ಸಂಸದ ಡಾ.ಜಾಧವ ಹುಟ್ಟಹಬ್ಬ: ರೋಗಿಗಳಿಗೆ ಹಣ್ಣುಹಂಪಲ ವಿತರಣೆ

ಚಿಂಚೋಳಿ,ಮಾ.24- ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾಧವ ಅವರ 62ನೇ ಹುಟ್ಟು ಹಬ್ಬದ ಪ್ರಯುಕ್ತ ಚಿಂಚೋಳಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲಗಳನ್ನು ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.
ಚಿಂಚೋಳಿಯ ಬಿಜೆಪಿ ಯುವ ಮೋರ್ಚಾ ತಾಲೂಕ ಅಧ್ಯಕ್ಷರಾದ ಸತೀಶರೆಡ್ಡಿ ತಾಜಲಾಪೂರ ಅವರ ನೇತೃತ್ವದಲ್ಲಿಂದು ಜರುಗಿದ ಈ ಕಾರ್ಯಕ್ರಮದಲ್ಲಿ ಹಣ್ಣು ಹಂಪಲಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ. ತಾಲೂಕ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ.ಮಹಮ್ಮದ್ ಗಫಾರ್. ಚಿಂಚೋಳಿ ಆಸ್ಪತ್ರೆಯ ವೈದ್ಯರಾದ ಡಾ. ಸಂತೋಷ್ ಪಾಟೀಲ್. ಬಿಜೆಪಿ ತಾಲೂಕ ಅಧ್ಯಕ್ಷರಾದ ಸಂತೋಷದ ಗಡಂತಿ. ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಜಗದೀಶ ಸಿಂಗ್ ಠಾಕೂರ. ಬಿಜೆಪಿ ಮುಖಂಡರಾದ ಅಶೋಕ ಚವ್ಹಾಣ. ಪ್ರೇಮಸಿಂಗ್ ಜಾಧವ. ರಾಜು ಪವಾರ. ಲಕ್ಷ್ಮಣ ಅವುಂಟಿ. ಚಂದ್ರಶೇಖರ ಗುತ್ತೆದಾರ ಗಾರಂಪಳ್ಳಿ. ಶ್ರೀಮಂತ ಕಟ್ಟಿಮನಿ. ಭೀಮಶೆಟ್ಟಿ ಮುರುಡ. ವಿಜಯಕುಮಾರ ರಾಠೋಡ ಶದಿಪೂರ. ಉಮೇಶ ಬೆಳಕೇರಿ. ಪವನ ಕುಮಾರ ಗೋಪನಪಳ್ಳಿ. ಅಭೀಷೇಕ ಮಲ್ಕನೊರ್. ಜುನೆದ. ಹನುಮಂತ ಗಾರಂಪಳ್ಳಿ. ಸುಧಾಕರ ಗೌಡ್ಸ್ ಬೈರಂಪಳ್ಳಿ. ಗುಂಡಪ್ಪ ಅವರಾದಿ. ಅಂಬರೀಶ ಒಲಗಿರಿ. ಶ್ರೀನಿವಾಸ ಚಿಂಚೋಲಿಕರ್, ಮತ್ತು ಅನೇಕ ಬಿಜೆಪಿ ಮುಖಂಡರು ಹಾಗೂ ಡಾ. ಉಮೇಶ ಜಾಧವ ಅಭಿಮಾನಿ ಬಳಗದ ಸದಸ್ಯರು ಇದ್ದರು.