ಕಲಬುರಗಿ:ಜು.17: ಮೀಸಲು ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಉಮೇಶ ಜಾಧವ ಅವರಿಗೆ ಕೇಂದ್ರದಲ್ಲಿ ಮಂತ್ರಿಸ್ಥಾನ ನೀಡಬಾರದು ಮತ್ತು ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲು ಟಿಕೇಟು ನೀಡಬಾರದು ಎಂದು ಮಾದಿಗ ಸಮಾಜ ಯುವ ಹೋರಾಟಗಾರ ರಾಜು ಎಸ್. ಕಟ್ಟಿಮನಿ ಅವರು ದೆಹಲಿ ಭಾ.ಜ.ಪಾ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಮನವಿ ಮಾಡಿದ್ದಾರೆ.
2023 ರ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ “ಸಂಸದರಾದ ಜಾಧವರವ ರು 9 ವಿಧಾನ ಸಭಾ ಮತಕ್ಷೇತ್ರದಲ್ಲಿ 8 ಕ್ಷೇತ್ರದ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಗಳ ಪರವಾಗಿ ಅಥವಾ ಪಕ್ಷದ ಪರವಾಗಿ ಚುನಾವಣೆಯ ಸಂಧರ್ಭದಲ್ಲಿ ಪಕ್ಷದ ಚಟುವಟಿಕೆಯಲ್ಲಿ ಭಾಗಿ ಆಗಿರುವುದಿಲ್ಲ. ಕೇವಲ ತನ್ನ ಪುತ್ರನ ಚಿಂಚೋಳಿ ಮತಕ್ಷೇತ್ರದಲ್ಲಿ ಒಂದೇ ಮತಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿರುತ್ತಾನೆ. ಆದುದರಿಂದ ಪಕ್ಷದಲ್ಲೆ ಇದ್ದು ಪಕ್ಷದ ವಿರೋಧ ಚಟುವಟಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ‘ಸಂಸದರಾದ ಜಾಧವರವರು ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡುವಲ್ಲಿ ವಿಫಲರಾಗಿರುತ್ತಾರೆ. ಪಕ್ಷದ ಕಾರ್ಯಕರ್ತರಿಗೂ ಕೂಡ ಸರಿಯಾಗಿ ಸ್ಪಂದನೆ ಮಾಡುವುದಿಲ್ಲ ಎಂದರು.
2024ರ ಚುನಾವಣೆಯಲ್ಲಿ ಜಾಧವ ಅವರಿಗೆ ಟಿಕೇಟ್ ನೀಡಿದರೆ ಬಿಜೆಪಿ ಪಕ್ಷಕ್ಕೆ ನಷ್ಟವಾಗುವುದು ಬಹುತೇಕ ಖಚಿತ ಹಾಗಾಗಿ ಈ ಮನವಿಯನ್ನು ಗಂಭಿರವಾಗಿ ಪರಿಗಣಿಸಬೇಕೆಂದು ಕಟ್ಟಿಮನಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.