ಸಂಸದ ಪ್ರಜ್ವಲ್ ಪ್ರಕರಣ ಎಸ್‍ಐಟಿಗೆ: ಸರ್ಕಾರದ ಕ್ರಮಕ್ಕೆ ಮಹಿಳಾ ಕಾಂಗ್ರೆಸ್ ಬೆಂಬಲ

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.16: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ರಾಜ್ಯ ಸರಕಾರವು ಎಸ್.ಐ.ಟಿ. ಗೆ ವಹಿಸಿದ್ದನ್ನು ಸಮರ್ಥಿಸಿಕೊಂಡು ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರು.
ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿದ್ಯಾವತಿ ಅಂಕಲಗಿ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾವತಿ ಅಂಕಲಗಿ ಅವರು ಮಾತನಾಡಿ, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ರಾಜ್ಯ ಸರಕಾರವು ಎಸ್.ಐ.ಟಿ. ಗೆ ವಹಿಸಿದ್ದು ನಮಗೆ ತೃಪ್ತಿ ಇದೆ. ಕರ್ನಾಟಕದ ಎಸ್.ಐ.ಟಿ. ಬಗ್ಗೆ ಭರವಸೆ ಇದ್ದು, ಕರ್ನಾಟಕದ ಪೊಲೀಸರು ದಕ್ಷರಿದ್ದು, ಈಗಾಗಲೇ ಛಾಪಾ ಕಾಗದ ಪ್ರಕರಣದಲ್ಲಿ ಹಾಗೂ ತೀರಾ ಇತ್ತೀಚಿನ ರಾಮೇಶ್ವರ ಕೆಫೆ ಬ್ಲಾಸ್ಟ್ ಪ್ರಕರಣವನ್ನು ಭೇದಿಸಿದ ಪ್ರಕರಣದಲ್ಲಿ ಇದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದರು. ಅಲ್ಲದೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಲ್ಲಿದ್ದರೂ ಕರೆತಂದು ಬಂಧಿಸಲು ಸೂಕ್ತ ಕ್ರಮ ಜರುಗಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕÀ ವಿಠಲ ಕಟಕದೊಂಡ ಮಾತನಾಡಿ, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಿಗೆ ಸೂಕ್ತ ರಕ್ಷಣೆಗಾಗಿ ವಿಶೇಷ ವ್ಯವಸ್ಥೆ ಹಾಗೂ ತುರ್ತಾಗಿ ಭರವಸೆಯ ಅವಶ್ಯಕತೆ ಇದೆ.
ಈ ಪ್ರಕರಣವು ಒಂದು ಗಂಭೀರ ಸ್ವರೂಪದ್ದಾಗಿದ್ದು, ನಾಡಿನ ಜನತೆ ತಲೆತಗ್ಗಿಸುವಂತಹ ಹಾಗೂ ನಾಚಿಕೆಗೇಡಿನ ವಿಷಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾದೇವಿ ಗೋಕಾಕ, ಭಾರತಿ ಹೊಸಮನಿ, ಮಂಜುಳಾ ಗಾಯಕವಾಡ, ಆಸ್ಮಾ ಕಾಲೇಬಾಗ, ಹಮೀದಾ ಪಟೇಲ, ಮುಸ್ಕಾನ ಶಿವಣಗಿ, ಅಂಬಿಕಾ ಪಾಟೀಲ, ಶರಣಮ್ಮ ನಾಯಕ, ಜ್ಯೋತಿ ಗುಡಿಮನಿ, ಲಲಿತಾ ನಾಯಕ, ಭಾಗೀರಥಿ ನಾಗರಹಳ್ಳಿ, ಕಾಶಿಬಾಯಿ ಹಡಪದ, ಗಂಗವ್ವ ಕಣಮುಚನಾಳ, ಸುಮಿತ್ರಾ ಹನೂರ, ಶಶಿಕಲಾ ಮಣೂರ, ಶಾರದಾ ಬೆಟಗೇರಿ, ಅಶ್ವಿನಿ ಪಾತ್ರೋಟಿ, ಶಮೀಮಾ ಅಕ್ಕಲಕೋಟ, ಸಂಜನಾ ಬಜಂತ್ರಿ ಮುಂತಾದವರು ಉಪಸ್ಥಿತರಿದ್ದರು.