ಸಂಸದ ಜಾಧವರಿಂದ ಕೋಲಿ ಸಮಾಜಕ್ಕೆ ಅನ್ಯಾಯ:ಲಚ್ಚಪ್ಪ ಜಮಾದಾರ

ಕಲಬುರಗಿ, ಏ 17: ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವರಿಂದ ಕೋಲಿ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಅವರು ಗಂಭೀರವಾಗಿ ಆರೋಪಿಸಿದರು.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಲೋಕಸಭೆಯಚುನಾವಣೆಯಲ್ಲಿ ಕುತಂತ್ರದಿಂದ ಕೋಲಿ ಸಮಾಜದ ಮತಗಳನ್ನುಪಡೆದು ಲೋಕಸಭೆ ಸದಸ್ಯರಾಗಿದ್ದಾರೆ. ಎಸ್.ಟಿ ಮಾಡಿಸಿಕೊಡುತ್ತೇನೆಂದು ಕೊಟ್ಟ ಭರವಸೆ ಈಡೇರಿಸದೇ ಕೋಲಿ ಸಮಾಜಕ್ಕೆ ಅನ್ಯಾಯಮಾಡಿದ್ದಾರೆ ಎಂದರು.
ಈ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಮಾತನಾಡುತ್ತಾ, ಕೋಲಿಸಮಾಜದ ಎಸ್.ಟಿ ಸೇರ್ಪಡೆಯ ವಿಷಯ ಕುರಿತು ರಾಜ್ಯಸಭೆಯ ಚರ್ಚೆಯ ಸಮಯದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆಜಿಯವರು ಗೈರು ಹಾಜರಿಯಾಗಿದ್ದಾರೆ ಎಂದು ಸುಳ್ಳು ಭಾಷಣ ಮಾಡಿ,ಖರ್ಗೆಯವರ ಮೇಲೆ ಗೂಬೆಕೂಡಿಸುತ್ತಿದ್ದಾರೆ.ಇಲ್ಲಿಯವರೆಗೆ ಕೋಲಿ ಸಮಾಜದ ಕಡತ ಲೋಕ ಸಭೆಯಲ್ಲಾಗಲಿ, ರಾಜ್ಯಸಭೆಯಲ್ಲಾಗಲಿ,ಚರ್ಚೆಗೆ ಬಂದೇ ಇಲ್ಲ ಎನ್ನುವುದು ನಮ್ಮ ಸಮಾಜದ ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಡಿದುಕೊಂಡು ಅನೇಕಘಟಾನುಘಟಿ ನಾಯಕರು ನಮ್ಮ ಸಮಾಜಕ್ಕೆ ನೀಡಿರುವ ಭರವಸೆಯಂತೆ ಎಸ್.ಟಿ ಮಾಡದೆ ಮೋಸ ಮಾಡಿದ್ದಾರೆ. ಕಳೆದ ಮಾರ್ಚ 16 ರಂದು ಕಲಬುರಗಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೋಲಿ ಸಮಾಜಕ್ಕೆ 5 ವರ್ಷಗಳ ಹಿಂದೆ ಕೊಟ್ಟ ಭರವಸೆ ನೆನಪೇ ಇರಲಿಲ್ಲ. ಬಿ.ಜೆ.ಪಿ ಪಕ್ಷಕ್ಕೆ
ಮತನೀಡಿ ಎಂದು ಮೋಸ ಮಾಡಿರುವ ಎನ್. ರವಿಕುಮಾರ ಈಗ ಎಲ್ಲಿದ್ದಿರಾ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಮಲಿಂಗ ನಾಟೀಕರ,ಪಿಂಟು ಜಮಾದಾರ,ಭೀಮಶಾ ಖನ್ನಾ,ಶಿವು ಧಣಿ,ಮಲ್ಲಿಕಾರ್ಜುನ ಗುಡಬಾ
ವಿಜಯಕುಮಾರ, ಜಮಾದಾರ ಸೇರಿದಂತೆ ಹಲವರಿದ್ದರು.