ಸಂಸದರು ಕೇಂದ್ರದ ಸೌಲಭ್ಯ ಪಡೆಯಲಿ;ಜಿಲ್ಲಾ ಕಾಂಗ್ರೆಸ್ ಮನವಿ

ದಾವಣಗೆರೆ.ಮೇ.೧೬; ಸಂಸದರು,ಶಾಸಕರು ಹಾಗೂ ಜಿಲ್ಲಾಡಳಿತ ಆಮ್ಲಜನಕ ಹಾಗೂ ಲಸಿಕೆ ಸಮರ್ಪಕ ಪೂರೈಕೆ ಮಾಡುತ್ತಿಲ್ಲ.ಸಂಸದರು ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಸೌಲಭ್ಯ ಪಡಯುವಲ್ಲಿ ವಿಫಲರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಜಿಲ್ಲೆಯಲ್ಲಿ ಲಸಿಕೆ ವಿತರಣೆ ವಿಳಂಬವಾಗುತ್ತಿದೆ.ವೆAಟಿಲೇಟರ್ ಸಮಸ್ಯೆಯಿದೆ, ಕೋವಿಡ್ ಸೆಂಟರ್ ಗಳಲ್ಲಿ , ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆಯಿದೆ ಆದರೆ ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಯಾವುದೇ ಸಮಸ್ಯೆಯಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆರೊಪಿಸಿದರು. ಜನರ ಸಮಸ್ಯೆ ಸಂಸದರಿಗೆ ತಿಳಿಯಬೇಕಾದರೆ ಜನರಿಗೆ ಸಂಸದರ ಮೊಬೈಲ್ ನಂಬರ್ ನೀಡಬೇಕು ಆಗ ಜನರ ಕಷ್ಟ ತಿಳಿಯಲು ಸಾಧ್ಯ ಅದನ್ನು ಬಿಟ್ಟು ಇಲ್ಲದ ವ್ಯವಸ್ಥೆಯನ್ನು ಇದೇ ಎಂದು ಬಿಂಬಿಸುತ್ತಿರುವುದು ಸರಿಯಲ್ಲ.ಜನತಾ ಕರ್ಫ್ಯೂ ಮತ್ತು ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬದವರಿಗೆ ಆರ್ಥಿಕ ಸಹಾಯ ಮತ್ತು ಪ್ಯಾಕೇಜ್ ಘೋಷಣೆ ಮಾಡಬೇಕು.ಮೊದಲು ಸಮರ್ಪಕ ಲಸಿಕೆ ಪೂರೈಕೆ ಮಾಡಬೇಕು.ಲಸಿಕೆ ಖಾಸಗಿಯಾಗಿ ದೊರೆತರೆ ಶ್ರೀಮಂತರು ದುಡ್ಡು ಕೊಟ್ಟು ಖರೀದಿಸುತ್ತಾರೆ ಆಗ ಬಡವರಿಗೆ ಉಚಿತವಾಗಿ ಸಿಗುತ್ತದೆ. ಜಿಲ್ಲಾಧಿಕಾರಿಗಳು ದಾನಿಗಳಿಂದ ಸೌಲಭ್ಯಕ್ಕಾಗಿ ಮನವಿ ಮಾಡುವುದನ್ನು ನೋಡಿದರೆ ತಿಳಿಯುತ್ತಿದೆ ರಾಜ್ಯ ಸರ್ಕಾರದ ಅವ್ಯವಸ್ಥೆ ಬಗ್ಗೆ ಎಂದು ಅಸಮಾಧಾನ ಹೊರಹಾಕಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಮಾತನಾಡಿ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಿ ಲಸಿಕೆ ತರಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಕೋರೊನಾ ಪರೀಕ್ಷೆ ಕಡಿಮೆ ಮಾಡಲಾಗುತ್ತಿದೆ ಇದರಿಂದ ಸೊಂಕಿತರ ಸಂಖ್ಯೆ ಸಮರ್ಪಕವಾಗಿ ಸಿಗುತ್ತಿಲ್ಲ.ಜಿಲ್ಲಾಡಳಿತ ಸೋಂಕಿತರ ಸಂಖ್ಯೆ ಕಡಿಮೆ ತೋರಿಸಲು ಈ ರೀತಿ ಮಾಡುತ್ತಿದ್ದಾರೆ ಎಂದರು.
ಪಾಲಿಕೆ ವಿಪಕ್ಷ ನಾಯಕ ಎ,ನಾಗರಾಜ್ ಮಾತನಾಡಿ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಗೂ ಸಿಬ್ಬಂದಿ ಕೊರತೆಯಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.ಜಿಲ್ಲಾಸ್ಪತ್ರೆಯಲ್ಲಿ ೩೮ವೆಂಟಿಲೇಟರ್ ಗಳಿವೆ ಅದರಲ್ಲಿ ಕೇವಲ ೧೨ ಮಾತ್ರ ಸುಸ್ಥಿತಿಯಲ್ಲಿವೆ.ಕೆಲವು ಕೆಟ್ಟಿವೆ ಚೆನ್ನಾಗಿರುವುದನ್ನು ಬಳಕೆ ಮಾಡಲು ತಜ್ಞ ಸಿಬ್ಬಂದಿಯ ಕೊರತೆಯಿದೆ.ಕೂಡಲೇ ಜಿಲ್ಲಾಡಳಿತ ಹಾಗೂ ಆಡಳಿತ ವರ್ಗ ಸಿಬ್ಬಂದಿ ಕೊರತೆ ನೀಗಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ನಾಗೇಂದ್ರ, ಆಯೂಬ್ ಪೈಲ್ವಾನ್ ಇದ್ದರು.
ಬಾಕ್ಸ್
ಶಾಸಕರಾದ ರೇಣುಕಾಚಾರ್ಯ ಅವರು ಹೊನ್ನಾಳಿಯಲ್ಲಿ ಪ್ರಚಾರಪ್ರಿಯರಂತೆ ವರ್ತಿಸುತ್ತಿದ್ದಾರೆ.ಒಬ್ಬ ಜನಪ್ರತಿನಿಧಿಯ ಜವಾಬ್ದಾರಿಯ ಕರ್ತವ್ಯವನ್ನು ಮಾಡುತ್ತಿದ್ದಾರೆ ಆದರೆ ಅದನ್ನೇ ಪ್ರಚಾರದ ಅಸ್ತçವಾಗಿ ಬಳಕೆ ಮಾಡುತ್ತಿದ್ದಾರೆ.ಹೊನ್ನಾಳಿಯಲ್ಲಿ ವೈದ್ಯರ ಹಾಗೂ ಶುಶ್ರೂಷಕರ ಕೊರತೆಯಿದೆ.ಅಲ್ಲಿಯ ವಾಸ್ತವ ಸ್ಥಿತಿಯೇ ಬೇರೆಯಿದೆ.ಅದನ್ನು ಮರೆಮಾಚಿ ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿರುವುದು ಖಂಡನೀಯ.
– ಹೆಚ್.ಬಿ ಮಂಜಪ್ಪ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು.