ಸಂಸದರ ಪ್ರಯತ್ನದಿಂದ ಕೃಷ್ಣಾ-ತುಂಗಭದ್ರಾ ಬೈಪಾಸ್ ಚತುಷ್ಪಥ ರಸ್ತೆ

ರಾಯಚೂರು.ನ.೦೯- ಕೃಷ್ಣಾ ಸೇತುವೆಯಿಂದ ತುಂಗಭದ್ರಾ ಸೇತುವೆ ವರೆಗಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಟೆಂಡರ್ ಪ್ರಕ್ರಿಯೆ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ರಾಜಾ ಅಮರೇಶ್ವರ ನಾಯಕ ಅವರ ಪ್ರಯತ್ನಕ್ಕೆ ಸಂದ ಗೌರವವೆಂದು ರೈಲ್ವೆ ಸಲಹಾ ಸಮಿತಿ ಸದಸ್ಯರು ಹಾಗೂ ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಬಾಬುರಾವ್ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ೧೬೭ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ನಿರ್ಮಾಣಕ್ಕೆ ೧೬೩೩ ಕೋಟಿ ಟೆಂಡರ್ ಕರೆಯಲಾಗಿದೆ. ಸಂಸದ ರಾಜಾ ಅಮರೇಶ್ವರ ನಾಯಕ ಅವರ ನಿರಂತರ ಪ್ರಯತ್ನದಿಂದ ಈ ಟೆಂಡರ್ ಪ್ರಕ್ರಿಯೆ ನಡೆಯಲು ಸಾಧ್ಯವಾಗಿದೆ. ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಮಧ್ಯೆ ಸಾಕಷ್ಟು ವಾಹನ ದಟ್ಟತೆ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಿ ನಗರದ ಹೊರ ವಲಯದಲ್ಲಿ ಹಾದು ಹೋಗುವಂತೆ ಬೈಪಾಸ್ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ಅವರು, ಕೇಂದ್ರ ಸಚಿವರಾದ ನಿತೀನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದರು. ಇದರ ಪ್ರಯತ್ನದಿಂದಾಗಿ ಈ ಟೆಂಡರ್ ಪ್ರಕ್ರಿಯೆ ಕರೆಯಲಾಗಿದೆಂದು ಹೇಳಿದ ಅವರು, ರಾಜಾ ಅಮರೇಶ್ವರ ನಾಯಕ ಅವರ ಜನಪರ ಕಾಳಜಿಗೆ ಈ ರಸ್ತೆ ನಿದರ್ಶನವಾಗಿದೆಂದರು.