ಸಂಸದ ರಮೇಶ ಜಿಗಜಿಣಗಿ ಮಾದರಿ ರಾಜಕಾರಣಿ :ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ :ಎ.4:ಸಮಾಜದಲ್ಲಿ ಗೌರವಿತ ವ್ಯಕ್ತಿಯಾಗಿ ಬದುಕಬೇಕು.ಒಬ್ಬ ಮನುಷ್ಯ ಇನ್ನೊಬ್ಬರಿಗೆ ಗೌರವ ನೀಡುವ ಮನೋಭಾವ ಹೊಂದಬೇಕು. ಹಿರಿಯರಾಗಿ ರಾಜಕಾರಣದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಎಲ್ಲರೊಂದಿಗೆ ಗೌರವಿತವಾಗಿ ನಡೆದುಕೊಳ್ಳುತ್ತಿರುವ ಸಂಸದ ರಮೇಶ ಜಿಗಜಿಣಗಿ ಇತರರಿಗೆ ಮಾದರಿಯಾದ ರಾಜಕಾರಣಿಯಾಗಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಶನಿವಾರ ಪಟ್ಟಣದ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಗ್ರಂಥಾಲಯ ಉದ್ಘಾಟನೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಣ ಉದ್ಘಾಟಿಸಿ ಮಾತನಾಡಿದರು.

ಸಮಾಜಮುಖಿ ಚಿಂತಕರು ಈ ಭಾಗದಲ್ಲಿ ಬೆಳೆಯಲಿ. ಅಕ್ಷರಕ್ರಾಂತಿ ಮಾಡಿದ ಬಂಥನಾಳದ ಸಂಗನಬಸವ ಮಹಾಶಿವಯೊಗಿಗಳು ಹಾಗೂ ಸ್ವಾತಂತ್ರ್ಯ ಹೊರಾಟದಲ್ಲಿ ತೊಡಗಿಸಿಕೊಂಡಿರುವ ಇಂಚಗೇರಿ ಮಠ, ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಗೋಳಸಾರದ ಪುಂಡಲಿಂಗ ಶ್ರೀಗಳ ಮಠ,ಮನಸ್ಸಿನಲ್ಲಿ ಅಂದಿದ್ದು ಆಗುವಂತ ಪವಾಡ ತೋರುವ ಲಚ್ಯಾಣದ ಸಿದ್ದಲಿಂಗ ಮಹಾರಾಜರ ಮಠ .ಸಾರ್ವಜನಿಕ ಬದುಕನ್ನು ಬದಲಾವಣೆಯಲ್ಲಿ ಮಠ,ಮಾನ್ಯಗಳು ಶ್ರಮಿಸುತ್ತಿವೆ. ಸಾಹಿತ್ಯ,ಶಾಂತಿ,ಈ ಭಾಗದ ಜನರ ಹೃದಯ ಶ್ರೀಮಂತಿಕೆಯಿಂದ ಇಂಡಿ ಭಾಗ ಅಭಿವೃದ್ದಿಗೆ ಮಾದರಿಯಾಗಿದೆ ಎಂದು ಹೇಳಿದರು.ವಿಶ್ವದ ಯುಗ ಪುರುಷರ ಜೀವನ ಬದಲಾವಣೆಯಲ್ಲಿ ಗ್ರಂಥಗಳು ಮಹತ್ವದ ಪಾತ್ರ ವಹಿಸಿವೆ.ಸ್ವತಂತ್ರ್ಯ ಚಳುವಳಿಯಲ್ಲಿ ಗ್ರಂಥ ಹಾಗೂ ಪತ್ರಿಕೆಗಳು ಅಮೂಲ್ಯ ಸೇವೆ ಮಾಡಿವೆ.ಶಿಕ್ಷಣ ಪ್ರಗತಿಗೆ ಗ್ರಂಥಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ಹೇಳಿದರು.

ಗ್ರಂಥಾಲಯಗಳು ಜ್ಞಾನದ ಭಂಡಾರಗಳು.ಮಂಗಳೂರ,ಮತ್ತು ಕೇರಳದಲ್ಲಿ ಒಳ್ಳೆಯ ಗ್ರಂಥಾಲಯ ಕಾಣುತ್ತೆವೆ ಎಂದ ಅವರು, ಇಂಡಿಗೆ ಸಂಸದರು ಮತ್ತು ತಾವು ಡಿಜಿಟಲ್ ಗ್ರಂಥಾಲಯಕ್ಕೆ ಸಹಾಯ ನೀಡುವದಾಗಿ ತಿಳಿಸಿದರು.

ಭೀಮೆಗೆ ನೀರು- ಮಹಾರಾಷ್ಟ್ರ ಸರ್ಕಾರ ಭೀಮಾ ನದಿಗೆ ಕುಡಿಯುವ ನೀರು ಬಿಟ್ಟಿದ್ದು ಅದಕ್ಕಾಗಿ ಸರ್ಕಾರಕ್ಕೆ ತಾಲೂಕಿನ ಜನತೆಯ ಪರವಾಗಿ ಶಾಸಕರು ಅಭಿನಂದಿಸಿದರು

ಇಂಡಿಯಲ್ಲಿ ಸುಮಾರು 440 ಅಂಗಡಿಗಳ ಮೇಗಾ ಮಾರ್ಕೆಟಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಮಿನಿ ವಿಧಾನಸೌಧ ಕಟ್ಟಿದವರಿಗೆ ಈ ಕೆಲಸವನ್ನು ಒಪ್ಪಿಸಿದ್ದು ಅದು ಶೀಘ್ರದಲ್ಲಿ ಪ್ರಾರಂಭಿಸುವದಾಗಿ ಹೇಳಿದರು.

ಸಂಸದ ರಮೇಶ ಜಿಗಜಿಣಗಿ, ಉಪನ್ಯಾಸ ನೀಡಿದ ಸಾಹಿತಿ ರಾಘವೇಂದ್ರ ಕುಲಕರ್ಣಿ ,ಸಾಹಿತಿ ದಾನಪ್ಪ ಬಗಲಿ ಮಾತನಾಡಿ, ಗ್ರಂಥಾಲಯಗಳಿದ್ದರೆ ವಿದ್ವಾಂಸರು ಬೆಳೆಯುತ್ತಾರೆ, ಪುಸ್ತಕಗಳನ್ನು ಓದುವದೆಂದರೆ ಬಾಳಿನ ದೀಪವನ್ನು ಬೆಳಗಿಸಿದಂತೆ ಎಂದರು.ಕಾಸುಗೌಡ ಬಿರಾದಾರ,ಹಿರಿಯ ಪತ್ರಕರ್ತ ಎ.ಸಿ.ಪಾಟೀಲ,ಪ್ರಾಸ್ತಾವಿಕವಾಗಿ ಸಂಘದ ಅಧ್ಯಕ್ಷ ಖಾಜು ಸಿಂಗೆಗೋಳ ಮಾತನಾಡಿದರು.

ಗೋಳಸಾರ ಮಠದ ಅಭಿನವ ಪುಂಡಲಿಂಗ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು, ತಾ.ಪಂ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಶ್ರೀಶೈಲ ಪೂಜಾರಿ, ಭೀಮಾಶಂಕರ ಮೂರಮನ್,ಜಗದೀಶ ಕ್ಷತ್ರಿ,ನಿಜಣ್ಣ ಕಾಳೆ,ಶಿವು ಮೂರಮನ, ಧನರಾಜ ಮುಜಗೊಂಡ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ,ರಾಚು ಬಡಿಗೇರ, ಭೀಮು ಪ್ರಚಂಡಿ, ಸಂತೋಷ ಪರಸೇನವರ,ಮುತ್ತಪ್ಪ ಪೆÇತೆ, ಗಣಪತಿ ಬಾಣಿಕೋಲ,ರಾಜು ಕುಲಕರ್ಣಿ,ಲಾಲಸಿಂಗ ರಾಠೋಡ,ಅವಿನಾಶ ಬಗಲಿ,ಗಂಗಾಧರ ಬಡಿಗೇರ,ಶೇಖರ ಶಿವಶರಣ,ದತ್ತಾ ಬಂಡೇನವರ ಸಚಿನ ಬೊಳೆಗಾಂವ,ಮಲ್ಲಿಕಾರ್ಜುನ ಕಿವಡೆ,ಸಿದ್ದಲಿಂಗ ಹಂಜಗಿ,ದೇವೆಂದ್ರ ಕುಂಬಾರ,ಸತೀಶ ಕುಂಬಾರ,ಆರ್.ವಿ.ಪಾಟೀಲ,ಶರಣಗೌಡ ಬಂಡಿ,ಸಂತೋಷಗೌಡ ಪಾಟೀಲ,ಚಂದಣ್ಣ ಆಲಮೇಲ,ರಮೇಶ ಕನಮಡಿ,ಶಿವಾನಂದ ಕಲಶೆಟ್ಟಿ,ಹಣಮಂತ ಅರವತ್ತು,ಅಲ್ಲಾಭಕ್ಷ ಗೊರೆ,ವಿನೋದ ಸಿಂಗೆ,ಪ್ರಶಾಂತ ಮುಂಡೆವಾಡಿ,ವಿಜು ಮೂರಮನ, ಶಿವು ಬಗಲಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದೆ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಶಿವಯ್ಯ ಹಿರೇಪಟ್ಟ, ಎ.ಸಿ.ಪಾಟೀಲ, ಆರ್.ಬಿ.ಸಿಂಪಿ, ಉಮೇಶ ಕೋಳೆಕರ ಇವರನ್ನು ಸನ್ಮಾನಿಸಲಾಯಿತು.ಐ.ಸಿ.ಪೂಜಾರ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಶರಣಬಸಪ್ಪ ಎನ್.ಕೆ ನಿರೂಪಿಸಿದರು. ಖಜಾಂಚಿ ರಾಮಚಂದ್ರ ಯಂಕಂಚಿ ವಂದಿಸಿದರು.


ಪುಸ್ತಕಗಳು ಓದುವದೆಂದರೆ ಬಾಳಿನ ದೀಪವನ್ನು ಬೆಳಗಿಸಿದಂತೆ, ಗ್ರಂಥಾಲಯದ ಸಂಬಂಧ ಹೊಂದಿದರೆ ಜೀವನದುದ್ದಕ್ಕೂ ನೆಮ್ಮದಿಯಿಂದ ಇರಬಹುದು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಅವರು ಶನಿವಾರ ಪಟ್ಟಣದ ಪತ್ರಿಕಾ ಕಾರ್ಯಾಲಯದ ಆವರಣದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಗ್ರಂಥಾಲಯ ಉದ್ಘಾಟಣೆ ಹಾಗೂ ಹಿರಿಯ ಪರ್ತಕರ್ತರ ಸನ್ಮಾನ ಸಮಾರಂಭದಲ್ಲಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.

ಎಲ್ಲ ಸಮಾಜದ ವ್ಯಕ್ತಿಗಳು ಸೇರಿ ಕೆಲಸ ಮಾಡಿದರೆ ಒಳ್ಳೆಯ ಪರಿಸರ ಸಾಧ್ಯ. ಈ ದಿಶೆಯಲ್ಲಿ ಪತ್ರಕರ್ತರು ಗ್ರಂಥಾಲಯ ಪ್ರಾರಂಭಿಸಿದ್ದು ವಿದ್ಯಾರ್ಥಿಗಳಿಗೆ ನಿವೃತ್ತಿ ಜೀವನ ಸಾಗಿಸುವ ಹಿರಿಯರಿಗೆ ಅನುಕೂಲವಾಗಲಿದೆ.ಗ್ರಂಥಾಲಯ ಸಂಬಂಧ ಹೊಂದಿದರೆ ಜೀವನದುದ್ದಕ್ಕೂ ನೆಮ್ಮದಿ ಇರಬಹುದು ಎಂದರು