ಸಂಸದ ಹೆಗಡೆ ಮಾಧ್ಯಮಗಳ ಕ್ಷಮೆ ಯಾಚಿಸಲಿ


ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮಾ.16 ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಮಾಧ್ಯಮಗಳ  ಬಗ್ಗೆ ಕೀಳಾಗಿ ಮಾತನಾಡಿದ್ದು ಕೂಡಲೇ ಬೇಷರತ್ತಾಗಿ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿ ಶುಕ್ರವಾರ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘ ತಹಶೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಅವರಿಗೆ  ಮನವಿ ಸಲ್ಲಿಸಿದರು.
 ಕಾನಿಪ ತಾಲೂಕ ಘಟಕದ ಅಧ್ಯಕ್ಷ ಉಮಾಪತಿ ಶೆಟ್ಟರ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಕ್ಕೆ ತನ್ನದೇ ಆದ ಮಹತ್ವ ಸ್ಥಾನ ಇದೆ. ತಮಗೆ ಬೇಕಾದಾಗ ಮಾಧ್ಯಮವನ್ನು ಹೊಗಳುವುದು ಬೇಡವಾದಾಗ ತೆಗಳುವುದು ರಾಜಕಾರಣಿಗಳಿಗೆ ಪರಿಪಾಠವಾಗಿದೆ. ಇಂತಹ ರಾಜಕಾರಣಿಗಳಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸದಂತೆ  ಬಿಜೆಪಿ ಪಕ್ಷ ಕ್ರಮ ಕೈಗೊಳ್ಳಬೇಕು ಎಂದರು.
 ಈ ಸಂದರ್ಭದಲ್ಲಿ ಕಾನಿಪ  ಜಿಲ್ಲಾ ಉಪಾಧ್ಯಕ್ಷ  ಬುಡ್ಡಿ ಬಸವರಾಜ್ ತಾಲೂಕು ಉಪಾಧ್ಯಕ್ಷ ಅಶೋಕ್ ಉಪ್ಪಾರ್, ಖಜಾಂಚಿ ರಾಜಾ ವಲಿ, ಸಹ ಕಾರ್ಯದರ್ಶಿ ಅಕ್ಕಂಡಿ ಬಸವರಾಜ್ , ಸದಸ್ಯರಾದ ಸಿ ಶಿವಾನಂದ್ ಜೆ. ನಾಗರಾಜ್  ಬಿ ಕೆ ವಿಶ್ವನಾಥ್ ಬಿಕೆ ಬಸವರಾಜ್, ಅಬ್ದುಲ್ ಗಫರ್ ಖಾನ್ ಇದ್ದರು

One attachment • Scanned by Gmail