ಸಂಸಾರದ ನಿರ್ವಹಣೆ ಮಹಿಳೆಯಿಂದ ಮಾತ್ರ ಸಾಧ್ಯ

ದಾವಣಗೆರೆ.ಮಾ.೧೨: ಸಂಸಾರದ ನಿರ್ವಹಣೆ ಮಹಿಳೆಯಿಂದ ಮಾತ್ರ ಸಾಧ್ಯ. ಹೀಗಾಗಿ ಮಹಿಳೆಯರು ತಾವು ಪಡೆದ ಸಾಲವನ್ನು ಕುಟುಂಬದ ಆರ್ಥಿಕ ಸುಸ್ಥಿರತೆಗೆ ಬಳಸಿಕೊಳ್ಳಬೇಕು ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವ ರ್ಧನ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ವಸಂತ ಕುಮಾರ್ ಹೇಳಿದರು.ತಾಲ್ಲೂಕಿನ ಕಾಡಜ್ಜಿ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಸಂಜೀವಿನಿ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾ ಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಹಿಳೆಯರು ಅನಾವಶ್ಯಕವಾಗಿ, ಯಾರದೋ ಮೇಲಿನ ಪೈಪೋಟಿಗಾಗಿ ಸಾಲ ತೆಗೆದುಕೊಳ್ಳಬಾರದು. ಬದಲಾಗಿ ಹಣದ ಅವಶ್ಯಕತೆ ಇರುವವರು ತಮ್ಮ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಲ ಪಡೆದುಕೊಳ್ಳ ಬೇಕು ಎಂದು ಹೇಳಿದರು.ತಾ.ಪಂ. ಕಾರ್ಯಕ್ರಮ ವ್ಯವಸ್ಥಾಪಕ ರಾಮಚಂದ್ರಪ್ಪ ಮಾತನಾಡಿ, ಸ್ತಿçà ಶಕ್ತಿ ಸಂಘಗಳು, ಮಹಿಳಾ ಸಂಘಗಳು ಮೂಲ ಹಣಕಾಸು ನಿರ್ವಹಣೆಯ ತತ್ವಗ ಳನ್ನು ಪಾಲಿಸಬೇಕು. ಪ್ರತಿ ವರ್ಷ ಸಂಘದ ಆಡಿಟ್ ಮಾಡಿಸಬೇಕು. ಮಾನವ ಸಂಪನ್ಮೂಲ ನೀತಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿ ದರು.ಕಾರ್ಯಕ್ರಮ ಉದ್ಘಾಟಿಸಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಸಿ.ಚಂದ್ರಪ್ಪ ಮಾತನಾಡಿ, ಸಂಘಗಳ ಮೂಲಕ ಮಹಿಳೆಯರು ಸಬಲೀಕರಣಗೊಳ್ಳುತ್ತಿರು ವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲೂ ಮಹಿಳಾ ಸಂಘಗಳಿಗೆ ಪಂಚಾಯ್ತಿ ವತಿಯಿಂದ ಅನುಕೂಲತೆ ಕಲ್ಪಿಸಲಾಗುವುದು ಎಂದು ಹೇಳಿದರು. ಅಧ್ಯಕ್ಷತೆಯನ್ನು ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ, ಒಕ್ಕೂಟದ ಅಧ್ಯಕ್ಷರೂ ಆದ ಸುಧ ಕರಿಬಸಪ್ಪ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಂಯುಕ್ತ ಕರ್ನಾಟಕ ಹಿರಿಯ ಉಪ ಸಂಪಾದಕ ಪಿ.ಮಂಜುನಾಥ ಕಾಡಜ್ಜಿ, ಗ್ರಾ.ಪಂ. ಉಪಾಧ್ಯಕ್ಷೆ ನಾಗಮ್ಮ, ಪಿ.ಡಿ.ಓ. ಮಮತಾ, ಕಾರ್ಯದರ್ಶಿ ಕೆಂಚಪ್ಪ, ಸದಸ್ಯರಾದ ಉಮೇಶಯ್ಯ, ಶಬ್ಬೀರ್, ಕೆಂಚಪ್ಪ, ಜಾಹೀರಾಲಿ, ಕೆ.ಪ್ರಕಾಶ್, ನಾಗರಾಜ್, ನಿಂಗಪ್ಪ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರಾದ ರಾಜಲಕ್ಷಿö್ಮ, ರಫೀಕ್, ವಿದ್ಯಾ, ಗೊರಖ್‌ನಾಥ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಒಕ್ಕೂಟದ ಎಂಬಿಕೆ ಕೆ.ಎ. ಉಷಾ ಮರಿಯಪ್ಪ ಕಾರ್ಯಕ್ರಮ ನಿರೂಪಿಸಿದರು. ಶೃತಿ ಮತ್ತು ಮಂಜುಳ ಸ್ವಾಗತಿಸಿ, ವಂದಿಸಿದರು.ಇದೇ ಸಂದರ್ಭದಲ್ಲಿ ರಂಗೋಲಿ, ಕಾಯಿನ್ ಗೇಮ್, ರನ್ನಿಂಗ್, ಮ್ಯೂಸಿ ಕಲ್ ಚೇರ್, ಕೆರೆ ದಡ, ಬಿಸ್ಕಿಟ್ ಆಟ, ಲೆಮನ್ ಸ್ಪೂನ್ ಮತ್ತು ಕಬ್ಬಡ್ಡಿ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.