ಸಂಸದ ಧ್ರುವನಾರಾಯಣ್ ನಿಧನದಿಂದ ಕಾಂಗ್ರೇಸ್ ಪಕ್ಷಕ್ಕೆ ಭಾರಿ ನಷ್ಟ

ಕೋಲಾರ,ಮಾ,೧೩- ಕಾಂಗ್ರೇಸ್ ಪಕ್ಷದ ಸಂಸದ ಧ್ರುವನಾರಾಯಣ್ ಅವರ ಹೃದಯಾಘತದಿಂದ ನಿಧನರಾಗಿರುವುದು ಕಾಂಗ್ರೇಸ್ ಪಕ್ಷಕ್ಕೆ ಭರಿಸಲಾಗುದ ನೋವುಂಟಾಗಿದೆ. ಪಕ್ಷದಲ್ಲಿ ಶಿಸ್ತು ಬದ್ದತೆಯಿಂದ ರಾಜಕಾರಣ ಮಾಡಿದ ಸ್ನೇಹಮಯಿಯಾಗಿದ್ದ ಪಕ್ಷದ ಪ್ರಮಾಣಿಕರಾಗಿ ಶ್ರಮಿಸುವ ಮೂಲಕ ಮಾರ್ಗದರ್ಶಕರಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ನಸ್ಸೀರ್ ಆಹಮದ್ ಅಭಿಪ್ರಾಯ ಪಟ್ಟರು.
ನಗರದ ಕಠಾರಿಪಾಳ್ಯದಲ್ಲಿ ಆಯೋಜಿಸಿದ್ದ ಕಾಂಗ್ರೇಸ್ ಗ್ಯಾರೆಂಟಿ ಕಾರ್ಡ್ ಬೂತ್ ಮಟ್ಟದ ವಿತರಣೆಯ ಕಾರ್ಯಕ್ರಮಕ್ಕೆ ಚಾಲನೆ ಮಾಡುವ ಮುನ್ನ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಅವರು ಮಾತನಾಡಿ ಇಂದು ರಾಜ್ಯ ಮಟ್ಟದಲ್ಲಿ ಆಯೋಜಿಸಿದ್ದ ಕಾಂಗ್ರೇಸ್ ಪಕ್ಷದ ಕಾರ್ಯಕ್ರಮಗಳನ್ನು ರದ್ದು ಪಡೆಸಲಾಗಿದೆ.
ಧೃವನಾರಾಯಣ್ ಅವರು ಕೇವಲ ಮತದಲ್ಲಿ ವಿಜೇತರಾಗಿ ಇಡೀ ದೇಶಕ್ಕೆ ಒಂದು ಮತದ ಮಹತ್ವವನ್ನು ಸಾರುವ ಮೂಲಕ ದಾಖಲೆ ಮಾಡಿದ್ದರು, ವಿದ್ಯಾರ್ಥಿದೆಸೆಯಿಂದಲೂ ಕಾಂಗ್ರೇಸ್ ಪಕ್ಷದ ಸಕ್ರಿಯ ನಾಯಕತ್ವ ವಹಿಸುವ ಮೂಲಕ ಪಕ್ಷವನ್ನು ಕಟ್ಟಿದರು, ಯುವತ್ ಕಾಂಗ್ರೇಸ್‌ನಲ್ಲಿ ದುಡಿದು ನಂತರ ಶಾಸಕರಾಗಿ ನಂತರ ಎರಡು ಭಾರಿ ಸಂಸದರಾಗಿ ಆಯ್ಕೆಯಾದರು ಎಂದರು.
ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪಕ್ಷದ ಸಂಘಟನೆಯಲ್ಲಿ ಸಾಥ್ ನೀಡುತ್ತಿದ್ದರು. ಮೈಸೂರು ಭಾಗದಲ್ಲಿ ಕಾಂಗ್ರೇಸ್ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ಹೊತ್ತವರು, ಇಂದು ರಾಮನಗರದಲ್ಲಿನ ಕಾರ್ಯಕ್ರಮದ ಪ್ರಯುಕ್ತ ರಾತ್ರಿ ೧೧ ಗಂಟೆಯವರೆಗೆ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿದ್ದರೂ. ಮಧ್ಯರಾತ್ರಿ ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದರು. ಭಗವಂತ ಅವರ ಕುಟುಂಬಕ್ಕೆ ದುಖಃವನ್ನು ಭರಿಸುವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದರು,
೧೩೬ನೇ ಬೂತ್ ನಿಂದ ಗ್ಯಾರೆಂಟಿ ಕಾರ್ಡ್ ವಿತರಣೆ ಮಾಡಲಾಗುವುದು ಈ ವಾರ್ಡಿನಲ್ಲಿ ೮೭೦ ಮಂದಿ ಮತದಾರರಿದ್ದಾರೆ. ಪ್ರತಿಯೊಬ್ಬರು ಕಾಂಗ್ರೇಸ್ ಪಕ್ಷದ ಕಾರ್ಯಕ್ರಮಗಳನ್ನು ಮನೆ,ಮನೆಗೆ ತಲುಪಿಸ ಬೇಕು, ನುಡಿದಂತೆ ನಡೆವ ಸರ್ಕಾರ, ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಪಕ್ಷವು ನೀಡಿದ ಆಶ್ವಾಸನೆಗಳಲ್ಲಿ ಶೇ ೯೯ ರಷ್ಟು ಈಡೇರಿಸಿದೆ ಎಂಬುವುದನ್ನು ತಿಳಿಸಿ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯ ಅವರಿಗೆ ಮತ ನೀಡಲು ಮನವಿ ಮಾಡಬೇಕೆಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ ಕಳೆದ ೨೦೦೪-೨೦೦೮ರಲ್ಲಿ ಶಾಸಕರಾಗಿದ್ದರು, ೨೦೦೯ -೨೦೧೪ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು, ಅವರು ಕಾರ್ಯವೈಖರಿಗಳು ಪ್ರಮಾಣಿಕವಾಗಿದ್ದ ಭವಿಷ್ಯದ ಭರವಸೆ ನಾಯಕರಾಗಿದ್ದರು. ಎನ್.ಎಸ್.ಯು.ಐ. ಘಟಕದಿಂದ ಕಾಂಗ್ರೇಸ್ ಪಕ್ಷದಲ್ಲಿ ಶ್ರಮಿಸಿದವರು, ಕೇವಲ ೬೧ನೇ ವಯಸ್ಸಿಗೆ ನಮ್ಮನ್ನು ಅಗಲಿರುವುದು ದುಖಃದ ಸಂಗತಿಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ ಧೃವನಾರಾಯಣ್ ಅವರು ನಾನು ಜಿ.ಕೆ.ವಿ.ಕೆಯಲ್ಲಿ ವ್ಯಾಸಂಗ ಮಾಡುವಾಗ ನಮಗಿಂತ ಹಿರಿಯ ವಿದ್ಯಾರ್ಥಿಯಾಗಿದ್ದು ಕಾಂಗ್ರೇಸ್ ಪಕ್ಷವನ್ನು ಸಂಘಟಿಸುತ್ತಿದ್ದರು, ನಡೆ-ನುಡಿ, ಸರಳತೆ, ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದವರು. ಸದಾಮುಗುಳು ನಗೆಯೊಂದಿಗೆ ಎಲ್ಲರನ್ನೂ ಆಕರ್ಷಿಸುತ್ತಿದ್ದ ಹಸನ್ಮುಖಿಯಾಗಿದ್ದರು ಎಂದರು, ಕಾಂಗ್ರೇಸ್ ಪಕ್ಷದಲ್ಲಿ ಜವಬ್ದಾರಿಯುತ ಕಾರ್ಯಧ್ಯಕ್ಷರಾಗಿ ರಾಜ್ಯಾಧ್ಯಕ್ಷರಿಗೆ ಹೆಗಲು ನೀಡುತ್ತಿದ್ದ ಮೇಧವಿ ನಾಯಕ ಎಂದರು, ಧೃವನಾರಾಯಣ್ ಅಧೃಷ್ಟವಂತ ದಲಿತ ನಾಯಕರಾಗಿದ್ದು, ರಾಚಯ್ಯನವರ ಪುತ್ರ ಕೃಷ್ಣಮೂರ್ತಿ ವಿರುದ್ದ ಕೇವಲ ಒಂದು ಮತದಲ್ಲಿ ಗೆಲವು ಸಾಧಿಸುವ ಮೂಲಕ ಭಾರತದಲ್ಲಿಯೇ ಗಮನ ಸೆಳೆದವರು ಎಂದು ಬಣ್ಣಿಸಿದರು,
ಮಾಜಿ ಸಚಿವ ನಿಸ್ಸಾರ್ ಅಹಮದ್ ಮಾತನಾಡಿ ನನಗೂ ಧೃವನಾರಾಯಣ್ ಅವರೊಂದಿಗೆ ಒಡನಾಟವಿತ್ತು, ಸರಳ ಸಜ್ಜನಿಕೆಯ ನಡೆಯಿಂದ ಎಲ್ಲರನ್ನು ಗೌರವಿಸುವಂತ ಅಜಾತಶತ್ರು ಎನಿಸಿದ್ದರು. ಅವರ ಅಗಲಿಕೆಯಿಂದ ಕಾಂಗ್ರೇಸ್ ಪಕ್ಷಕ್ಕೆ ಭಾರಿ ನಷ್ಟವಾಗಿದೆ. ಮೃತ ಮನ ಶಾಂತಿ ನೀಡಲಿ ಅವರ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.