ಸಂಸದ ಪರೇಶ್‌ರಾವಲ್‌ಗೆ ಮತ್ತೆ ಸೋಂಕು

ನವದೆಹಲಿ,ಮಾ.೨೭- ಕೊರೊನಾ ಸೋಂಕಿಗೆ ಮೊದಲ ಲಸಿಕೆ ಪಡೆದ ಬಳಿಕ ಬಾಲಿವುಡ್ ನಟ ಹಾಗೂ ಸಂಸದ ಪರೇಶ್ ರಾವಲ್ ಅವರಿಗೆ ಮತ್ತೆ ಕೋವಿಡ್-೧೯ ಖಚಿತಪಟ್ಟಿದೆ.
ಕೊರೊನಾ ಪರೀಕ್ಷೆ ಮಾಡಿಸಿಕೊಂಡ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಟ್ವೀಟ್ ಮಾಡಿರುವ ಅವರು, ಕಳೆದ ೧೦ ದಿನಗಳಲ್ಲಿ ತಮ್ಮೊಂದಿಗೆ ಸಂಪರ್ಕವಿರಿಸಿಕೊಂಡವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
೬೫ ವರ್ಷದ ಪರೇಶ್ ರಾವಲ್ ಮಾ. ೯ ರಂದು ಲಸಿಕೆ ಹಾಕಿಸಿಕೊಂಡಿದ್ದರು. ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ತಿಳಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಮಿಲಿಂದ್ ಸೋಮನ್, ಆರ್, ಮಾಧವನ್, ಅಮೀರ್‌ಖಾನ್, ರಣಧೀರ್ ಕಪೂರ್, ಮನೋಜ್ ಬಾಜ್‌ಪೈ ಸೇರಿದಂತೆ ಇತರ ಗಣ್ಯರಿಗೆ ಸೋಂಕು ಕಾಣಿಸಿಕೊಂಡಿದೆ.
ನಟರಾದ ಸಲ್ಮಾನ್‌ಖಾನ್, ಸಂಜಯ್‌ದತ್, ಧರ್ಮೇಂದ್ರ, ನಾಗಾರ್ಜುನ, ನೀನಾಗುಪ್ತ, ಇತರ ನಟರು ಈಗಾಗಲೇ ಲಸಿಕೆಯ ಮೊದಲ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ.