ಸಂಸದ ಜಿಗಜಿಣಗಿ ಅವರನ್ನು ಹುಡುಕಿಕೊಡಿ: ಕುಂಟೋಜಿ

ಮುದ್ದೇಬಿಹಾಳ: ಮೇ.28: ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಸತತ ಗೆಲುವು ಸಾಧಿಸಿರುವ ಸಂಸದರಾದ ರಮೇಶ್ ಜಿಗಜಿಣಗಿ ಅವರು ಸುಮಾರು 2 ವರ್ಷದಿಂದ ನಮ್ಮ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಅವರನ್ನು ಕಂಡಿಲ್ಲ ಹಾಗಾಗಿ ಸಂಸದರು ಎಲ್ಲಿಯಾದರೂ ಕಳೆದುಹೋಗಿದ್ದಾರಾ ಎಂಬ ಶಂಕೆ ವ್ಯಕ್ತವಾಗುವಂತಾಗಿದೆ ಎಂದು ಜಿಲ್ಲಾ ಎನ್ ಎಸ್ ಯೂಐ ಸಂಘಟನೆಯ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಆರೋಪಿಸಿದ್ದಾರೆ.
ಪಟ್ಟಣದ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮತ್ತು ಇವತ್ತಿನ ಕೊರೊನಾ ಮಹಾಮಾರಿ ಪರಿಸ್ಥಿತಿಯಿಂದ ನಮ್ಮ ಜಿಲ್ಲೆಯ ಜನರು ಸಾವು ನೋವುಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಯಾವುದೇ ತರಹದ ಆಕ್ಸಿಜನ್, ವೆಂಟಿಲೇಟರ್ ಔಷಧದ ವ್ಯವಸ್ಥೆಯನ್ನು ಅಗತ್ಯಕ್ಕೆ ತಕ್ಕಂತೆ ಮಾಡಿಲ್ಲ . ಈ ನಡುವೆ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 90ರ ಗಡಿದಾಟಿದೆ. ಈ ಸೋಂಕು ನಿವಾರಣೆಗೆ ಬಳಸುವ ಲಿಪೆÇೀಸೋಮಲ್ ಅಂಪೆÇೀಟೆರಿಸಿನ್ -ಬಿ ಚುಚ್ಚುಮದ್ದನ್ನು ಸಹಾ ವ್ಯವಸ್ಥೆ ಮಾಡಿಕೊಡುತ್ತಿಲ್ಲ. ಕ್ಷೇತ್ರದಲ್ಲಿ ಜನರ ಕಷ್ಟ ಸುಖವನ್ನು ವಿಚಾರಿಸಿಲ್ಲ ,ಲಾಕ್ಡೌನ್ ಸಂಕಷ್ಟದಿಂದ ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ. ಮಾನವೀಯತೆ ಪಕ್ಕಕ್ಕಿಡಿ ಕ್ಷೇತ್ರದ ಜನತೆಯ ಸೇವೆ ಮಾಡುವುದು ಅವರ ಕರ್ತವ್ಯ, ಎಲ್ಲಿಯೂ ಒಂದು ಪೆÇಟ್ಟಣ ಆಹಾರವನ್ನು ನೀಡಿದ್ದನ್ನು ಯಾರು ಕಂಡಿಲ್ಲ, ಒಬ್ಬರಿಗೆ ಒಂದು ರೇಷನ್ ಕಿಟ್ ನೀಡಿದ ಉದಾಹರಣೆಯೂ ಇಲ್ಲ . ಇವೆಲ್ಲವನ್ನೂ ಮೀರಿ ಕ್ಷೇತ್ರದ ಜನತೆಗೆ ಕೈಗೆ ಸಿಗುತ್ತಿಲ್ಲ, ಇದನ್ನೆಲ್ಲಾ ನೋಡಿದರೆ ಅವರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.