ಸಂಸದ ಹೆಗಡೆ ಪ್ರತಿಕೃತಿ ದಹಿಸಿ ಪ್ರತಿಭಟನೆ

ಕಲಬುರಗಿ,ಮಾ 14: ಸಂವಿಧಾನ ಬದಲಾವಣೆ ಕುರಿತು ಸಂಸದ ಅನಂತಕುಮಾರ ಹೆಗಡೆ ನೀಡಿದ ಹೇಳಿಕೆ ಖಂಡಿಸಿ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸಲಾಯಿತು.
ಕೆಲವು ಮತಾಂಧ ಶಕ್ತಿಗಳು, ಜಾತಿವಾದಿಗಳು ನಿರಂತರ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವದು ಖಂನೀಯ.ಇನ್ನು ಮುಂದೆ ರಾಜ್ಯ ಸರಕಾರ ಸಂವಿಧಾನದ ವಿರುದ್ಧ ಹಗುರವಾಗಿ ಮಾತನಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸುರೇಶ ಹಾದಿಮನಿ,ಎಚ್.ಶಂಕರ,ಬಿ.ಸಿ ವಾಲಿ,ಕೃಷ್ಣಪ್ಪ ಕರಣಿಕ,ಉಮೇಶ ನರೋಣಾ,ರೇವಣಸಿದ್ದ ಜಾಲಿ,ಮಹಾದೇವ ತರನಳ್ಳಿ,ರವಿ ಬಡಿಗೇರ,ಸುಭಾಷ ಡಾಂಗೆ,ಮಹಾನಿಂಗ ಅಂಗಡಿ,ಮಹೇಂದ್ರ ಕೊಳ್ಳಿ ಸೇರಿದಂತೆ ಹಲವರು ಪಾಲ್ಗೊಂಡರು.