ಸಂಸಾರವೆಂಬುದು ಕೇವಲ ದೈಹಿಕ ಸಂಬಂಧವಲ್ಲ ಮನಸ್ಸು ಮನಸ್ಸುಗಳ ಸಮ್ಮಿಲನ

ಗಬ್ಬೂರು.ಜು,೨೨- ಸಂಸಾರವೆಂಬುದು ಕೇವಲ ದೈಹಿಕ ಸಂಬಂಧವಲ್ಲ ಮನಸ್ಸು ಮನಸ್ಸು ಸಮ್ಮಿಲನ,ಸಂಸಾರದ ಸತಿ-ಪತಿ ಎಂಬ ಜೋಡೆತ್ತುಗಳು ನಂಬಿಕೆ ಹೊಂದಾಣಿಕೆ ಎಂಬ ಕೀಲುಗಳನ್ನು ಗಾಡಿಗೆ ಹಾಕಿ ಓಡಿಸಿದಾಗ ಸಂಸಾರ ಸೂಸತ್ರವಾಗಿ ಸಂತೋಷವಾಗಿ ನಡೆಯಲು ಸಾಧ್ಯ.
ಸಮಾಜದ ಸ್ವಾಸ್ಥ್ಯಚೆನ್ನಾಗಿರಲು ಸುಸಂಸ್ಕೃತ ಸಂಸಾರಯುತ ಸಂಸಾರ ಬಹಳ ಮುಖ್ಯ ಸಂಸಾರಜೀವನ ನಿಂತಿರುವುದು ಪ್ರೀತಿ ಹೊಂದಾಣಿಗೆ ನಂಬಿಕೆಗಳ ಮೇಲೆ ಅವುಗಳಿಗೆ ಚ್ಯುತಿ ಬರದ ಹಾಗೆ ನಡೆದುಕೊಂಡು ಬಾಳಬೇಕು ಎಂದು ಸುಲ್ತಾನಪೂರು ಬೃಹನ್ಮಠದ ಶಂಭುಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಕಿವಿಮಾತು ಹೇಳಿದರು.
ದೇವದುರ್ಗ ತಾಲೂಕಿನ ಹಂಚಿನಾಳ ಗ್ರಾಮದ ಕೆ.ಬಿ.ಹೆಚ್. ಕುಟುಂಬದವರ ಬಾಲಯ್ಯ ಅವರ ಮಗಳ ಮದುವೆಯಲ್ಲಿ ಸಾನಿಧ್ಯ ವಹಿಸಿ ಆಶ್ರೀವಚನ ನೀಡಿದರು. ಹಣವಿರುವ ಜನಗಳು ಕೊಡುವ ಗುಣವನ್ನು ಬೆಳಿಸಿಕೊಳ್ಳುವ ಶ್ರೇಷ್ಠ ಕೆಲಸವನ್ನು ಮಾಡಬೇಕಿದೆ.ಹಸಿದ ಹೊಟ್ಟೆಗೆ ಅನ್ನ ನೀಡಿವುದು, ನಿರಾಶ್ರಿತರಿಗೆ ಆಶ್ರಯ ನೀಡುವುದು, ಪ್ರತಿಭಾವಂತರಿಗೆ ಪುರಸ್ಕರಿಸಯುವುದು ಸಮಾಜದ ಲಕ್ಷಣ.
ಆದರೆ ಇಂದಿನ ಕೆಲವು ರಾಜಕಾರಣಿಗಳು, ಅಧಿಕಾರಿಗಳು, ಉಳ್ಳವರು ತಮ್ಮ ಪ್ರತಿಷ್ಠೆಯನ್ನು ವೈಭವೀಕರಿಸಲು ಶ್ರೀಮಂತಿಕೆಯನ್ನು ತೋರ್ಪಡಿಸಲು ದುಂದುವೆಚ್ಚ ಮಾಡಿ ಮದುವೆ ನಾಮಕರಣ ಗೃಹ ಪ್ರವೇಶ ಇನ್ನಿತರ ಕಾರ್ಯಕ್ರಮಗಳ ಮೂಲಕ ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡುವುದನ್ನು ನಿಲ್ಲಿಸಿ ಬಡವರ ಕಲ್ಯಾಣಕ್ಕೆ ವಿಧ್ಯಾಭ್ಯಾಸಕ್ಕೆ ನೀಡುವ ಉದಾರತೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಸುಲ್ತಾಪೂರು ಬೃಹನ್ಮಠದ ಶಂಭುಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.