ಸಂಸದ ಜಾಧವ ರಾಜಿನಾಮೆಗೆ ಹೊನ್ನಕೇರಿ ಆಗ್ರಹ

ಅಫಜಲಪುರ:ಮಾ.26 : ಕಲಬುರಗಿ ಜಿಲ್ಲೆಗೆ ಹಿಂದಿನ ಯುಪಿಎ ಸರ್ಕಾರ ಮತ್ತು ರಾಜ್ಯ ಸಭೆಯ ಪ್ರತಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆಜಿ ಅವರ ಅಭಿವೃದ್ಧಿ ಇಚ್ಚಾಶಕ್ತಿಯಿಂದ ಮಂಜೂರಾಗಿದ್ದ ಅನೇಕ ಜನಪರ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿಸುವಂತ ಯೋಜನೆಗಳು ಒಂದೊಂದಾಗಿ ಸ್ಥಳಾಂತರ ಮಾಡುವದರ ಮುಖಾಂತರ ಕಲಬುರಗಿ ಜಿಲ್ಲೆಗೆ ಮತ್ತು ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಕೊಡಲಿ ಪೆಟ್ಟು ಇವತ್ತಿನ ಬಿಜೆಪಿ ಸರ್ಕಾರ ಹಾಕಿದೆ ಎಂದು ತಾಪಂ ಉಪಾಧ್ಯಕ್ಷ ಭಿಮಾಶಂಕರ ಹೊನ್ನಕೇರಿ ಹೇಳಿದರು.

ಅಫಜಲಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಲಬುರಗಿ ಲೋಕಸಭಾ ಸಂಸದ ಉಮೇಶ್ ಜಾಧವ್ ಯಾವುದಕ್ಕೂ ಪ್ರಶಿಸದೆ, ಪ್ರತಿಭಟಿಸದೆ ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಎಲ್ಲವನ್ನೂ ಒಪ್ಪಿಕೊಂಡು ಕಲಬುರಗಿ ಅಭಿವೃದ್ಧಿ ಮತ್ತು ಯುವಕರ ಉದ್ಯೋಗದ ಭವಿಷ್ಯ ಬೀದಿ ಪಾಲು ಮಾಡುತ್ತಿದ್ದಾರೆ.ಕಲ್ಯಾಣ ಕರ್ನಾಟಕದ ಜನತೆಗೆ ಗೊತ್ತಿರುವ ಹಾಗೆ ಟೆಕ್ಸಟೈಲ್ ಪಾರ್ಕ್, AMS IIT ರೈಲ್ವೆ ವಿಭಾಗ,ಏಮ್ಸ್ ಆಸ್ಪತ್ರೆ ಬೇರೆಡೆಗೆ ಸ್ಥಳಾಂತರ,ಸೆಂಟರ್ ಫಾರ್ ಎಕ್ಸ್ ಲೆನ್ಸ್ ಬೆಂಗಳೂರಿಗೆ,ನಿರ್ಮಾಣವಾಗದ ಜವಳಿ ಪಾರ್ಕ್,ಇಂಧನ ಅಭಿವೃದ್ಧಿ ಕಛೇರಿ, ರಾಷ್ಟೀಯ ಹೂಡಿಕೆ ಉತ್ಪದನಾ ವಲಯ, ಬೀದರನಿಂದ ಸಿಪೆಟ್ ಬೇರೆ ಕಡೆಗೆ ಸ್ಥಳಾಂತರ, ರಾಯಚೂರಿನಿಂದ ಐಐಟಿ ಧಾರವಾಡಕ್ಕೆ ಸ್ಥಳಾಂತರ,ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನಕ್ಕೆ ಕತ್ತರಿ,ಭರ್ತಿಯಾಗದೆ ಉಳಿದಿರುವ ಸಾವಿರಾರು ಹುದ್ದೆಗಳು ಹೀಗೆ ದೊಡ್ಡ ದೊಡ್ಡ ಯೋಜನೆಗಳು ಸ್ಥಳಾಂತರಿಸಿ ಕೆಂದ್ರ ಸರ್ಕಾರ ಈ ಭಾಗದ ಜನರಿಗೆ ಮೊಸ ಮಾಡಿದೆ ಮತ್ತು ಜಿಲ್ಲೆಯ ಅಭಿವೃದ್ಧಿಯಲ್ಲಿ ಹತ್ತು ವರ್ಷ ಹಿಂದೆ ತಳ್ಳಿದಂತಾಗಿದೆ ಎಂದು ಅಸಮಾಧಾನ ಹೊರ ಹಾಕಿದದರು.ಬಿಜೆಪಿ ಕೆಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಅಧಿಕಾರದಲ್ಲಿದ್ದು ಕಲ್ಯಾಣ ಕರ್ನಾಟಕ ಮತ್ತು ವಿಷೇಶವಾಗಿ ಕಲಬುರಗಿ ಜಿಲ್ಲೆಗೆ ಯಾವುದೆ ಹೊಸ ಯೊಜನೆಗಳು ಕೊಡದೆ ಮೊಸ ಮಾಡುತ್ತಲೆ ಬರುತ್ತಿದೆ ಎಂದು ತಿಳಿಸಿದ ಅವರು ಇಲ್ಲಿನ ಬಿಜೆಪಿ ಶಾಸಕರು ಮತ್ತು ಸಂಸದರು ಜಾಣ ನಿದ್ರೆಯಿಂದ ಇನ್ನು ಎದ್ದಿಲ್ಲ ಎಂದ ಅವರು ಈಗಿನ ಸಂಸದ ಉಮೇಶ ಜಾದವ್ ಅವರು ಸಂಸದರಾದ ಮೇಲೆ ಯಾವುದಾದರೂ ಒಂದು ಜನರ ಕಣ್ಣಿಗೆ ಕಾಣುವಂತ ಯೋಜನೆ ಕಲಬುರಗಿ ಜಿಲ್ಲೆಗೆ ತಂದ ಉದಾಹರಣೆನೆ ಇಲ್ಲಾ ಎಂದು ಹೇಳಿದರು.ಹಾಗಾದರೆ ತಾವು ಸಂಸದರಾಗಿದ್ದು ಏನು ಪ್ರಯೋಜನ ಪ್ರಶ್ನಿಸಿದ ಅವರು ಜನರಿಗೆ ಭಾವನಾತ್ಮಕವಾಗಿ ಖರ್ಗೆಜಿ ಅವರ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಷ್ಟೇ ಅಲ್ಲದೇ ಕೋಲಿ ಮತ್ತು ಕುರುಬ ಸಮಾಜವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಿಯೆ ತಿರುತ್ತೆನೆಂದು ಕೆಲವು ಅಭಿವೃದ್ಧಿಯಲ್ಲಿ ಶೂನ್ಯ ಸೂತ್ತಿದ ಮತ್ತು ಅವರವರ ಸಮಾಜಗಳೆ ಒಪ್ಪದ ಮುಖಂಡರಿಂದ ಸುಳ್ಳು ಪ್ರಚಾರ ಮಾಡಿಸಿ ಅವರಿಂದ ಮತ ಪಡೆದು ಈಗ ಆ ಸಮುದಾಯಗಳಿಗೆ ಇನ್ನು ನ್ಯಾಯ ಒದಗಿಸಿಲ್ಲ ಅವರಿಗೂ ಮೊಸ ಮಾಡಿದ್ದಾರೆ ಹೀಗಾಗಿ ಜಿಲ್ಲೆಗೆ ಇಂತಹ ಅಭಿವೃದ್ಧಿ ಮಾಡದ ಸಂಸದ ಡಾ ಉಮೇಶ ಜಾಧವ್ ರಾಜಿನಾಮೆ ನೀಡಲಿ ಎಂದು ಆಗ್ರಹ ಪಡಿಸಿದ್ದಾರೆ.