ಸಂಸದ ನಾಸೀರ್ ಹುಸೇನ್‍ರಿಂದ ಬ್ರಾಹ್ಮಣ ಮಹಿಳೆಯ ಅಂತ್ಯಸಂಸ್ಕಾರ

ಬಳ್ಳಾರಿ:ಮೇ.21- ತಮ್ಮ ಆತ್ಮೀಯರಾದ ಬ್ರಾಹ್ಮಣ ಮಹಿಳೆಯೊಬ್ಬರು ಕೋವಿಡ್ ನಿಂದ ನಿಧನರಾದಾಗ, ಅವರ ಅಂತಿಮ ವಿಧಿವಿಧಾನ ನಡೆಸಲು ಕುಟುಂಬದವರು ಇಲ್ಲದನ್ನು ಕಂಡು ನಗರದವರೇ ಆದ ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್ ಅವರು ತಾವೇ ಮುಂದೆ ನಿಂತು ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರದ ವಿಧಿ ವಿಧಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದಲ್ಲಿ ನಾಸೀರ್ ಅವರು ಓದುವಾಗಲೇ ಪರಿಚಿತರು. ಅವರ ಮತ್ತು ಇವರ ಕುಟುಂಬ ಅನ್ನೋನ್ಯವಾಗಿತ್ತು. ಈಗಲೂ ಅಷ್ಟೆ. ತಮಿಳ್ ಬ್ರಾಹ್ಮಣ್ ಕುಟುಂಬದಿಂದ ಬಂದ ಪ್ರೊ ಸಾವಿತ್ರಿ ವಿಶ್ವನಾಥನ್
ದೆಹಲಿ ವಿಶ್ವವಿದ್ಯಾಲಯದ ಜಪಾನೀಸ್ ಮತ್ತು ಚೈನೀಸ್ ಅಧ್ಯಯನ ವಿಭಾಗದಲ್ಲಿ ಪ್ರಾ ಧ್ಯಾಪಕರಾಗಿದ್ದರು. ನಿವೃತ್ತಿಯ ಬಳಿಕ ತಂಗಿ ಮಹಾಲಕ್ಷ್ಮಿ ಅತ್ರೇಯಿ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು.
ಅಕ್ಕಂತಂಗಿ ಇಬ್ಬರಿಗೂ ಕೋವಿಡ್ ಬಂದಿತ್ತು. ಪ್ರೊ ಸಾವಿತ್ರಿ ವಿಶ್ವನಾಥನ್ ನಿಧನ ಹೊಂದಿದರು. ಆದರೆ ಅವರ ಅಂತ್ಯ ಸಂಸ್ಕಾರಕ್ಕೆ ಯಾರು ಇರಲಿಲ್ಲ. ಸಂಬಂಧೀಗಳೆಲ್ಲ ದೂರ ದೇಶಗಳ್ಲಲಿದ್ದರು, ಅದಕ್ಕಾಗಿ ಈ ವಿಷಯ ತಿಳಿದ ನಾಸೀರ ಅವರು ಸಂಬಂಧೀಕರ ಅನುಮತಿ ಪಡೆದು ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ನಡೆಸಿ, ಬಳಿಕ ಕಾವೇರಿ ನದಿಯಲ್ಲಿ ಪ್ರೊ ಸಾವಿತ್ರಿ ವಿಶ್ವನಾಥನ್ ಅವರ ಅಸ್ಥಿ ವಿಸರ್ಜನೆಯ ವಿಧಿವಿಧಾನಗಳನ್ನು ಸಹ ಪೂರೈಸಿದ್ದಾರೆ. ನಾಸೀರ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಅದೆಷ್ಟೋ ಹಿಂದೂ ಮೃತದೇಹಗಳ ಅಂತಿಮ ಕ್ರಿಯೆಯನ್ನು ಮುಸ್ಲಿಮರು, ಮುಸ್ಲಿಮರ ಅಂತಿಮ ವಿಧಿವಿಧಾನಗನ್ನು ಹಿಂದುಗಳು ಅವರವರ ಸಂಪ್ರದಾಯಗಳಿಗೆ ಅನುಗುಣವಾಗಿ ಹಿಂದೆಯೂ ಮಾಡಿದ್ದಾರೆ. ಅಂಥದೇ ಮಾನವೀಯ ಕೆಲಸವನ್ನು ನಾನೂ ಮಾಡಿದ್ದೇನೆ. ಇದರಲ್ಲಿ ಏನಿದೆ. ಮಾನವೀಯ ಧರ್ಮವಿದೆಂದು ಸಯ್ಯದ್ ನಾಸೀರ್ ಹುಸೇನ್ ಹೇಳಿದ್ದಾರೆ.