ಉಜ್ಜಿನಿ ಪೀಠಕ್ಕೆ ಸಂಸದ ದೇವೇಂದ್ರಪ್ಪ ಭೇಟಿ

ಕೊಟ್ಟೂರು ನ 16 :ತಾಲೂಕಿನ ಉಜ್ಜಿನಿ ಪೀಠದ ಸ್ವಾಮಿಗಳ ವಿವಾದ ಹಿನ್ನಲೆಯಲ್ಲಿ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಉಜ್ಜಿನಿ ಪೀಠಕ್ಕೆ ಭೇಟಿ ನೀಡಿ ಸ್ವಾಮಿಗಳ ಜೋತೆ ಚರ್ಚಿಸಿದರು.
ಪೀಠದಲ್ಲಿನ ಗೊಂದಲ ನಿಮ್ಮಪರವಾಗಿ ಇರುವ ಭರವಸೆ ನೀಡಿದರು. ಇತ್ತೀಚೆಗೆ ಮುಕ್ತಿ ಮಂದಿರದ ಸಭೆಯಲ್ಲಿ ಉಜ್ಜಿನಿ ಪೀಠಕ್ಕೆ ತ್ರಿಲೋಚನ ಶಿವಾಚಾರ್ಯರೇ ಅಧಿಕೃತ ಪಟ್ಟಾಧ್ಯಕ್ಷರು ಎಂದು ರಂಭಾಪುರಿ ಮತ್ತು ಕೇದಾರ ಸ್ವಾಮಿಗಳು ಘೋಷಣೆ ಮಾಡಿದ ಹಿನ್ನಲೆಯಲ್ಲಿ ಗೊಂದಲ ಮೂಡಿದೆ.