ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಡಿ.ರೇವಣ್ಣ ರಾಜೀನಾಮೆಗೆ ಆಗ್ರಹಿಸಿ ಸಿಪಿಐಎಂ ಪ್ರತಿಭಟನೆ

ಕಲಬುರಗಿ,ಏ.5- ಸಚಿವ ಹೆಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣರವರು, ಅವರ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯದ ಗಂಭೀರ ಪ್ರಕರಣ ದಾಖಲಾಗಿರುವುದರಿಂದ ಅವರು ಈ ಕೂಡಲೆ ತಮ್ಮ ವಿಧಾನ ಸಭಾ ಸದಸ್ಯತ್ವ ಹಾಗೂ ಸಂಸದನ ಸ್ಥಾನಗಳಿಗೆ ರಾಜಿನಾಮೆ ನೀಡುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ( ಮಾಕ್ರ್ಸವಾದಿ ) ಕರ್ನಾಟಕ ರಾಜ್ಯ ಸಮಿತಿಯ ನೆತೃತ್ವದಲ್ಲಿ ಬೃಹತ ಪ್ರತಿಭಟನೆ ಕೈಗೊಳ್ಳಲಾಯಿತು.
ಈ ಪ್ರಕರಣದ ಆರೋಪಿಗಳಾದ ತಂದೆ ಮತ್ತು ಮಗನನ್ನು ಬಂದಿಸಿಲು ಯಾವುದೇ ಕಾರಣಕ್ಕು ರಾಜ್ಯ ಸರಕಾರವು ಮತ್ತಷ್ಠು ವಿಳಂಬಕ್ಕೆ ಅವಕಾಶ ಕೊಡದೆ ಈ ಕೂಡಲೆ ಪ್ರಜ್ವಲ್ ರೇವಣ್ಣ ಅವರನ್ನೂ ಬಂಧಿಸುವಂತೆಯು ಒತ್ತಾಯಿಸಲಾಯಿತು.
ಪ್ರಾದೇಶಿಕ ಪಕ್ಷಗಳನ್ನು ನಾಶ ಮಾಡುವ ಬಿಜೆಪಿ ಮತ್ತು ಆರ್ ಎಸ್ ಎಸ್ ತಂತ್ರ ಹೊಳೆ ನರಸೀಪುರದ ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಬಿಜೆಪಿ ಮುಖಂಡ ಶ್ರೀ ದೇವರಾಜೇಗೌಡರು ಅದಾಗಲೇ, ದೇಶನಾಯಕರ ಗಮನ ಸೆಳೆದು ಮಹಿಳೆಯರ ಮೇಲಿನ ದೌರ್ಜನ್ಯದ ಈ ಭಾರೀ ಪ್ರಕರಣವನ್ನು ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಉನ್ನತ ನಾಯಕರ ಗಮನಕ್ಕೆ ತಂದರೂ ಅದನ್ನು ಮುಚ್ಚಿಟ್ಡಿದ್ದು ಯಾಕೆ ? ಮತ್ತು ಅಷ್ಠೆಲ್ಲಾ ಭಾರೀ ಹಗರಣವಿದ್ದರೂ ಎನ್ ಡಿ ಎ ಅಭ್ಯರ್ಥಿಯಾಗಿ ಪ್ರಜ್ವಲ್ ರವರನ್ನು ಯಾಕೆ ಒಪ್ಪಿಕೊಳ್ಳಲಾಯಿತು ? ಹಾಗೂ ಪ್ರಧಾನ ಮಂತ್ರಿಗಳು ಅವರ ಪರ ಹಾಸನದಲ್ಲಿ ಹೇಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು ? ಎಂಬ ಕುರಿತು ಬಿಜೆಪಿ ನಾಯಕರು ಬಹಿರಂಗಪಡಿಸಬೇಕೆಂದು ಸಿಪಿಐಎಂ ಬಲವಾಗಿ ಒತ್ತಾಯಿಸಿದೆ.
ಬಹುಶಃ ಇಂತಹ ಪ್ರಕರಣಗಳನ್ನೇ ಬಿಜೆಪಿ ಆರ್ ಎಸ್ ಎಸ್ ಗಳು ತಮ್ಮ ಜೊತೆ ಜೆಡಿಎಸ್ ಕೈ ಜೋಡಿಸುವಂತೆ ಮಾಡಿಕೊಳ್ಳಲು ಮತ್ತು ಅದನ್ನು ನಾಶ ಮಾಡಲು ದುರುಪಯೋಗ ಪಡಿಸಿಕೊಂಡಿರುವ ಸಾಧ್ಯತೆಗಳು ಇಲ್ಲದಿಲ್ಲ. ಬಿಜೆಪಿ ಜೊತೆ ಕೈ ಜೋಡಿಸುವ ಪ್ರಾದೇಶಿಕ ಪಕ್ಷಗಳನ್ನು ಸ್ವಾಹ ಮಾಡುತ್ತಿರುವುದು ಹೊಸದೇನಲ್ಲಾ ! ಹೀಗಾಗಿ, ಈ ಪ್ರಾದೇಶಿಕ ಪಕ್ಷವನ್ನು ಮುಗಿಸಲು ಈ ಪ್ರಕರಣವನ್ನು ಬಳಸಿಕೊಂಡಿರುವ ಸಾಧ್ಯತೆಗಳಿವೆ ಎಂದು ಅನುಮಾನ ವ್ಯಕ್ತಪಡಿಸಿದೆ.
ಅದಾಗಲೇ, ಸಿಪಿಐಎಂ ಪಕ್ಷವು, ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಿರುವುದನ್ನು ಧೃತರಾಷ್ಟ್ರಾಲಿಂಗನವೆಂದು ಕರೆದಿತ್ತು. ಈ ಮೊದಲು ಬಿಜೆಪಿ ಜೊತೆ ಕೈ ಜೋಡಿಸಿದಾಗ ಉತ್ತರ ಕರ್ನಾಟಕವನ್ನು ಅದು ಕಳೆದುಕೊಂಡಿತ್ತು.
ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಮತ್ತು, ಮೀನಾಕ್ಷಿ ಬಾಳಿ, ಶಾಂತಾ ಘಂಟಿ, ಸುಧಾಮ ಧನ್ನಿ, ಪಾಂಡುರಂಗ ಮಾವಿನ, ಶೋಭಾ ಆಜಾದಪುರ ಲವಿತ್ರ ಸುಜಾತಾ
ಸರ್ವೇಶ ಸೌಮ್ಯ ತುಷಿತ್ ಮಂಜುನಾಥಆಕಾಶ ಧನ್ವಂತರಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.