಧುಕಾಗಬೇಕಾದರೆ ಬಧುಕು ಸಿರಿತನ ಬಧುಕಾಗುವದಿಲ್ಲಾ ಅನುಕೂಲತೆಯ ಬಧುಕು ಆಗುವದಿಲ್ಲಾ ಹೆಸರು ಹೊಗಳಿಕೆ ಕೀರ್ತಿಗಳನ್ನು ಪಡೆದುಕೊಳ್ಳುವದಲ್ಲಾ ಹೆಂಡತಿಗೆ ಮೋಸ, ಮಕ್ಕಳಿಗೆ ಅನ್ಯಾಯ, ಯಾರನ್ನು ನೋಯಿಸದೇ ತಾನು ಸಹ ಮೋಸ ಹೋಗದೇ ಸಾಗಿಸುವಂತಹ ಬಧುಕೇ ಶ್ರೇಷ್ಠ ಬಧುಕು ಆಗುತ್ತದೆ ಎಂದರು. ಹೆಂಡತಿಗೆ ಮೋಸ ಮಕ್ಕಳಿಗೆ ಅನ್ಯಾಯ ಯಾರನ್ನು ನೋಯಿಸದೇ ತಾನು ಮೋಸ ಹೋಗದೇ ಈ ನಾಲ್ಕರಲ್ಲಿ ಯಾವುದೇ ಒಂದು ವಿಚಾರದಲ್ಲಿ ಯಡವಿದರೂ ಯಡವಟ್ಟಾದರೂ ಬಧುಕಿನ ಶ್ರೇಷ್ಠತೆ ಎಂಬುದು ಕಳೆದೇ ಹೋಗುತ್ತದೆ ಎಂದರು. ಬಧುಕುತ್ತಿರುವ ಬಧುಕು ಶ್ರೇಷ್ಠವಾಗಬೇಕಾದರೆ ಈ ಮೇಲಿನ 4ನ್ನು ಸಕ್ರಮವಾಗಿ ಪಾಲಿಸಬೇಕು ಈ ಸಕ್ರಮವಾಗಿ ಪಾಲಿಸಬೇಕಾದರೆ ಜೀವನದಲ್ಲಿ ಸಂಬವಿಸುವ ಬಗೆ ಬಗೆಯ ಈ ತೀರಹದ ಸಂಘಟನೆಗಳಲ್ಲಿ ಸೋಲುವದು ತಪ್ಪಲ್ಲಾ ಯಾವುದೋ ಒಂದು ಇತರೆ ವಿಚಾರದಲ್ಲಿ ವಿಜಯ ಪಡೆಯಲು ಹೋಗಿ ಈ ನಾಲ್ಕು ವಿಚಾರಗಳಿಗೆ ದಕ್ಕೆ ಬಂದರೆ ಬಧುಕಿನ ಶ್ರೇಷ್ಠತೆಗೆ ದಕ್ಕೆ ಬರುತ್ತದೆ ಆಗ ಬಧುಕು ವ್ಯರ್ಥ ಬಧುಕಾಗುತ್ತದೆ ಎಂದರು.
ಅಂತಹ ಶ್ರೇಷ್ಠ ಬಧುಕನ್ನು ರೂಡಿಸಿಕೊಂಡ ರಾಚಮ್ಮ ಆಕೆಯ ಪತಿ ಗುರುಲಿಂಗಯ್ಯ ಈ ದಂಪತಿಗಳು ಗುರುವಿನ ಆಶಿರ್ವಾದದಿಂದ ಪತ್ನಿ ರಾಚಮ್ಮ ದಿನ ತುಂಬಿ ಜನ್ಮ ನೀಡಿದ ಗಂಡ ಮಗುವಿಗೆ ನಾಮಕರಣ ಮಾಡುವ ತಯಾರಿ ಮಾಡುತ್ತಾರೆ ಸುತ್ತಮುತ್ತಲಿನ ಸುಮಂಗಲೆಯರೂ ಸಹ ಈ ನಾಮಕರಣ ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲಿಲ್ಲದ ಉತ್ಸಾಹ ಭರಿತರಾಗಿ ಆಗಮಿಸಿ ವಿವಿಧ ಹೆಸರುಗಳನ್ನು ಇಡುವದರ ಮೂಲಕ ಕೊನೆಗೆ ಶ್ರೀ ಗುರು ನಿರುಪಾದೀಶ್ವರ ಎಂಬ ನಾಮಕರಣ ಮಾಡಿದಂತೆ 4 ದಿನದಿಂದ ಸಾಗಿಬಂದ ಈ ಪುರಾಣ ಪ್ರವಚನದ 5 ನೇ ದಿನದಂದು ಈ ಕಾರ್ಯಕ್ರಮದಲ್ಲಿಯೂ ಸುಮಂಗಲೆಯರು ಒಗ್ಗೂಡಿ ನೂತನ ತೊಟ್ಟಿಲು ಶ್ರೀ ಗುರು ನಿರುಪಾದೀಶ್ವರರ ಮಹಾ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಹೆಸರಿಡುವ ಮೂಲಕ ತೊಟ್ಟಿಲು ಕಾರ್ಯಕ್ರಮದ ಹಾಡುಗಳನ್ನು ಹಾಡಿ ಸುಮಂಗಲೆಯರು ಭಕ್ತಿ ಭಾವ ಮೆರೆದರು.
ಕಾಮ ಕ್ರೋದ ಮದ ಮತ್ಸರ ಇವುಗಳನ್ನು ದೂರ ಸರಿಸಬೇಕು ಆಸೆ ಇರಬೇಕು ಆದರೆ ದುರಾಸೆ ಇರಬಾರದೆಂದರು. ಮಾಂಸದ ಮುದ್ದೆಯಿಂದ ಮನುಷ್ಯರಾಗಿ ಬಂದಿದ್ದೇವೆ ಹರನಾಗಿ ಹೋಗಬೇಕಾಗಿದೆ ಕಾರಣ ಒಳ್ಳೆಯ ಸಂಸ್ಕಾರದೊಂದಿಗೆ ನಡೆಯಬೇಕೆಂದು ಹೇಳಿದ ಶ್ರೀಗಳು ತೊಟ್ಟಿಲದ ಮಹತ್ವ ಅದಕ್ಕೆ ಕಟ್ಟಿದ 4 ಹಗ್ಗಗಳ ಮಹತ್ವ ಕುರಿತು ವಿವರಿಸಿದ ಶ್ರೀಗಳು ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳನ್ನು ಈ ತೊಟ್ಟಿಲದ ನಾಲ್ಕು ಹಗ್ಗಗಳು ಸೂಚಿಸುತ್ತವೆ ಎಂದು ಹೇಳಿದ ಶ್ರೀಗಳು ಅರ್ಥ ಅಂದರೆ ದುಡ್ಡ, ಧರ್ಮದಿಂದ ಹಣಗಳಿಸಬೇಕು, ಕಾಮ, ಕ್ರೋದ, ಮದ ಮತ್ಸರದಿಂದ ದೂರವಿರಬೇಕೆಂದು ಸಂಸಾರದಲ್ಲಿ ಸಂಸ್ಕಾರ ಬೇಕು ಎಂಬುದರ ಕುರಿತು ಬಹು ಮಾರ್ಮಿಕವಾಗಿ ನೆರೆದ ಭಕ್ತ ಸಮೂಹಕ್ಕೆ ವಿವರಿಸಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.