
ಯಾದಗಿರಿ,ಮಾ.11-ಕೋಲಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಎಕ್ಸ್‍ಪೆÇೀವನ್ನು ಉದ್ಘಾಟಿಸಿದ ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ, ಮಳಿಗೆಯೊಂದರಲ್ಲಿ ಮಾರಾಟ ಮಾಡುತ್ತಿದ್ದ ಒಬ್ಬ ಹೆಣ್ಣು ಮಗಳೊಡನೆ ಅಸಭ್ಯ ಹಾಗೂ ಅನುಚಿತವಾಗಿ ಮಾತನಾಡಿರುವುದನ್ನು ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ (ಎಐಎಂಎಸ್‍ಎಸ್) ಜಿಲ್ಲಾ ಇನ್ ಚಾರ್ಜ್ ಹರಿಣಿ ಆಚಾರ್ಯ ಖಂಡಿಸಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ, ಮಹಿಳೆಯರ ಸಮಾನತೆ-ಸ್ವಾವಲಂಬನೆ-ಸ್ವಾತಂತ್ರ್ಯಗಳ ಬಗ್ಗೆ ಮಾತನಾಡುವ ಪಕ್ಷದ ಸಂಸದ ಮಹೋದಯರು ಸಾರ್ವಜನಿಕವಾಗಿ ಆಕೆಯ ವೈಯಕ್ತಿಕ ನಂಬಿಕೆಗಳ ಕುರಿತು ಎಲ್ಲೆ ಮೀರಿ ಮಾತನಾಡಿರುವುದು ಅಕ್ಷಮ್ಯ. ಜೊತೆಗೆ ಹಣೆಯಲ್ಲಿ ಕುಂಕುಮ ಇಲ್ಲದಿರುವುದರ ಬಗ್ಗೆ ಆಕ್ಷೇಪಿಸಲು ಆ ಹೆಣ್ಣು ಮಗಳ ಗಂಡನ ಮತ್ತು ಆಕೆಯ ತಂದೆಯ ಕುರಿತು ಮಾತನಾಡಿರುವುದು ಸುಸಂಸ್ಕೃತಿಯ ಪ್ರದರ್ಶನವೆ ? ಅಷ್ಟೇ ಅಲ್ಲದೆ ಹಣದ ಆಮಿಷಕ್ಕೆ ಬಲಿಯಾಗಿ ಆ ಮಹಿಳೆ ಮತಾಂತರವಾಗಿರುವಳೆಂದೂ ಆರೋಪಿಸಿರುವುದು ಸಂಸದರ ಪ್ರಜಾತಂತ್ರ ವಿರೋಧಿ ಧೋರಣೆ ಹಾಗೂ ಅವರೇ ದಿನಬೆಳಗಾದರೆ ಪ್ರಮಾಣ ಮಾಡುವ ಸಂವಿಧಾನದತ್ತ ಹಕ್ಕುಗಳ ಕುರಿತಾದ ಅಸಹಿಷ್ಣುತೆಯನ್ನು ಬಟಾ ಬಯಲು ಮಾಡಿದೆ. ಇದೇಯೇ ಬಿಜೆಪಿಯ ‘ಭಾರತೀಯ ಸಂಸ್ಕೃತಿ’ಯ ವ್ಯಾಖ್ಯಾನ ? ಎಂದು ಅವರು ಪ್ರಶ್ನಿಸಿದ್ದಾರೆ.