ಸಂಸದ ಜಾಧವ ವಿರುದ್ಧ ಜಾನೆ ಆರೋಪ

ಕಲಬುರಗಿ:ಎ.30: ದೇಶಾದ್ಯಂತ ಕರೋನಾ ಮಹಾಮಾರಿ ಎಲ್ಲಡೆ ಹಬ್ಬುತ್ತಿರುವು ಈ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಕಲಬುರಗಿಯಲ್ಲಿ ರಾಜ್ಯ ಸಭೆಯ ವಿರೋದ ಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ನಿರ್ಮಿಸಿದ ಇಎಸ್‍ಐ ಆಸ್ಪತ್ರೆಯನ್ನು ಕರೋನಾ ರೋಗಿಗಳ ಗುಣಮುಖಕಾಗಿ ಸಂಪೂರ್ಣವಾಗಿ ಬಳಸಬೇಕು. ಇಷ್ಟು ದಿನ ಕರೋನಾ ಲಸಿಕೆ ಮರೆತ್ತಿದ್ದ ಸಂಸದ ಡಾ, ಉಮೇಶ ಜಾಧವ ನಿನ್ನೆಯೇ ಯಾಕೆ ವಿಮಾನದಿಂದ ಕಲಬುರಗಿಗೆ ತಂದಿದ್ದಾರೆಂದು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಾಜೀವ ಜಾನೆ ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಸಾವಿರಾರು ಜನರು ಕರೋನಾ ಮಹಾಮಾರಿಯಿಂದ ಜನ ತತ್ತರಿಸಿ ಹೋಗುತ್ತಿದ್ದಾರೆ. ಈ ಮಹಾಮಾರಿಯಿಂದ ಜನ ಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡಿದೆ. ಇಂತಹ ಸಂದರ್ಭದಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಚಿತ್ತಾಪೂರ ಶಾಸಕ ಪ್ರೀಯಾಂಕ ಖರ್ಗೆಯವರ ವಿರುದ್ಧ ಹೇಳಿಕೆ ನೀಡುವುದು ನಿಲ್ಲಿಸಬೇಕೆಂದು ತಾಕೀತು ಮಾಡಿದ್ದಾರೆ.

ಕರೋನಾ ಮಹಾಮಾರಿಯನ್ನು ತೊಲಗಿಸಲು ಸಂಸದ ಉಮೇಶ ಜಾಧವ ಅವರು ನಾಟಕೀಯವಾದ ರಾಜಕೀಯ ಮಾಡುತ್ತಿದ್ದು ಜಿಲ್ಲೆಯಲ್ಲಿಯೇ ಇದ್ದು ಸಂಭಂಧ ಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡುವುದನ್ನು ಬಿಟ್ಟು, ತಮ್ಮ ಹಿಂಬಾಲಕರಾದ ವಿಠಲ ಜಾದವ್ ಮೂಲಕ ಖರ್ಗೆ ಕುಟುಂಬದ ವಿರುದ್ದ ಆರೋಪ ಮಾಡುತ್ತಿವುದು ಯಾವ ಪುರುಷಾರ್ಥಕ್ಕಾಗಿ ಎಂದರು ಜಾನೆ ಅವರು ಆರೋಪಿಸಿದ್ದಾರೆ.