ಸಂಸದರ ಮೇಲೆ ಸುಳ್ಳು ಆರೋಪ: ಬಿಜೆಪಿ ಖಂಡನೆ

ಚಿಂಚೋಳಿ,ಮೇ.28- ಸಂಸದರಾದ ಡಾ.ಉಮೇಶ ಜಾಧವ ಅವರ ಮೇಲೆ ಇಲ್ಲಸಲ್ಲದ ಆಪಾದನೆ ಮಾಡುವುದು ಸರಿಯಲ್ಲ ಎಂದು ಬಿಜೆಪಿ ತಾಲೂಕ ಅಧ್ಯಕ್ಷರಾದ ಸಂತೋಷ ಗಡಂತಿ ಅವರು ಪ್ರತಿಕ್ರಿಯಿಸಿದ್ದಾರೆ.
ಕ್ಷೇತ್ರದ ಸಂಸದರು ತಮ್ಮ ವಯಸ್ಸಿಗಿ ಮಿತಿಮಿರಿ, ತಮ್ಮ ಆರೋಗ್ಯದ ಕಡೆ ಗಮನ ಹರಿಸದೇ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ತಮ್ಮ ಜೀವನದ ಹಂಗು ತೊರೆದು ಹಗಲುರಾತ್ರಿ ಕೋವಿಡ-19 ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.
ಬೆಂಗಳೂರಿನಿಂದ ಮೆಡಿಸಿನ್ ತರೋದಾಗಲಿ ರೆಮೀಡಿಸಿವರ ಹಾಗು ಸಂಬಂಧಿಸಿದ ಇಂಜಕ್ಷನ ತರೋದಾಗಲಿ ದೆಹಲಿಗೆ ತೆರಳಿ ಕಲಬುರ್ಗಿ ಜನತೆಗೆ ತೊಂದರೆ ಆಗಬಾರಂದೆಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಆಸ್ಪತ್ರೆಗಳಿಗೆ ಬೇಕಾದ ಎಲ್ಲಾ ಸಲಕರಣಿಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದಾರೆ.
ಇಲ್ಲಿನ ಆಸ್ಪತ್ರೆಯನ್ನು 500 ಬೆಡ್ ಗಳ ಹೆಚ್ಚಿಸುವುದು ಇತ್ಯಾದಿ ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯ ಕೆಲಸ ಮಾಡುತ್ತಿರುವ ಸಂಸದರಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಂಸದರಿಗೆ ಕೇಸ್ ವಾಪಾಸ ತೆಗೆದುಕೊಂಡ ಕ್ಷಮೇ ಕೇಳರಿ ಅಂತ ಹೇಳಿಕೆ ನೀಡುತ್ತಿರುವುದು ಯಾವನ್ಯಾಯ? ಈ ರೀತಿ ಸುಳ್ಳು ಆಪಾದನೆ ಮಾಡಿದ್ದಕ್ಕೆ ಮೊದಲು ನೀವು ಹೋಗಿ ಅವರ ಹತ್ತಿರ ಕ್ಷಮೇ ಕೇಳಿ ದಾಖಲಾಗಿರುವ ಪ್ರಕರಣದ ಬಗ್ಗೆ ಸಂಸದರಿಗೆ ಯಾವುದೇ ಸಂಬಂಧವಿಲ್ಲ.
ಪ್ರಜಾಪ್ರಭುತ್ವದಲ್ಲಿ ಟೀಕೆ ಇರಬೇಕು ಹೊರೆತು ಸುಳ್ಳಿನ ಆಪಾದನೆ ಇರಬಾರದು ಸುಳಿ ಇದೆ ಎಂದರೆ ಖಂಡಿತ ತನಿಖೆ ಆಗಬೇಕು, ಕ್ಷೇತ್ರದಾದ್ಯಂತ ಸಾವಿರಾರು ಜನ ಅಭಿಮಾನಿಗಳಿದ್ದಾರೆ ತಮ್ಮ ನಾಯಕನ ಮೇಲೆ ಸುಳ್ಳಿನ ಆಪಾದನೆ ಆಗಿರುವುದಕ್ಕೆ ಕೇಸ್ ದಾಖಲಿಸಿರಬುಹುದು ಇದರಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ.
ಇದರಲ್ಲಿ ನಮ್ಮ ಸಂಸದರ ಯಾವುದೇ ಪಾತ್ರವಿಲ್ಲ ಅವರ ಗಮನಕ್ಕು ಇಲ್ಲ, ಸಂಸದರು ಕಾಯಕವೇ ಕೈಲಾಸ ಎಂಬಂತೆ ಕಲಬುರ್ಗಿ ಜಿಲ್ಲೆಯ ಕ್ಷೇತ್ರದಲ್ಲಿರುವ ಎಲ್ಲಾ ತಾಲೂಕಗಳಿಗೆ ಭೇಟಿ ನೀಡಿ ಜನಸಾಮಾನ್ಯರ ಜೊತೆ ಚರ್ಚಿಸಿ ಪಾದರಸದಂತೆ ಓಡಾಡುತ್ತಿದ್ದಾರೆ ಕಲಬುರ್ಗಿ ಜನೆತೆಯ ಪಾಲಿಗೆ ಸಕ್ರಿಯವಾಗಿ ಸೇವೆಯನ್ನು ನೀಡುತ್ತಿದ್ದಾರೆ ಮತ್ತು ಸಾರ್ವಜನಿಕರ, ಬಡವರ ಕ್ಷೇತ್ರದಾದ್ಯಂತ ಜಾಗೃತಿ ಮೂಡಿಸಿ ಕರೋನ ಮುಕ್ತ ಕಲಬುರ್ಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಕೀಳು ರಾಜಕೀಯ ಬಿಡುವಂತೆ ಅವರು ಆಗ್ರಹಿಸಿದರು. ಸಾರ್ವಜನಿಕವಾಗಿ ಸಹಾಯ ಮಾಡುವ ಸಂಸದರ ಜೊತೆ ಕೈ ಜೋಡಿಸಿ, ಇಲ್ಲಸಲ್ಲದ ಆರೋಪ ಮಾಡೋದು ಬಿಡಬೇಕೆಂದು ಎಂದು ಸಂತೋಷ ಗಡಂತಿ. ಅವರು ವಿರೋಧ ಪಕ್ಷದವರಿಗೆ ಕುಟಿಕಿದರು.