ಸಂಸದರಿಂದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

ರಾಯಚೂರು,ಜ.೨೨- ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಂಸತ್ ಕೆಲೋ ಇಂಡಿಯಾ ಅಡಿಯಲ್ಲಿ ರಾಯಚೂರು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮವನ್ನು ಸಂಸದ ಸದಸ್ಯರಾದ ರಾಜಾ ಅಮರೇಶ್ವರ ನಾಯಕ್, ಶಾಸಕ ಡಾ. ಶಿವರಾಜ್ ಪಾಟೀಲ್ ಅವರು ಉದ್ಘಾಟನೆಯನ್ನು ಮಾಡಿದರು.
ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎ. ಪಾಪರೆಡ್ಡಿ, ಎನ್.ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಶಂಕ್ರಪ್ಪ, ನಗರ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷರ ರಾಜೇಶ್ವರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶರಣಮ್ಮ ಕಾಮರೆಡ್ಡಿ, ಡಿವೈಎಸ್.ಪಿ ವೆಂಕಟೇಶ್, ಡಿಡಿಪಿಐ ವೃಷಬೇಂದ್ರಯ್ಯ, ನಗರ ಸಭೆ ಆಯುಕ್ತರು ಗುರುಲಿಂಗಪ್ಪ,ಕಡಗೋಲು ಆಂಜನೇಯ,ಸೇರಿದಂತೆ ಅನೇಕರಿದ್ದರು.
ಈ ವಾಲಿಬಾಲ್ ಪಂದ್ಯಾವಳಿಗಳಿಗೆ ರಾಯಚೂರು ಜಿಲ್ಲೆಯಾದ್ಯಂತ ಮಹಿಳಾ ಮತ್ತು ಪುರುಷ ವಾಲಿಬಾಲ್ ಟೀಮ್ ಗಳು ಸುಮಾರು ೩೦ ತಂಡಗಳು ಭಾಗವಹಿಸಿದ್ದವು. ಸಂಜೆ ಪಂದ್ಯಾವಳಿಗಳ ಬಹುಮಾನ ಮತ್ತು ಟ್ರೋಫಿ ವಿತರಣೆ ಮಾಡಲಾಗುವುದು.