ಸಂಸದರಿಂದ ನೂತನ ಆರ್‌ಡಿಎ ಕಟ್ಟಡ ಉದ್ಘಾಟನೆ

ರಾಯಚೂರು, ಜ.೧೮- ನೂತನ ನಗರಾಭಿವೃದ್ದಿ ಪ್ರಾಧಿಕಾರ ಕಟ್ಟಡವನ್ನು ಸಂಸದ ಅಮರೇಶ ನಾಯಕ ಅವರು ಉದ್ಘಾಟನೆ ನೆರೆವೇರಿಸಿದರು.
ತಿಮ್ಮಪ್ಪ ನಾಡಗೌಡ ಹಾಗೂ ಹರೀಶ ನಾಡಗೌಡ ನೇತೃತ್ವದಲ್ಲಿ ೨೦೨೨-೨೩ ಸಾಲಿನ ಸಾಮಾನ್ಯ
ಆಡಳಿತ ನಿಧಿ ಯೋಜನೆಯಡಿಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಅದ್ದೂರಿಯಾಗಿ ಜರುಗಿತು.
ಉದ್ಘಾಟನೆ ನೆರೆವೇರಿಸಿ ಮಾತನಾಡಿದ ಅವರು, ನಗರದಲ್ಲಿ ಅಭಿವೃದ್ಧಿ ಪರ್ವ ಕೆಲಸಗಳು ಆಗಬೇಕು. ಸ್ಥಳೀಯ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಬೇಕು.ಆಗ ಮಾತ್ರ ನಗರ ಹಾಗೂ ಪಟ್ಟಣಗಳು ತೀವ್ರಗತಿಯಲ್ಲಿ ಅಭಿವೃದ್ಧಿಯಾಗುತ್ತದೆ ಎಂದರು.ನಗರ ಅಭಿವೃದ್ಧಿ ಮೂಲಕ ಜನರಿಗೆ ಸಂಪನ್ಮೂಲ ಒದಗಿಸಲು ಸಾಧ್ಯವಾಗುತ್ತದೆ ಎಂದ ಅವರು ನಗರ ಅಭಿವೃದ್ಧಿಯಲ್ಲಿ ಶಾಸಕ ಶಿವರಾಜ ಪಾಟೀಲ್ ಪಾತ್ರ ಪ್ರಮುಖವಾಗಿದೆ. ನಗರಕ್ಕೆ ಹೆಚ್ಚಿನ ಅನುದಾನದ ತರುವುದರ ಮೂಲಕ ನಗರ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು. ರಾಯಚೂರು ಹಾಗೂ ಬೆಳೆಗಾವಿ ಅಭಿವೃದ್ಧಿಗೆ ೧೨ ಕೋಟಿ ಸಾವಿರ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಶೀಘ್ರದಲ್ಲಿ ನೆರೆವೇರಿಸಲಾಗುವುದು. ನಗರ ಅಭಿವೃದ್ಧಿಗೆ ನಗರಾಭಿವೃದ್ದಿ ಪ್ರಾಧಿಕಾರ ಹೆಚ್ಚಿನ ಮಹತ್ವ ನೀಡುತ್ತೇವೆ ಎಂದರು. ತಿಮ್ಮಪ್ಪ ನಾಡಗೌಡ ನೇತೃತ್ವದಲ್ಲಿ ನೂತನ ಕಟ್ಟಡ ಮಾದರಿಯಾಗಿದೆ ಎಂದರು.
ಶಾಸಕ ಶಿವರಾಜ ಪಾಟೀಲ್ ಮಾತನಾಡಿ ಇಚ್ಛಾ ಶಕ್ತಿ ಮೂಲಕ ಅಭಿವೃದ್ಧಿ ಪರ ಕೆಲಸ ಮಾಡುವರಲ್ಲಿ ತಿಮ್ಮಪ್ಪ ನಾಡಗೌಡ ಮೊದಲಿಗರು. ತಿಮ್ಮಪ್ಪ ನಾಡಗೌಡ ಅವರು ಯಾವುದೇ ಕೆಲಸವನ್ನು ಜವಾಬ್ದಾರಿಯುತವಾಗಿ ಹಗಲಿರಲು ಶ್ರಮಿಸಿ ಅಚ್ಚುಕಟ್ಟಾಗಿ ನೆರೆವೇರಿಸಿತ್ತಾರೆ. ತಿಮ್ಮಪ್ಪ ನಾಡಗೌಡ ಅವರು ಅತ್ಯಂತ ಸರಳ ಸಜ್ಜನಿಕೆ ಮತ್ತು ತಾಳ್ಮೆ ಇರುವಂತ ವ್ಯಕ್ತಿ ಇತರ ರಾಜಕಾರಣಿಗಳಿಗೆ ಅವರು ಮಾದರಿಯಾಗಿದ್ದಾರೆ.ದಶಕಗಳಿಂದ ಅಸ್ತಿತ್ವದಲ್ಲಿರುವ ಮತ್ತು ಸಾರ್ವಜನಿಕರಿಗೆ ಅತ್ಯಂತ ಅಗತ್ಯವಾದ ಪ್ರಾಧಿಕಾರಕ್ಕೆ ಒಂದು ಸ್ವಂತ ಕಟ್ಟಡ ಹೊಂದಿರದ ಬಗ್ಗೆ ಗಂಭೀರ ಚರ್ಚೆ ನಡೆಸಿದ ಅವರು ತಮ್ಮ ಅವಧಿಯಲ್ಲಿ ಪ್ರಾಧಿಕಾರದ ನೂತನ ಕಟ್ಟಡನಿರ್ಮಿಸಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ತಮ್ಮ ಕಾಲಾವಧಿಯಲ್ಲಿ ಶಾಶ್ವತ ನೆನಪು ಉಳಿಯುವಂತಹ ಮತ್ತು ಜನರಿಗೆ ಅನುಕೂಲವಾಗುವಹಾಗೂಪ್ರಾಧಿಕಾರದ ಸಂಪನ್ಮೂಲ ಉಳಿಸುವ ಉದ್ದೇಶಿತ ಯೋಜನೆ ಅನುಷ್ಠಾನಗೊಳಿಸುವ ತೀರ್ಮಾನ ಕೈಗೊಂಡರು.
ಅವರ ನೇತೃತ್ವದಲ್ಲಿ ನೂತನ ಕಟ್ಟಡ ಮಾದರಿಯಾಗಿದೆ.
ಕಾರ್ಯಕ್ರಮದ ದಿವ್ಯಾ ಸನ್ನಿದ್ಯಾವನ್ನು ಶಾಂತಮಲ್ಲ ಶಿವಾಚಾರ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ ಅಮರೇಶ ನಾಯಕ, ನಗರಾಭಿವೃದ್ದಿ ಪ್ರಾಧಿಕಾರ ತಿಮ್ಮಪ್ಪ ನಾಡಗೌಡ, ನಗರಸಭೆ ಅಧ್ಯಕ್ಷ ಲಲಿತಾ ಕಡಗೋಳ್, ಎಪಿಎಂಸಿ ಅಚ್ಚುತ್ ರೆಡ್ಡಿ, ರಾಚೋಟಿ ಅಭಿನವ ರಾಚೋಟಿ ವೀರಶಿವಾಚಾರ್ಯ ಮಹಾಸ್ವಾಮಿಗಳು ರವಿ ಜಾಲ್ದಾರ್ ಹಾಗೂ ಆರ್ ಡಿ ಎ ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು.