ಸಂಸದ- ಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ.

ಜಗಳೂರು.ಮಾ.೨೨; ಸಂಸದ ಜಿಎಂ ಸಿದ್ದೇಶ್ಬರ್ ಮತ್ತು ಶಾಸಕ ಎಸ್ ವಿ ರಾಮಚಂದ್ರ ಅವರ ನೇತೃತ್ವದಲ್ಲಿ  ವಸತಿ ಶಾಲೆಗಳು, ರಸ್ತೆ ಅಭಿವೃದ್ದಿ ಕಾಮಗಾರಿ ಸೇರಿದಂತೆ 50 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಯಿತು.ತಾಲೂಕಿನ ಕಾಮಗೇತನಹಳ್ಳಿ ,ಚಿಕ್ಕಬಂಟನಹಳ್ಳಿ ಗ್ರಾಮದ ಹೊರಹೊಲಯದಲ್ಲಿ ಸಮಾಜಕಲ್ಯಾಣ ಇಲಾಖೆ ಹಾಗೂ ಪ.ವರ್ಗಗಳ ಕಲ್ಯಾಣ ಇಲಾಖೆ ,ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು,ಜಿಲ್ಲಾ ಪಂಚಾಯತ್ ದಾವಣಗೆರೆ,ತಾಲೂಕು ಪಂಚಾಯಿತಿ  ಇವರುಗಳ ಸಂಯುಕ್ತಾಶ್ರಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಅಂಬೇಡ್ಕರ್ ವಸತಿ ಶಾಲೆಗಳ ಶಂಕುಸ್ಥಾಪನೆ ಕಾರ್ಯಕ್ರಮಗಳನ್ನು  ನೆರವೇರಿಸಿ ನಂತರ ಮಾತನಾಡಿದರು.
ಅಭಿವೃದ್ದಿ ಕೆಲಸಗಳನ್ನು ಸಹಕಾರ ನೀಡಬೇಕು ಕೆಲಸ ಮಾಡದಿದ್ದರೆ ಟೀಕಿಸಬೇಕು ವಿನಾಕಾರಣ  ಆರೋಪಗಳು ಸರಿಯಲ್ಲ ಭದ್ರಾಮೇಲ್ದಂಡೆ ಯೋಜನೆಗೆ ಲ್ಯಾಂಡ್ ಅಕ್ವಿಜೇಷನ್ ಮಾಡಿಕೊಡಿ ಎಂದು ಮಾಜಿ ಶಾಸಕರಿಗೆ ತಿಳಿಸಿದ್ದರೂ ಕಿವಿಗೊಡಲಿಲ್ಲ  ಇದೀಗ ಪತ್ರಿಕಾ  ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ.ಕೆಲವೇಳೆ ಕಾಮಗಾರಿಗಳು ವಿಳಂಬವಾಗಬಹುದು ಆದರೆ ಅಭಿವೃದ್ದಿ ಕೆಲಸಗಳು ಮಾತ್ರ ಜರುಗುತ್ತವೆ.ಏಕಕಾಲದಲ್ಲಿ ಎಲ್ಲಾ ಕಾರ್ಯಗಳನ್ನು ಪೂರೈಸಲು ಸಾಧ್ಯವಿಲ್ಲ ಹಂತಹಂತವಾಗಿ ಕೈಗೊಳ್ಳಲಾಗುವುದು.ವಿರೋಧ ಪಕ್ಷದವರು ಆಪಾದನೆ ಮಾಡುವುದು ಸುಲಭ ಸಹಿಸಿಕೊಳ್ಳವುದು ಕಷ್ಟಕರ ಎಂದು ಎದುರೇಟು ನೀಡಿದರು.ಕಟ್ಟಡದ ಕಾಮಗಾರಿ ಗುಣಮಟ್ಟದ್ದಾಗಲಿ ಒಂದು ವರ್ಷದೊಳಗೆ ಕಟ್ಟಡ ಪೂರ್ಣಗೊಳ್ಳಲಿ ಗುತ್ತಿಗೆದಾರರು ನಿರ್ಲಕ್ಷ್ಯವಹಿಸಿದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಗಡಿಗ್ರಾಮದಲ್ಲಿ ವಸತಿಶಾಲೆ ನಿರ್ಮಾಣವಾಗುತ್ತಿರುವುದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ತಳಹದಿಯಾಗಲಿದೆ. ಸ್ಥಳಿಯ ಪೋಷಕರು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಉನ್ನತ ಹುದ್ದೆಗಳು ಅಲಂಕರಿಸಲು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.ಶಾಸಕ ಎಸ್ ವಿ ರಾಮಚಂದ್ರ ಮಾತನಾಡಿ,‌ಉಪಮುಖ್ಯಮಂತ್ರಿ ಗೊವಿಂದ ಕಾರಜೋಳ ಅವರ ಸಹಕಾರದಿಂದ ತಾಲೂಕಿಗೆ ತಲಾ 22  ಕೋಟಿ ವೆಚ್ಚದಲ್ಲಿ 2 ವಸತಿ ಶಾಲೆಗಳನ್ನು  ಮಂಜೂರಾತಿ ಮಾಡಿಸಿಕೊಟ್ಟ ಪಲವಾಗಿ ಶಂಕುಸ್ಥಾಪನೆ ಹಂತ ತಲುಪಿದ್ದು  ಹಿಂದುಳಿದ ತಾಲೂಕಿನ ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಮಾಗಡಿ ಗ್ರಾಮದ ಬಳಿ 50 ಕೋಟಿ ವೆಚ್ಚದಲ್ಲಿ ಏಕಲವ್ಯ ವಸತಿ ಶಾಲೆಯ  ಮಂಜೂರಾತಿ ದೊರೆಯಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಉಪಾಧ್ಯಕ್ಷೆ ಸಾಕಮ್ಮ,ಸದಸ್ಯ ಎಸ್. ಕೆ.ಮಂಜುನಾಥ್ ,ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದೇಶ್,ಮಂಡಲ ಅಧ್ಯಕ್ಷ. ಎಚ್.ಸಿ.ಮಹೇಶ್, ಮಾಜಿ ಜಿ.ಪಂ ಸದಸ್ಯ ನಾಗರಾಜ್,ಸೊಕ್ಕೆ ತಿಪ್ಪೇಸ್ವಾಮಿ,ಮುಖಂಡರಾದ ಬಿಸ್ತುವಳ್ಳಿ ಬಾಬು, ಗ್ಯಾಸ್ ಓಬಣ್ಣ,ರೇವಣ್ಣ,ಕುಮಾರ್ ,
ಗುತ್ತಿಗೆದಾರ ದೀಪಕ್ ಪಟೇಲ್ ,ಪಿಡಬ್ಲೂ ಡಿ ಎಇಇ ರುದ್ರಪ್ಪ,ತಾ.ಪಂ ಇಓ ಮಲ್ಲಾನಾಯ್ಕ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಪ್ರಾಂಶುಪಾಲರಾದ  ಕಲ್ಲೇಶ್, ನಾಗರಾಜ್ ,ನಾಗರಾಜ್ ,ಸೇರಿದಂತೆ  ಗ್ರಾ‌.ಪಂ ಸದಸ್ಯರುಗಳು ಗ್ರಾಮಸ್ಥರು ಭಾಗವಹಿಸಿದ್ದರು.