ಸಂಸದ ಪಿ.ಸಿ.ಮೋಹನ್ ಜನ್ಮದಿನಾಚರಣೆ

ಕೋಲಾರ,ಜು.೨೫- ಕರ್ನಾಟಕ ರಾಜ್ಯ ಬಲಿಜ ಮಹಾ ಸಭಾದ ಅಧ್ಯಕ್ಷರು, ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಅವರ ಜನ್ಮದಿನಾಚರಣೆಯನ್ನು ಶ್ರೀ ಯೋಗಿ ನಾರೇಯಣ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಕೋಲಾರ ನಗರದ ಎಸ್.ಎನ್.ಆರ್.ಆಸ್ಪತ್ರೆಯಲ್ಲಿ ಹೆರಿಗೆ ವಾರ್ಡಿನ ತಾಯಂದಿರಿಗೆ ಅನ್ನದಾಸೋಹ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಮಾತನಾಡಿ, ರಾಜ್ಯದ ಬಲಿಜ ಜನಾಂಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ೨ಎ ಮೀಸಲಾತಿ ದೊರಕಿಸಿಕೊಡುವಲ್ಲಿ ಹಾಗೂ ಸರ್ಕಾರದಿಂದ ಕೈವಾರ ತಾತಯ್ಯನವರ ಆಚರಣೆಗೆ ಅವಕಾಶ ಮಾಡಿಕೊಟ್ಟ ಹಾಗೂ ಅಭಿವೃದ್ಧಿಗೆ ಅನೇಕ ರೀತಿಯ ಧನಸಹಾಯ ಮತ್ತು ಮಠ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಸತತ ಪ್ರಯತ್ನ ಮಾಡುತ್ತಿರುವ ಪಿ.ಸಿ.ಮೋಹನ್ ಅವರಿಗೆ ಕೈವಾರ ತಾತಯ್ಯನವರ ಕೃಪೆ ಎಂದೆಂದಿಗೂ ಇರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಾಸವಿ ಅನ್ನದಾನ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಗೋವಿಂದರಾಜು, ದೇವತಾ ನಾಗರಾಜ್, ಬಾಗಲೂರು ಅಮರನಾಥ್, ಬಲಿಜ ಸಂಘದ ಎಸ್.ಎಸ್.ಶ್ರೀಧರ್, ವೆಂಕಟೇಶ್, ಸಾ.ಮಾ.ಸುಬ್ಬಣ್ಣ, ಬಳೆ ರವಿ, ಗಾಂಧಿನಗರ ಮುನಿರಾಜು ಹಾಗೂ ಇತರೆ ಮುಖಂಡರು ಹಾಜರಿದ್ದರು.