ಸಂಸದ ಮುನಿಸ್ವಾಮಿರಿಂದ ಚುನಾವಣಾ ಗಿಮಿಕ್

ಕೆಜಿಎಫ್:ಜು:೨೦: ಬಿಜಿಎಂಎಲ್ ಗಣಿ ಕಾರ್ಮಿಕರ ಹಕ್ಕುಗಳ ಜಾರಿಗಾಗಿ ಒತ್ತಾಯಿಸಿ ಪ್ರಮಾಣಿಕವಾದ ಹೊರಾಟವನ್ನು ದೆಹಲಿಯಲ್ಲೂ ಮಾಡಿದ್ದು ಆದರೆ ಕೇಂದ್ರ ಗಣಿ ಸಚಿವಾಲಾಯದ ಜಂಟಿ ಕಾರ್ಯದರ್ಶಿ ಫಾರಿದಾ ನಾಯಕ್ ನಿನ್ನೆ ಸ್ವರ್ಣ ಭವನಕ್ಕೆ ಭೇಟಿ ನೀಡಿದ್ದ ವೇಳೆ ಬಿಇಎಂಎಲ್ ಎಂಡಿ,ಸ್ಥಳೀಯ ಶಾಸಕರು ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಸಭೆಯಿಂದ ಹೊರಗಿಟ್ಟು ಆಯ್ದ ಕೆಲವು ಕಾರ್ಮಿಕ ಮುಖಂಡರೆಂದು ಸ್ವಯಂ ಘೊಷಿತ ಅಯ್ದ ನಾಯಕರನ್ನು ಕರೆದು ಸಭೆ ನಡೆಸಿದ್ದು ಕೇವಲ ಚುನಾವಣಾ ಗಿಮಿಕ್‌ಗಾಗಿ ಎಂದು ಸಿಪಿಐ ಮುಖಂಡ ವಿಧಾನಸಭಾ ಚುನಾವಣಾ ಪರಭಾವ ಅಭ್ಯರ್ಥಿ ವಕೀಲ ಜ್ಯೋತಿಬಸು ಆರೋಪಿಸಿದರು.
ಅವರು ಸಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಬಿಜಿಎಂಎಲ್ ಗಣಿ ಕಾರ್ಖಾನೆಯನ್ನು ೨೦೦೧ ರಲ್ಲಿ ನಷ್ಟದ ಕಾರಣವನ್ನು ನೀಡಿ ಬೀಗ ಜಡಿಯಲಾಯಿತು ಗಣಿಯನ್ನು ಪುನರ್ ಆರಂಭಿಸಬೇಕು ಎಂಬ ಭೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವುದು ಸಿಪಿಐ ಪಕ್ಷ ಸುಪ್ರೀಂ ಕೋರ್ಟ್ ಬಿಜಿಎಂಎಲ್ ಕಂಪನಿಯಲ್ಲಿ ಕಾರ್ಮಿಕರಾಗಿ ದುಡಿದು ಎಸ್‌ಟಿಬಿಪಿ ಯೋಜನೆಯಡಿ ಸ್ವಯಂ ನಿವೃತ್ತಿ ತೆಗೆದುಕೊಂಡ ಕಾರ್ಮಿಕರಿಗೆ ೧೦೦೦ ಚದರ ಅಡಿಗೆ ೧೦ ರೂಗಳಂತೆ ನೀಡಬೇಕು ಮತ್ತು ಬಿಜಿಎಂಎಲ್ ಕಾಲೋನಿಯಲ್ಲಿ ವಾಸವಿರುವ ಕಾರ್ಮಿಕರಿಗೂ ಸಹ ಮನೆಗಳನ್ನು ೧೦೦೦ ಚದರ ಅಡಿಗೆ ರೂ ೧೦ ರಂತೆ ನೀಡಬೇಕು ಎಂದು ಆದೇಶ ನೀಡಿದ ಅನುಸಾರವಾಗಿ ಹಿಂದಿನ ಯುಪಿಐ ಸರ್ಕಾರದ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಮನೆಗಳನ್ನು ನೀಡಲು ತೀರ್ಮಾನ ಕೈಗೊಂಡಿತ್ತು ಆದರೆ ಇಲ್ಲಿನ ಕೆಲವು ಕಾರ್ಮಿಕ ಸಂಘಟನೆಗಳ ಮುಖಂಡರ ಭಿನ್ನಬಿಪ್ರಾಯಗಳು ಕಚ್ಚಾಟ ಪರಿಣಾಮ ಮನೆಗಳ ಹಸ್ತಾಂತರವಾಗಲಿಲ್ಲ ಆದರೆ ಸಿಪಿಐ ಪಕ್ಷವು ದೆಹಲಿಯ ಜಂತರ್ ಮಂತರ್‌ನಲ್ಲಿ ವಿರೋಧ ಪಕ್ಷಗಳ ಮುಖಂಡರ ಸಹಕರದೊಂದಿಗೆ ಹೋರಾಟ ನಡೆಸಿದ ಫಲವಾಗಿ ಮನೆಗಳ ಹಸ್ಥಾಂತರ ಮಾಡುವ ನಿಟ್ಟಿನಲ್ಲಿ ಕೇಂದ್ರ ಗಣಿ ಇಲಾಖೆ ಕ್ರಮಕೈಗೊಂಡಿದ್ದು ಎಂದು ಹೇಳಿದರು.
ಬಿಜಿಎಂಎಲ್ ವಿಚಾರವು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು ಬಿಜಿಎಂಎಲ್ ಕಾರ್ಮಿಕರ ಭವಿಷ್ಯ ಕಾರ್ಮಿಕರ ಅವಲಂಭಿತ ಕುಟುಂಬ ವರ್ಗ ಕೆಜಿಎಫ್ ನಾಗರೀಕರ ಭವಿಷ್ಯ ಇದರಲ್ಲಿ ಅಡಗಿದ್ದು ಸ್ಥಳೀಯ ಶಾಸಕರು ಈ ವಿಚಾರದತ್ತ ಗಮಹರಿಸಬೇಕು ರಾಜ್ಯದ ಮುಖ್ಯಮಂತ್ರಿಗಳ ಸಹಕಾರದೊಂದಿಗೆ ಆಂದ್ರಪ್ರದೇಶ ರಾಜ್ಯವು ಚಿಗುರುಗುಂಟ ಗಣಿಯನ್ನು ಮುನ್ನೆಡೆಸಲು ಮುಂದೆ ಬಂದಿರುವ ಹಾಗೇ ಕರ್ನಾಟಕ ರಾಜ್ಯವು ಮುಂದೆ ಬರುವಂತೆ ಒತ್ತಾಡ ಹಾಕಬೇಕು ಎಂದು ಆಗ್ರಹಿಸಿದರು.
ಲೋಕಸಭಾ ಚುನಾವಣೆಯು ೧ ವರ್ಷದಲ್ಲಿ ಬರಲಿರುವುದರಿಂದ ಸಂಸದ ಮುನಿಸ್ವಾಮಿ ನಾಟಕವನ್ನು ಆಡುತ್ತಿದ್ದಾರೆ ಸಂಸದರಾಗಿ ಆಯ್ಕೆಯಾಗಿ ೪ ವರ್ಷ ಕಳೆದಿದೆ ಕೇಂದ್ರ ಕ್ಯಾಬಿನೆಟ್‌ನಲ್ಲಿ ಚಿನ್ನದ ಗಣಿ ಬಗ್ಗೆ ಯಾವ ನೀರ್ಣಾಯವನ್ನು ಕೈಗೊಳ್ಳಲಾಗಿದೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.