ಸಂಸದ ಜಿಗಜಿಣಗಿಯವರಿಗೆ ಅಭಿವೃದ್ಧಿ ಬಗ್ಗೆ ಅಸಡ್ಡೆ: ಸಚಿವ ಎಂ.ಬಿ. ಪಾಟೀಲ ಟೀಕೆ

ವಿಜಯಪುರ, ಮೇ.3: ಸಂಸದ ರಮೇಶ ಜಿಗಜಿಣಗಿ ಅವರಿಗೆ ಅಭಿವೃದ್ಧಿ ಎಂದರೆ ಅಸಡ್ಡೆಯಿದೆ ಎಂದು ಕೈಗಾರಿಕೆ, ಮೂಲ ಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ ಮತ್ತು ಗುಣದಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿದರು.
ಅಭಿವೃದ್ಧಿ ನಮ್ಮ ಮೂಲಮಂತ್ರ. ಅದು ನಿತ್ಯ ನಿರಂತರವಾಗಿದೆ. ಕೋಮು ಭಾವನೆ ಕೆರಳಿಸುವವರಿಗೆ ತಕ್ಕ ಪಾಠ ಕಲಿಸಲು ಸರ್ವ ಜನಾಂಗದ ಶಾಂತಿಯ ತೋಟದ ಪಣ ತೊಟ್ಟಿರುವ ಕಾಂಗ್ರೆಸ್ಸನ್ನು ಬೆಂಬಲಿಸಿ ಸವಾರ್ಂಗೀಣ ಅಭಿವೃದ್ಧಿಗೆ ಕೈ ಜೋಡಿಸಬೇಕುಎಂದು ಅವರು ಹೇಳದರು.
ಸಂಸದ ರಮೇಶ ಜಿಗಜಿಣಗಿ ಅವರಿಗೆ ಅಭಿವೃದ್ಧಿ ಎಂದರೆ ಅಸಡ್ಡೆ ಎಂಬಂತಾಗಿದೆ. ಶಾಸಕ, ಸಂಸದರಾದವರು ತಮ್ಮ ಅಧಿಕಾರವಧಿಯಲ್ಲಿ ಕನಿಷ್ಠ ಶೇ. 80 ರμÁ್ಟದರೂ ಕೆಲಸ ಮಾಡಬೇಕು. ಆದರೆ, ಶೂನ್ಯ ಅಭಿವೃದ್ಧಿ ಮಾಡಿರುವವರಿಗೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಕ್ರಿಯಾಶೀಲರಾಗಿದ್ದು, ಬಹುಭಾμÉ ಬಲ್ಲವರಾಗಿದ್ದಾರೆ. ಇಂಥ ವಿದ್ಯಾವಂತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ವಿಜಯಪುರ ಜಿಲ್ಲೆಯಲ್ಲಿ ಬಹುದಿನಗಳಿಂದ ನನೆಗುದಿಗೆ ಬಿದ್ದಿರುª ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದರು.
ನರೇಂದ್ರ ಮೋದಿ ಅವರಿಗೆ 10 ವರ್ಷ ಅವಕಾಶ ನೀಡಿದ್ದು ಜನರಿಗ ಸಾಕು ಎನಿಸಿದೆ. ಹೀಗಾಗಿ ಅವರಿಗೆ ಈಗ ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ಭರವಸೆ ಮೂಡಿದೆ. ಮತದಾರರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಸನ್ನದ್ಧರಾಗಿದ್ದಾರೆ ಎಂದು ಅವರು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ವಿ. ವಿ. ಅರಕೇರಿ, ಡಾ. ಶಂಕ್ರಯ್ಯ ಹಿರೇಮಠ ಮಾತನಾಡಿದರು.
ಈ ಸಂದರ್ಭದಲ್ಲಿ ವಿ. ಎಚ್. ಬಿದರಿ, ಅಕ್ಬರ ಬಿದರಿ, ಅರುಣ ಶಿರಬೂರ, ಬಾಬು ಗಡದಾನ, ಆಶಾ ಕಟ್ಟಿಮನಿ, ಶಂಕರಗೌಡ ಪಾಟೀಲ, ಟಿ. ಆರ್. ಪಚ್ಚೆಣ್ಣವರ, ಸುರೇಶಗೌಡ ಪಾಟೀಲ, ಪ್ರಕಾಶ ಸೊನ್ನದ, ಮೈಬೂಬಸಾಬ ರಾಂಪುರ, ಶಿವಪ್ಪ ಮಗಾರಿ, ಸುರೇಶ ಕುರಿ, ಗೋಪಾಲ ಬಾವಿಮನಿ ಮುಂತಾದವರು ಉಪಸ್ಥಿತರಿದ್ದರು.