ಸಂಸತ್‌ನಲ್ಲಿ ಕೋಲಾಹಲ ಕಲಾಪ ಮುಂದೂಡಿಕೆ

ನವದೆಹಲಿ, ಜು.೨೨- ದೂರವಾಣಿ ಕದ್ದಾಲಿಕೆ, ಕೃಷಿ ಕಾಯ್ದೆಗಳ ವಿರೋಧಿಸಿ ದೆಹಲಿಯಲ್ಲಿ ರೈತರ ಪ್ರತಿಭಟನೆ ಸೇರಿದಂತೆ ವಿವಿಧ ವಿಷಯಗಳು ಸಂಸತ್ತಿನ ಉಭಯ ಸದನಗಳಲ್ಲಿ ಕಾವೇರಿದ ಚರ್ಚೆ, ನಡೆದು ಆರೋಪ-ಪ್ರತ್ಯಾರೋಪ ಸುರಿಮಳೆಯಾದ ಹಿನ್ನೆಲೆಯಲ್ಲಿ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು.
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಉಭಯ ಸದನಗಳಲ್ಲಿ ಕಾಂಗ್ರೆಸ್ ,ಟಿ ಎಂಸಿ ,ಎನ್ ಸಿಪಿ,ಸಿಎಂ ಐ ಸೇರಿದಂತೆ ವಿವಿಧ ವಿಷಯಗಳ ಕುರಿತು ನೋಟೀಸ್ ನೀಡಿ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ ವಿಷಯ ಆರೋಪ ಪತ್ಯಾರೋಪಕ್ಕೆ ವೇದಿಕೆಯಾಯಿತು.

ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಬೇಡಿಕೆಗೆ ಸಭಾಧ್ಯಕ್ಷರುಗಳು ,ಮೊದಲು ನಿಗಧಿತ ಕಲಾಪ ಆ ನಂತರಷ್ಟೇ ಬೇರೆ ನೋಟೀಸ್ ಕೈಗೆತ್ತಿಕೊಳ್ಳಲಾಗುವುದು ಎನ್ನುವ ಕಾರಣ ನೀಡಿ ಪ್ರತಿ ಪಕ್ಷಗಳ ಬೇಡಿಕೆ ತಳ್ಳಿ ಹಾಕಲಾಯಿತು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಗದ್ದಲ ಕೋಲಾಹಲ ನಡೆದ ಕೊನೆಗೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಮಾಡಿದ ಪ್ರಸಂಗ ನಡೆಯಿತು.

ಬೆಳಗಿನ ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಪ್ರಸಕ್ತ ವಿಷಯಗಳ ಕುರಿತು ಚರ್ಚೆ ಅವಕಾಶ ನೀಡುವಂತೆ ನೋಟಿಸ್ ನೀಡಿದ್ದು ಅದರಂತೆ ದಿನದ ಎಲ್ಲಾ ಕಲಾಪಗಳನ್ನು ಬದಿಗೊತ್ತಿ ನಾವು ನೀಡಿರುವ ನೋಟೀಸ್ ಮೇಲೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದರು.

ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಬೇಡಿಕೆಯನ್ನು ಆಡಳಿತ ಪಕ್ಷದ ಸದಸ್ಯರು ತಳ್ಳಿಹಾಕಿದರು ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಗದ್ದಲ ಕೋಲಾಹಲ ನಡೆಯಿತು.

ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ಗದ್ದಲ ಕೋಲಾಹಲ ನಡೆದ ಹಿನ್ನೆಲೆಯಲ್ಲಿ ಕಲಾಪವನ್ನು ಸರಿದಾರಿಗೆ ತರಲು ಸಭಾದ್ಯಕ್ಷ ಓಂ ಬಿರ್ಲಾ ಅವರು ಕೆಲ ಕಾಲ ಮುಂದೂಡಿದರು.

ರಾಜ್ಯಸಭಯಲ್ಲಿ ಇದೇ ಪರಿಸ್ಥಿತಿ:

ರಾಜ್ಯಸಭೆಯಲ್ಲೂ ಕೂಡ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಮುಂಚಿತವಾಗಿಯೇ ನೋಟಿಸ್ ನೀಡಿ ವಿಷಯ ಚರ್ಚೆಗೆ ಮನವಿ ಮಾಡಿದ್ದರೂ ಸಭಾಪತಿಗಳು ಅವಕಾಶ ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಪಕ್ಷದ ಸದಸ್ಯರ ಬೇಡಿಕೆಯನ್ನು ಆಡಳಿತ ಪಕ್ಷದ ಸದಸ್ಯರು ತಳ್ಳಿ ಹಾಕಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆಯಿತು. ಕೋವಿಡ್ ಸೋಂಕಿನ ಸಾವಿನ ವಿಷಯ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಪ್ರತಿಯೊಂದು ವಿಷಯದಲ್ಲಿ ದೇಶದ ಜನರಿಗೆ ಸುಳ್ಳು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಕಲಾಪ ಸರಿದಾರಿಗೆ ಬರದ ಹಿನ್ನೆಲೆಯಲ್ಲಿ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.