ಸಂಸದರ ವೇತನ ಕಡಿತ ಮಸೂದೆಗೆ ಅಂಗೀಕಾರ

ನವದೆಹಲಿ ಸೆಪ್ಟೆಂಬರ್ 15. ಕೊರೋನಾ ಮಹಾಮಾರಿಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಂಸದರ ಒಂದು ವರ್ಷದ ವೇತನ ಭತ್ಯೆ ಪಿಂಚಣಿ ಶೇಕಡಾ 30 ರಷ್ಟು ಕಡಿತ ಮಾಡುವ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಇಂದು ಅಂಗೀಕಾರ ದೊರೆಯಿತು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಮಸೂದೆಯನ್ನು ಮಂಡಿಸಿ ಅದರ ಅಗತ್ಯತೆಯನ್ನು ವಿವರಿಸಿದರು. ನಂತರ ಸದಸ್ಯರು ಮಸೂದೆಗೆ ಧ್ವನಿಮತದ ಮೂಲಕ ಅಂಗೀಕಾರ ನೀಡಿದರು.

ದಾನ ಧರ್ಮ ಎಂಬುದು ನಮ್ಮ ನಮ್ಮ ಮನೆಗಳಿಂದಲೇ ಆರಂಭವಾಗಬೇಕು ಎಂಬ ಮಾತಿದೆ. ಅದನ್ನ ಕಾರ್ಯರೂಪಕ್ಕಿಳಿಸಲು ಲೋಕಸಭೆ ಮತ್ತು ರಾಜ್ಯಸಭೆ ಗಳು ಬದ್ಧತೆಯನ್ನು ಪ್ರದರ್ಶಿಸಿ ವೆ ಎಂದರು.

ಗೊರವನ ದಿಂದ ದೇಶದಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ. ಇದನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದೆ.ಸಂಸದರ ವೇತನ ಮತ್ತು ಬತ್ತಿಯ ಕಡಿತವು ಇದರ ಒಂದು ಭಾಗವಾಗಿದೆ ಎಂದರು.

ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂಪಾಯಿ ಇದ್ದಾರೆ.
ಗರೀಬ್ ಕಲ್ಯಾಣ ಯೋಜನೆಯಡಿ ಯೋಜನೆ ಅಡಿ ದೇಶದ ಎಲ್ಲ ಬಡವರಿಗೆ ಬರುವ ನವೆಂಬರ್ ತಿಂಗಳವರೆಗೆ ಉಚಿತವಾಗಿ ಆಹಾರಧಾನ್ಯಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಿನಕೂಲಿ ಮೊತ್ತವನ್ನು ಹೆಚ್ಚಿಸಲಾಗಿದ್ದು ಇದಕ್ಕಾಗಿ 40 ಸಾವಿರ ಕೋಟಿ ರೂಪಾಯಿ ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.

ಮಸೂದೆಗೆ ಸದಸ್ಯರು ಧ್ವನಿಮತದ ಅಂಗೀಕಾರ ನೀಡಿದ ನಂತರ ಪ್ರಹ್ಲಾದ್ ಜೋಷಿಯವರು ಎಲ್ಲ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.