ಸಂಸದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ

ಮೈಸೂರು, ಡಿ.26: ಸಂಸದ ಪ್ರತಾಪ್ ಸಿಂಹ ಮುಡಾ ಅಧಿಕಾರಿಗಳೊಂದಿಗೆ ತೆರಳಿ ಇಂದು ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದರು.
ನಗರದ ಹೆಬ್ಬಾಳ್ ಜಂಕ್ಷನ್ ನಿಂದ ಕಾಳಿದಾಸ ರಸ್ತೆಯವರೆಗೆ ಅಂದಾಜು 3.58 ಕೋಟಿ ಮೊತ್ತದ ಸುಮಾರು 3.15ಕೀ.ಮಿ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಮುಡಾ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು.
ಬಳಿಕ ಅಧಿಕಾರಿಗಳಿಗೆ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.