ಸಂಸದರ ದುರ್ನಡತೆ ಜಿಲ್ಲೆಗೆ ಅಪಮಾನ

ಕೋಲಾರ,ಸೆ.೨೬:ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ ಅವರ ದುರ್ನಡತೆ ಕೋಲಾರ ಜಿಲ್ಲೆಗೆ ಮಾಡಿದ ಅಪಮಾನ ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಸದರು ನಡೆದುಕೊಂಡ ರೀತಿ ಸಭ್ಯ ರಾಜಕಾರಣದ ಹಿಮ್ಮುಖ ಚಲನೆಯಾಗಿದೆ. ಸರ್ಕಾರಿ ಕಾರ್ಯಕ್ರಮದ ಸದ್ದುದ್ದೇಶವನ್ನು ಎಳ್ಳಷ್ಟು ಅರಿಯದೆ ವೈಯಕ್ತಿಕ ದ್ವೇಷ ಅಸೂಯೆ ಪ್ರತೀಕವಂತಿದ್ದ ಸಂಸದರ ವರ್ತನೆ ಇಡೀ ಪ್ರಜಾತಂತ್ರದ ವ್ಯವಸ್ಥೆಗೆ ಮಾರಕವಾಗಿದೆ. ಇಂತಹವರಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಕೋಲಾರಕ್ಕೆ ಆಗಮಿಸಿ ಬುದ್ದಿವಾದ ಹೇಳಬೇಕೆಂದು ಮನವಿ ಮಾಡಿದ್ದಾರೆ.